ತಟ್ಟಿದ್ದ ಗುಂಡಿನ ಬಿಸಿ, ಗಡಚಿರೋಲಿಯಲ್ಲಿ ಕೆಂಪು ಉಗ್ರರ ಶರಣಾಗತಿ
ಗಡಚಿರೋಲಿ: ಕೇಂದ್ರ ಸರ್ಕಾರ ನಕ್ಸಲರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ದೇಶದಲ್ಲಿ ಕೆಂಪು ಉಗ್ರರ ಉಪಟಳ ಕಡಿಮೆಯಾಗುತ್ತ ಬಂದಿದ್ದು, ಇದೀಗ ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ಐದು ಉಗ್ರರು ಪೊಲೀಸರಿಗೆ ಶರಣಾಗತಿಯಾಗಿದ್ದಾರೆ.
ಶರಣಾಗತಿಯಾಗಿರುವ ಕ್ರಾಂತಿಕಾರಿ ಮುಖಂಡರ ಪ್ರತಿಯೊಬ್ಬರ ತಲೆಗೆ 25 ಲಕ್ಷ ಘೋಷಣೆ ಮಾಡಲಾಗಿತ್ತು. ಆದ್ದರಿಂದ ಜೀವ ಉಳಿಸಿಕೊಳ್ಳಲು ನಕ್ಸಲರು ಇದೀಗ ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ. ಈ ಕುರಿತು ಬುಧವಾರ ಮಹಾರಾಷ್ಟ್ರ ಪೊಲೀಸರು ಘೋಷಣೆ ಮಾಡಿದ್ದು, ಎಲ್ಲರನ್ನು ಕೆಲ ದಿನಗಳವರೆಗೆ ವಿಚಾರಣೆ ನಡೆಸಿ, ನಂತರ ಸಮಾಜದ ಮುಖ್ಯವಾಹಿನಿಗೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.
ನಕ್ಸಲ್ ಪ್ಲಟೂನ್ 4 ‘ಎ’ ತಂಡದ ಕಮಾಂಡರ್ ಸೈನು ಅಲಿಯಾಸ್ ಮಿರ್ಗು ಜಿರು ವಡೆಹಾ(35) ಶರಣಾಗಿದ್ದು, ಈತನ ವಿರುದ್ಧ 17 ಕೊಲೆ ಪ್ರಕರಣಗಳು ದಾಖಲಾಗಿವೆ. ಈತನ ತಲೆಗೆ 12 ಲಕ್ಷ ಘೋಷಣೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಅರ್ಜುನ್ ಬರ್ಸಯ್ಯ ಪೊಯಾ(25), ಚಾಯಾ ಅಲಿಯಾಸ್ ರಾಜೆ ದೇವು ಕುಡಿಯಾತಿ (23), ವೇಣು ಅಲಿಯಾಸ್ ಬಿಜಾವು ಸುಂದರ್ ಕೊವಾಚಿ (23) ಶರಣಾದವರು.
ಕಳೆದ ತಿಂಗಳು ಇಬ್ಬರು ನಕ್ಸರಲನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಮುಗಿಸಿದ ನಂತರ ಎರಡನೇ ಬಾರಿಗೆ ನಕ್ಸಲರು ಶರಣಾಗತಿಯಾಗುತ್ತಿರುವುದು. 22 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಗಡಚಿರೋಲಿಯಲ್ಲಿ ಈ ಮಟ್ಟದಲ್ಲಿ ನಕ್ಸಲರ ಶರಣಾಗತಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Leave A Reply