ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಒಬ್ಬ ಐಎಎಸ್ ಅಧಿಕಾರಿಯನ್ನು ನಡೆಸಿಕೊಳ್ಳುವ ರೀತಿ ಇದೇನಾ?
ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ದಕ್ಷ ಅಧಿಕಾರಿಗಳನ್ನು ಹೇಗೆ ಕೆಟ್ಟದಾಗಿ ನಡೆಸಿಕೊಂಡರು ಎಂಬುದು ಇಡೀ ರಾಜ್ಯದ ಜನರಿಗೇ ಗೊತ್ತಿದೆ. ಡಿ.ಕೆ.ಅನುಮಾನಾಸ್ಪದ ಸಾವಿನ ತನಿಖೆ ವಿಫಲ, ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ, ಸಿ.ಶಿಖಾ ವರ್ಗಾವಣೆ, ಅನುಪಮಾ ಶೆಣೈ ಮಾಡಿದ ಆರೋಪಗಳೆಲ್ಲವೂ ರಾಜ್ಯ ಸರ್ಕಾರದ ಅಧಿಕಾರ ದರ್ಪಕ್ಕೆ ಹಿಡಿದ ಕನ್ನಡಿಯಾಗಿದೆ.
ಈಗಲೂ ಸರ್ಕಾರ ತನ್ನ ದರ್ಪವನ್ನು ಮುಂದುವರಿಸಿದ್ದು, ಒಬ್ಬ ಐಎಎಸ್ ಅಧಿಕಾರಿಯನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ಕಳೆದ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಯೊಬ್ಬರನ್ನು ಅವಮಾನಗೊಳಿಸಿದ ಹಿನ್ನೆಲೆಯಲ್ಲಿ ಆ ಅಧಿಕಾರಿ ಮನನೊಂದು ರಜೆ ಮೇಲೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಗಣಿ ಕಾರ್ಯದರ್ಶಿ ರೇಜೇಂದರ್ ಕುಮಾರ್ ಕಟಾರಿಯಾ ಅವರು ಸಚಿವರೊಬ್ಬರಿಗೆ ಅನುಕೂಲವಾಗುವ ಹಾಗೆ ಗಣಿ ಗುತ್ತಿಗೆ ನೀಡಲಿಲ್ಲ ಎಂಬ ಕಾರಣಕ್ಕಾಗಿ ಆ ಸಚಿವರು ಅವಮಾನ ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆದರೆ ಈ ಕುರಿತು ಆ ಸಚಿವ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಧಿಕಾರಿಯ ಮೇಲೆಯೇ ಆರೋಪ ಮಾಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಕಟಾರಿಯಾ ಅವರು ಬರೀ ನಿಯಮ ಪುಸ್ತಕವನ್ನೇ ಉಲ್ಲೇಖಿಸುತ್ತಿದ್ದು, ಇತರ ಅಧಿಕಾರಿಗಳು ಸಹ ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪ್ರೇರಣೆ ಬಿಟ್ಟು ಬರೀ ನಿಯಮಾವಳಿಯನ್ನೇ ಉಲ್ಲೇಖಿಸಿದ ಕಾರಣ ಖಾರವಾಗಿ ಪ್ರತಿಕ್ರಿಯಿಸಬೇಕಾಗಿ ಬಂತು ಎಂದು ತಿಳಿಸಿದ್ದಾರೆ.
ಆದರೆ, ತಮಗೆ ಅನುಕೂಲವಾಗದಂತೆ ಗಣಿ ಗುತ್ತಿಗೆ ನೀಡಲು ಒಪ್ಪದ್ದೇ ಅಧಿಕಾರಿಯನ್ನು ಅವಮಾನಿಸಲು ಕಾರಣ ಎಂದು ತಿಳಿದುಬಂದಿದೆ. ಅದರಲ್ಲೂ ಮೊದಲಿನಿಂದಲೂ ದಕ್ಷ ಅಧಿಕಾರಿಗಳಿಗೆ ಸರ್ಕಾರ ನೀಡಿದ ಕಿರುಕುಳ ನೋಡಿದರೆ ಸರ್ಕಾರದ್ದೇ ತಪ್ಪು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಷ್ಟಕ್ಕೂ ಅಧಿಕಾರಿಯೊಬ್ಬರು ನಿಯಮಾವಳಿ ಉಲ್ಲೇಖಿಸಿ ಕಾರ್ಯನಿರ್ವಹಿಸುವುದೇ ತಪ್ಪು ಎಂದರೆ ಹೇಗೆ?
Leave A Reply