• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನರೇಂದ್ರ ನಾಯಕ್ ಕ್ಷಮೆಯಾಚಿಸಲಿ ಅಥವಾ ಮಾನನಷ್ಟ ಮೊಕದ್ದಮೆ ಎದುರಿಸಲಿ…

Hanumantha Kamath Posted On March 29, 2018


  • Share On Facebook
  • Tweet It

ನಾನು ಮೊನ್ನೆ ಸೋಮವಾರ ಸುದ್ದಿಗೋಷ್ಟಿ ಮಾಡಿರುವ ವಿಷಯ ನಿಮಗೆ ಈಗಾಗಲೇ ಹೇಳಿದ್ದೇನೆ. ನನ್ನನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಎಳೆದು ತರಲು ಹರಸಾಹಸ ಪಡುತ್ತಿರುವ ವಿಚಾರವಾದಿ ಪ್ರೋ|ನರೇಂದ್ರ ನಾಯಕ್ ಅವರ ನಡೆಯನ್ನು ಅಲ್ಲಿ ಖಂಡಿಸಿದ್ದೇನೆ. ಆದರೆ ಈಗ ನರೇಂದ್ರ ನಾಯಕ್ ಅವರು ತಾನು ಹಾಗೆ ಹೇಳಿಯೇ ಇಲ್ಲ, ಹನುಮಂತ ಕಾಮತ್ ಬಗ್ಗೆ ಮಾತನಾಡಲೇ ಇಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ನನ್ನನ್ನು ಮತ್ತು ದೇವಳವನ್ನು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಎಳೆದು ತರದೇ ಇದ್ದರೆ ನಾನ್ಯಾಕೆ ಸುದ್ದಿಗೋಷ್ಟಿ ಮಾಡಬೇಕಿತ್ತು? ಅವರು ನನ್ನ ಬಗ್ಗೆ ಮತ್ತು ದೇವಳದ ಬಗ್ಗೆ ಹಗುರವಾಗಿ ಮಾತನಾಡದೇ ಇದ್ದರೆ ನಾನು ಮಂಗಳೂರಿನ ಪ್ರೆಸ್ ಕ್ಲಬ್ ತನಕ ಹೋಗುವ ಅಗತ್ಯವೇ ಇರಲಿಲ್ಲ. ನನಗೆ ಅನಗತ್ಯವಾಗಿ ಪಬ್ಲಿಸಿಟಿ ಪಡೆಯುವ ಹಪಾಹಪಿ ಇಲ್ಲ. ನನ್ನನ್ನು ಅನಾವಶ್ಯಕವಾಗಿ ವಿವಾದಕ್ಕೆ ಎಳೆಯದೇ ಹೋದರೆ ನಾನು ಆ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಆದರೆ ಇಲ್ಲಿ ಹಾಗೇ ಇರಲಿಲ್ಲ. ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ದಕ್ಷ ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ತನಿಖೆ ಮಾಡಿ ಸೈ ಎನಿಸಿಕೊಂಡ ನಂತರವೂ ಪದೇ ಪದೇ ಇದರಲ್ಲಿ ಯಾರನ್ಯಾರನೋ ಕೆಣಕುವ ಕೆಲಸವನ್ನು ನರೇಂದ್ರ ನಾಯಕ್ ಮತ್ತು ಕೆಲವರು ಮಾಡುತ್ತಾ ಬರುತ್ತಿದ್ದಾರೆ.

ಹೇಳುವುದು ನಂತರ ಹೇಳಿಲ್ಲ ಎನ್ನುವುದು ಚಾಳಿನಾ…

ಮೊನ್ನೆ ಮಾರ್ಚ್ 21ರಂದು ಅದನ್ನು ಅವರು ಮತ್ತೆ ಮಾಡಿದ್ದಾರೆ. ಪ್ರತಿಭಟನಾರ್ಥವಾಗಿ ನಡೆದ ಸಭೆಯಲ್ಲಿ ಈ ಪ್ರಕರಣದಲ್ಲಿ ನನ್ನ ಹೆಸರನ್ನು ಎತ್ತಿದ್ದಾರೆ. ನರೇಂದ್ರ ನಾಯಕ್ ಆ ಸಭೆಯಲ್ಲಿ ನನ್ನ ಹೆಸರನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಹೆಸರನ್ನು ಎಳೆದು ತಂದ ಬಗ್ಗೆ ಇಂಗ್ಲೀಷ್ ಪತ್ರಿಕೆಯ ವೆಬ್ ಸೈಟ್ ನಲ್ಲಿ ಸುದ್ದಿ ಬಂದಿದೆ. ನಾನು ಅದರ ವರದಿಗಾರರಿಗೆ ಫೋನ್ ಮಾಡಿ ವಿಚಾರಿಸಿದ್ದೇನೆ. ಅವರು “ಹೌದು, ನಿಮ್ಮ ಹೆಸರನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ವಿಷಯವನ್ನು ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಬಗ್ಗೆ ಮಾತನಾಡುತ್ತಾ ಪ್ರಸ್ತಾಪಿಸಿದ್ದಾರೆ” ಎಂದಿದ್ದಾರೆ. ಅದರ ನಂತರವೇ ನಾನು ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಕೊಡಬೇಕೆಂದು ನಿರ್ಧರಿಸಿದ್ದು ಮತ್ತು ಸುದ್ದಿಗೋಷ್ಟಿ ಮಾಡಲು ತೀರ್ಮಾನಿಸಿದ್ದು. ಅದರಂತೆ ಪ್ರೆಸ್ ಕ್ಲಬ್ ಹೋಗಿ ಪತ್ರಿಕೆಗಳ ಮತ್ತು ಟಿವಿ ವರದಿಗಾರರ ಎದುರು ನನ್ನ ವಾದವನ್ನು ಇಟ್ಟಿದ್ದೇನೆ. ಅದು ಪ್ರಮುಖ ಪತ್ರಿಕೆಗಳಲ್ಲಿ ಬಂದಿದೆ. ಈಗ ನರೇಂದ್ರ ನಾಯಕ್ ಅವರು ನನ್ನ ವಿರುದ್ಧ ಮಾತನಾಡಿಲ್ಲ ಎಂದಾದರೆ ಅದನ್ನು ಕೂಡ ಬಹಿರಂಗ ಪಡಿಸಲಿ. ಕೇವಲ ಒಂದು ಪತ್ರಿಕೆಯಲ್ಲಿ ಹೇಳುವ ಮೂಲಕ ಅದು ತುಂಬಾ ಜನರಿಗೆ ತಲುಪಲಾರದು. ಅವರು ನಾನು ಮಾಡಿದ ಹಾಗೆ ಸುದ್ದಿಗೋಷ್ಟಿ ಮಾಡಿ “ಹನುಮಂತ ಕಾಮತ್ ಅವರು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಯಾವ ರೀತಿಯಲ್ಲಿಯೂ ಭಾಗಿದಾರರಲ್ಲ, ಅವರನ್ನು ಈ ಪ್ರಕರಣದಲ್ಲಿ ನಾನು ಎಳೆದದ್ದು ನನ್ನ ತಪ್ಪು. ಪೊಲೀಸ್ ತನಿಖೆಯಲ್ಲಿ ಆರೋಪಿಗಳೆನಿಸಿದವರನ್ನು ಬಿಟ್ಟು ಬೇರೆಯವರನ್ನು ತಾನು ಆರೋಪಿಗಳಂತೆ ಚಿತ್ರಿಸುವುದನ್ನು ಇನ್ನು ಮುಂದೆ ಬಿಡುತ್ತೇನೆ. ಹಾಗೆ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ಕೂಡ ಈ ಕೊಲೆ ಪ್ರಕರಣದಲ್ಲಿ ಎಳೆಯುವುದಿಲ್ಲ. ಆ ದೇವಳಕ್ಕೂ ಈ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ನನಗೆ ಗೊತ್ತಿದೆ” ಎಂದು ಹೇಳಲಿ. ಆಗ ಅದು ಎಲ್ಲ ಪತ್ರಿಕೆಗಳಲ್ಲಿ ಬರುತ್ತದೆ. ಅದು ಬಿಟ್ಟು ಬಹಿರಂಗವಾಗಿ ಭಾಷಣ ಮಾಡುವಾಗ ಹೆಸರು ಹೇಳಿ ಅವಹೇಳನ ಮಾಡುವುದು ನಂತರ ನಾನು ಹಾಗೆ ಹೇಳಿಯೇ ಇಲ್ಲ ಎಂದು ಹೇಳಿದರೆ ಆಗಲ್ಲ.

ದೇವಸ್ಥಾನದ ಒಳಗೆ ಚಪ್ಪಲಿ ಹಾಕುವ ದರ್ಪ ಯಾಕೆ..

ಅದರೊಂದಿಗೆ ನರೇಂದ್ರ ನಾಯಕ್ ಅವರು ತಾವು ಮೊನ್ನೆ ಮಾಡಿದ ಸಭೆಯಲ್ಲಿ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ಈ ಕೊಲೆ ಪ್ರಕರಣದಲ್ಲಿ ಎಳೆದು ತಂದದ್ದು ಕೂಡ ಎಲ್ಲರಿಗೂ ಗೊತ್ತಿರುವ ವಿಷಯ. ಅದರ ಅಗತ್ಯ ಏನಿತ್ತು? ಈಗ ಅದಕ್ಕೂ ನರೇಂದ್ರ ನಾಯಕ್ ಉತ್ತರ ಕೊಡಬೇಕು. ನರೇಂದ್ರ ನಾಯಕ್ ಅವರು ದೇವರನ್ನು ನಂಬುವುದಿಲ್ಲ. ಅವರು ದೇವರನ್ನು ನಂಬದೇ ಇರುವುದು ಅವರ ವೈಯಕ್ತಿಕ ವಿಷಯ. ಅವರನ್ನು ನಂಬಿ ಎಂದು ನಾವೇನೂ ಒತ್ತಾಯ ಮಾಡಲು ಹೋಗುವುದಿಲ್ಲ. ಆದರೆ ನಾವು ದೇವರನ್ನು ನಂಬುವ ಜನ. ದೇವರ ಬಗ್ಗೆ, ದೇವಸ್ಥಾನಗಳ ಬಗ್ಗೆ ನಮಗೆ ಅಪರಿಮಿತ ಭಕ್ತಿ ಇದೆ. ನಾವು ಸಣ್ಣ ಮಕ್ಕಳಿರುವಾಗಲೇ ನಮ್ಮ ತಂದೆ, ತಾಯಿ ನಮಗೆ ದೇವಸ್ಥಾನದ ಒಳಗೆ ಹೋಗುವಾಗ ಚಪ್ಪಲಿಯನ್ನು ಹೊರಗೆ ಇಟ್ಟು ಹೋಗಬೇಕು ಎಂದು ಕಲಿಸಿರುತ್ತಾರೆ. ನಾವು ನಂತರ ನಮ್ಮ ಮಕ್ಕಳಿಗೆ ಈ ಬಗ್ಗೆ ಹೇಳಿಕೊಟ್ಟಿರುತ್ತೇವೆ. ನಮಗೆ ದೇವಸ್ಥಾನ ಎಂದರೆ ಅದು ಬೇರೆ ಕಟ್ಟಡಗಳಂತೆ ಅಲ್ಲ. ಅಲ್ಲಿ ನಮ್ಮ ಧಾರ್ಮಿಕ ಶ್ರದ್ಧೆ ಇದೆ. ವಿಶ್ವಾಸ ಇದೆ. ಅಲ್ಲಿ ಚಪ್ಪಲಿ ಹಾಕಿ ಒಳಗೆ ನಡೆಯುವುದೆಂದರೆ ಕಲ್ಪಿಸಿಕೊಳ್ಳುವುದು ಕೂಡ ಮಹಾಅಪರಾಧ ಎಂದುಕೊಂಡವರು ನಾವು. ಆದರೆ ನರೇಂದ್ರ ನಾಯಕ್ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಒಳಗೆ ಸೀದಾ ಚಪ್ಪಲಿ ಹಾಕಿಕೊಂಡು ಬರುವುದಕ್ಕೆ ಯತ್ನಿಸಿದಾಗ ಅದನ್ನು ತಡೆದ್ದದ್ದು ಶ್ರೀ ವಿಠೋಭ ದೇವಸ್ಥಾನದ ಸಿಬ್ಬಂದಿ. ಆ ಬಗ್ಗೆ ಕೂಡ ನಾನು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದೇನೆ. ಅದಕ್ಕೆ ನರೇಂದ್ರ ನಾಯಕ್ ಯಾವ ಉತ್ತರವನ್ನು ಕೂಡ ಕೊಟ್ಟಿಲ್ಲ. ಇವರು ಚಪ್ಪಲಿ ಹಾಕಿ ದೇವಸ್ಥಾನದ ಒಳಗೆ ಬರಲು ಪ್ರಯತ್ನಿಸಿಲ್ಲ ಎಂದು ಹೇಳಲಿ.
ಒಟ್ಟಿನಲ್ಲಿ ನಾನು ಹೇಳುವುದಿಷ್ಟೇ, ನನ್ನ ಹೆಸರನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಎಳೆದು ತಂದದ್ದಕ್ಕೆ ನರೇಂದ್ರ ನಾಯಕ್ ಬಹಿರಂಗವಾಗಿ ಸುದ್ದಿಗೋಷ್ಟಿ ಮಾಡಿ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಾನು ತೀರ್ಮಾನಿಸಲಿದ್ದೇನೆ. ಇನ್ನು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಆಡಳಿತದ ವಿಷಯದಲ್ಲಿ ವರದರಾಯ ಪ್ರಭು ಅವರು ಹಸ್ತಕ್ಷೇಪ ಮಾಡಿ ತೊಂದರೆ ಕೊಡುತ್ತಿದ್ದಾರೆ. ಅದನ್ನು ನಿಲ್ಲಿಸಬೇಕು ಎಂದು ದೇವಳದ ಆಸ್ತಿಕ ವೃಂದ ಮಹಿಳೆಯರನ್ನು ಸೇರಿ ಸುಮಾರು 40 ಜನ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ದೂರು ಕೊಟ್ಟಿದ್ದಾರೆ. ಆ ಬಗ್ಗೆ ನಾಳೆ ಬರೆಯುತ್ತೇನೆ..

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search