ದೇಶದ ಬಡ, ಮಧ್ಯಮ ವರ್ಗದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಅದ್ಭುತ ಕೊಡುಗೆಗಳಿವು!
Posted On March 30, 2018
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀಮಂತರ ಪರ, ಅಂಬಾನಿ, ಅದಾನಿ ಪರ ಎಂದು ಟೀಕಿಸುತ್ತಾರೆ, ನರೇಂದ್ರ ಮೋದಿ ಅವರ ಸರ್ಕಾರ ಸೂಟುಬೂಟಿನ ಸರ್ಕಾರ ತೆಗಳುತ್ತಾರೆ, ಈ ಸರ್ಕಾರ ಬಡ, ಮಧ್ಯಮ ವರ್ಗದವರಿಗೆ ಏನೂ ಮಾಡಿಲ್ಲ ಎಂದು ಸುಖಾಸುಮ್ಮನೆ ಮಾತನಾಡುತ್ತಾರೆ.
ಹಾಗಾದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬಡವರ ಪರವಾಗಿ, ಮಧ್ಯಮ ವರ್ಗದವರಿಗಾಗಿ ಏನೂ ಮಾಡಿಲ್ಲವೇ? ಈ ಮೋದಿ ವಿರೋಧಿಗಳು ಮಾಡುವ ಟೀಕೆಯಲ್ಲಿ ಎಷ್ಟು ಹುರುಳಿದೆ? ಯಾವ ಅಂಶಗಳನ್ನು ಮರೆಮಾಚಲು ಇವರು ಹೀಗೆ ಮಾಡುತ್ತಾರೆ? ಅಷ್ಟಕ್ಕೂ ಮೋದಿ ಅವರು ಬಡವರಿಗೆ ನೀಡಿದ ಕೊಡುಗೆಗಳೇನು? ಇಲ್ಲಿದೆ ನೋಡಿ ಪಟ್ಟಿ.
- ನರೇಂದ್ರ ಮೋದಿ ಅವರು ನಾಲ್ಕೂ ವರ್ಷದಲ್ಲಿ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ಸಿನವರು ಆರೋಪಿಸುತ್ತಾರೆ. ಆದರೆ ಅರವತ್ತು ವರ್ಷವನ್ನು ದೇಶವನ್ನಾಳಿದ ಅವರು ದೇಶದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬ ಕನಿಷ್ಠ ಅರಿವೂ ಅವರಿಗೆ ಇರಲಿಲ್ಲ ಎಂದು ಕಾಣುತ್ತದೆ. ಆದರೆ ಮೋದಿ ಅವರು ಹಾಗೆ ಮಾಡಲಿಲ್ಲ, ಅಧಿಕಾರಕ್ಕೆ ಬರುತ್ತಲೇ, ದೂರದ ಗ್ರಾಮಗಳನ್ನು ಹುಡುಕಿ ವಿದ್ಯುತ್ ಸಂಪರ್ಕಕ್ಕೆ ಮುಂದಾದರು. ದೇಶದಲ್ಲಿ ಸ್ವಾತಂತ್ರ್ಯ ಬಂದು ವಿದ್ಯುತ್ತೇ ಕಾಣದ 18,452 ಗ್ರಾಮಗಳನ್ನು ಗುರುತಿಸಿ ವಿದ್ಯುತ್ ಕಲ್ಪಿಸುವ ಯೋಜನೆ ಜಾರಿಗೊಳಿಸಿದರು. ಪರಿಣಾಮವಾಗಿ ಈ ಗ್ರಾಮಗಳಲ್ಲಿ ಮೇ 25, 2017ರವರೆಗೆ 13,523 ಗ್ರಾಮಗಳಿಗೆ ವಿದ್ಯುತ್ ಕಲ್ಪಿಸಲಾಗಿದೆ. ಇಷ್ಟು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಗುತ್ತದೆ ಎಂದರೆ, ಅಷ್ಟೂ ಗ್ರಾಮಗಳ ಜನರಿಗೆ ರಾತ್ರಿ ಕಣ್ಣು ಬಂದಹಾಗೆ ಅಲ್ಲವೇ?
- ನಮ್ಮ ದೇಶದ ಎಷ್ಟು ಮುಂದುವರಿದರೂ ಗ್ರಾಮಗಳಲ್ಲಿ ಇಂದಿಗೂ ಕಟ್ಟಿಗೆಯ ಒಲೆಗಳೇ ಇದ್ದವು. ಅಷ್ಟರಮಟ್ಟಿಗೆ ಕಾಂಗ್ರೆಸ್ ಜನರನ್ನು ಬಡತನದ ಹಾಗೂ ದಾರಿದ್ರ್ಯದಲ್ಲಿ ಇಟ್ಟಿತ್ತು. ಆದರೆ ನರೇಂದ್ರ ಮೋದಿ ಅವರು ಪ್ರತಿ ಮನೆಗೂ ಎಲ್ ಪಿಜಿ ಗ್ಯಾಸ್ ಉಚಿತ ಸಂಪರ್ಕ ಯೋಜನೆ ಜಾರಿಗೊಳಿಸಿದರು. ಪರಿಣಾಮ ಮೋದಿ ಸರ್ಕಾರದ ಅವಧಿಯಲ್ಲಿ ದೇಶದ 2.27 ಕೋಟಿ ಕುಟುಂಬಗಳು ಉಚಿತವಾಗಿ ಗ್ಯಾಸ್ ಸಂಪರ್ಕ ಪಡೆದಿವೆ. ಇಷ್ಟು ಕೋಟಿ ತಾಯಂದಿರ ಕಣ್ಣು ಉರಿತ, ಅನಾರೋಗ್ಯಕ್ಕೊಳಗಾಗುವುದು ತಪ್ಪಿದಂತಾಯಿತಲ್ಲ.
- ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷವಾದರೂ ಗ್ರಾಮೀಣ ರೈತರು ಬ್ಯಾಂಕ್ ಖಾತೆಯನ್ನೇ ಹೊಂದಿರಲಿಲ್ಲ. ಆದರೆ ಮೋದಿ ಅವರು ಜನಧನ್ ಯೋಜನೆ ಜಾರಿ ಮೂಲಕ ಸುಮಾರು 18 ಕೋಟಿ ಜನರಿಗೆ ಬ್ಯಾಂಕ್ ಖಾತೆ ತೆಗೆಸಿಕೊಟ್ಟರು. ಈಗ ರೈತರು ಸರ್ಕಾರದ ಯಾವುದೇ ಯೋಜನೆಯ ಅನುದಾನ ಪಡೆಯಲು ಯಾವ ಅಧಿಕಾರಿಗಳ ಮುಂದೆ ಕೈಚಾಚದೆ ತಮ್ಮ ಅಕೌಂಟಿನಿಂದಲೇ ಪಡೆಯುತ್ತಿದ್ದಾರೆ. ಅದೂ ಮಧ್ಯವರ್ತಿಗಳಿಲ್ಲದೆ.
- ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೆ ಬಡವರ ಅನುಕೂಲಕ್ಕಾಗಿ ಮುದ್ರಾ ಬ್ಯಾಂಕ್ ಯೋಜನೆ ಜಾರಿಗೊಳಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದ್ದಾರೆ. ಸುಮಾರು 10 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
- ಬಡವರ, ಮಧ್ಯಮವರ್ಗದವರಿಗೆ ಮಾರಕ ಎಂದರೆ ದುಬಾರಿ ಚಿಕಿತ್ಸೆ ಎಂದರೆ, ಔಷಧ ಖರೀದಿ. ಆದರೆ ಕೇಂದ್ರ ಸರ್ಕಾರ ಜನೌಷಧಿ ಕೇಂದ್ರಗಳನ್ನು ತೆರೆಯುವ ಮೂಲಕ ಬಡವರಿಗೆ ಅತೀ ಕಡಿಮೆ ದರದಲ್ಲಿ ಔಷಧ ನೀಡುತ್ತಿರುವುದು ಶ್ಲಾಘನೀಯವಾಗಿದೆ.
- ಇನ್ನು ಬಡವರ ಆರೋಗ್ಯಕ್ಕಾಗಿಯೇ ಕೇಂದ್ರ ಸರ್ಕಾರ ವಿಶ್ವದ ಬೃಹತ್ ಆರೋಗ್ಯ ಯೋಜನೆಯೊಂದನ್ನು ಜಾರಿಗೊಳಿಸುತ್ತಿದ್ದು, ಈ ಆಯುಷ್ಮಾನ್ ಯೋಜನೆ ಮೂಲಕ ದೇಶದ ಸುಮಾರು 10 ಕೋಟಿ ಕುಟುಂಬಗಳು, 50 ಕೋಟಿ ಜನ 5 ಲಕ್ಷ ರೂಪಾಯಿವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯುವ ಬೃಹತ್ ಯೋಜನೆ ಜಾರಿಗೆ ಮುಂದಾಗಿದ್ದಾರೆ.
ಈ ಹೇಳಿ ಕೇಂದ್ರ ಸರ್ಕಾರ ಶ್ರೀಮಂತರ ಪರವಾ? ಬಡವರಿಗಾಗಿ ಏನೂ ಮಾಡಿಲ್ಲವಾ? ಯಾವ ಪ್ರಧಾನಿಯ ಅವಧಿಯಲ್ಲಿ ದೇಶದ ಕೋಟ್ಯಂತರ ಬಡವರಿಗೆ ಉಪಯೋಗವಾಗುವ ಯೋಜನೆ ಜಾರಿಗೊಳಿಸಿದ್ದಾರೆ? ಒಂದು ಸಲ ಯೋಚಿಸಿನೋಡಿ. ದೇಶದ ಪ್ರಬುದ್ಧ ನಾಗರಿಕರಾಗಿ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply