ಫೇಸ್ ಬುಕ್ ನಿಂದಲೇ ಪಾಕಿ ಐಎಸ್ ಐ ಮಾಡುತ್ತೇ ಹನಿಟ್ರ್ಯಾಪ್, ಇಲ್ಲಿದೇ ನೋಡಿ ಪ್ರಖರ ಸಾಕ್ಷಿ
ಅಮೃತಸರ: ಭಾರತದ ವಿರುದ್ಧ ಪಾಕಿಸ್ತಾನದ ಕುತಂತ್ರ ಬುದ್ಧಿ ಮುಂದುವರಿದಿದೆ. ಭಾರತ ಎಷ್ಟೇ ಶಾಂತಿ ಭಯಸಿದರೂ ಒಂದಲ್ಲ ಒಂದು ರೀತಿ ಸದಾ ಕೇಡುವ ಭಯಸುವ ಪಾಕಿಸ್ತಾನ ತನ್ನ ಷಡ್ಯಂತ್ರ ಸದಾ ಕಾಪಿಟ್ಟುಕೊಳ್ಳುತ್ತಿದೆ. ಧರ್ಮದ ಆಧಾರದಲ್ಲಿ ವಿಭಜನೆಯಾದ ನಂತರವೂ ಪಾಕಿಸ್ತಾನ ಸದಾ ಭಾರತದಲ್ಲಿ ದುಷ್ಕೃತ್ಯ ನಡೆಸುವ ಹಳೆ ಚಾಳಿಯಲ್ಲೇ ದಿನ ದೂಡುತ್ತಿದೆ. ಇದೀಗ ಪಾಕಿಸ್ತಾನದ ಷಡ್ಯಂತ್ರದ ಚಾಳಿಗೆ ಮತ್ತೊಂದು ಪ್ರಬಲ ಸಾಕ್ಷಿ ದೊರೆತಿದ್ದು, ಹನಿಟ್ರ್ಯಾಪ್ ಮೂಲಕ ಭಾರತದ ವ್ಯಕ್ತಿಯೊಬ್ಬನನ್ನು ಬಲೆಗೆ ಹಾಕಿಕೊಂಡು ಗುಪ್ತಚರನಂತೆ ಬಳಸಿಕೊಳ್ಳಲಾಗಿದೆ.
ಪಂಜಾಬ್ ನ ರವಿಕುಮಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಗೆ ಹನಿಟ್ರ್ಯಾಪ್ ಗೆ ಒಳಗಾದವರು. ಕಳೆದ ಏಳೆಂಟು ತಿಂಗಳಿಂದ ಫೇಸ್ ಬುಕ್ ಮೂಲಕ ರವಿಕುಮಾರ್ ಅವರನ್ನು ಕುತಂತ್ರದಿಂದ ಸಂಪರ್ಕಿಸಿದ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಹನಿಟ್ರ್ಯಾಪ್ ಮಾಡಿದೆ. ಅಲ್ಲದೇ ರವಿಕುಮಾರ ಅವರನ್ನು ಐಎಸ್ ಐ ಎಜೆಂಟ್ ಆಗಿ ಪರಿವರ್ತಿಸಿಕೊಂಡು ಬಳಸಿಕೊಳ್ಳಲಾಗುತ್ತಿತ್ತು.
ಭಾರತೀಯ ಗುಪ್ತಚರ ಸಂಸ್ಥೆ ಪಂಜಾಬ್ ಪೊಲೀಸ್ ಮತ್ತು ಸೈನ್ಯಕ್ಕೆ ಈ ಮಾಹಿತಿ ನೀಡಿದ್ದು, ಪಂಜಾಬ್ ವಿಶೇಷ ತನಿಖಾ ದಳ ಸೈನ್ಯದ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ, ರವಿಕುಮಾರ್ ನನ್ನು ಅಮೃತಸರ ಜಿಲ್ಲೆಯ ಚಾತಿವಿಂಡ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದೆ.
ಮಹತ್ವದ ಮಾಹಿತಿ ನೀಡಿದ್ದ ಭೂಪ: ರವಿಕುಮಾರ ಭಾರತೀಯ ಸೇನೆಯ ವಿಭಾಗಗಳು, ಬಂಕರ್ ಗಳ ರಚನೆ, ಗಡಿಯಲ್ಲಿ ಸೈನ್ಯದ ತಯಾರಿ, ಸೈನ್ಯದ ವಾಹನಗಳ ತಾಕತ್ತು, ತರಬೇತಿ ಶಿಬಿರಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಭಾರತೀಯ ಸೈನ್ಯದ ನಿಷೇಧಿತ ಪ್ರದೇಶಗಳ ಚಿತ್ರಗಳನ್ನು ನೀಡಿದ್ದಾನೆ. ಈ ಎಲ್ಲ ಸಂಚಿನ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದ ಸಂಸ್ಥೆಯೊಂದು ಯುವತಿಯರ ಹೆಸರಲ್ಲಿ ಫೇಸ್ ಬುಕ್ ಅಕೌಂಟ್ ಆರಂಭಿಸಿ, ಭಾರತದ ನಿರುದ್ಯೋಗಿ ಯುವಕರು, ನಿವೃತ್ ಅಧಿಕಾರಿಗಳು, ಸೈನ್ಯದ ಅಧಿಕಾರಿಗಳನ್ನು ಬಲೆಗೆ ಹಾಕಿಕೊಳ್ಳುತ್ತದೆ. ಆ ಮೂಲಕ ಭಾರತದ ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
Leave A Reply