ನಾನೂ ತಿನ್ನಲ್ಲ, ತಿನ್ನಲು ಬಿಡಲ್ಲ ಎಂದ ಮೋದಿ ಈಗ ಮಲಗಲು ಸಹ ಬಿಡುತ್ತಿಲ್ಲವಂತೆ! ಏನಿದು? ಈ ಸುದ್ದಿ ಓದಿ!
ಪ್ರಧಾನಿ ನರೇಂದ್ರ ಮೋದಿ ಅವರೆಂದರೇನೇ ಹಾಗೆ, ಕುಳಿತಲ್ಲಿ ಕೂರಲಾರದ, ಸದಾ ಕೆಲಸವನ್ನೇ ಮಾಡುವ, ದೇಶಕ್ಕಾಗಿ ಹಲವು ವರ್ಷಗಳಿಂದ ರಜೆಯನ್ನೇ ತೆಗೆದುಕೊಳ್ಳದೆ ದುಡಿಯುವ, ದೇಶದ ಅಭಿವೃದ್ಧಿಯನ್ನೇ ಯೋಚಿಸು, ಸದಾ ಚಿಂತನಾಶೀಲರಾಗಿರುವ ವ್ಯಕ್ತಿ. ಒಬ್ಬ ದೇಶದ ನಾಯಕನಿಗಿರುವ ಪ್ರಮುಖ ಅಂಶಗಳು ಸಹ ಇವೆಯೇ.
ಹಾಗಂತ ದೇಶದ ನಾಯಕ ಮಾತ್ರ ಹೀಗೆ ಹಗಲಿರುಳು ಕೆಲಸ ಮಾಡಬೇಕಾ? ಉಳಿದವರೆಲ್ಲ ಸುಮ್ಮನಿದ್ದರೂ ಆದೀತೇ? ಇದನ್ನು ಮನಗಂಡ ಪ್ರಧಾನಿ ಮೋದಿ ಅವರು 2014ರ ಲೋಕಸಭೆ ಚುನಾವಣೆ ವೇಳೆ ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳಿದ್ದು ಸುದ್ದಿಯಾಗಿತ್ತು. ಈಗ ಅದರಂತೆಯೇ ಸರ್ಕಾರ ಸಹ ನಡೆಸುತ್ತಿರುವುದು ಬೇರೆ ಮಾತು.
ಹೌದು, ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾಹಿತಿ ನೀಡಿದ್ದು, ಯಾವುದೇ ಯೋಜನೆ, ಜವಾಬ್ದಾರಿಯನ್ನು ಪ್ರಧಾನಿ ಮೋದಿ ಅವರು ಯಾರಿಗಾದರೂ ಒಪ್ಪಿಸಿದರೆ, ಅದು ಮುಗಿಯುವವರೆಗೆ ಅವರನ್ನು ಮಲಗಲು ಸಹ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಲಾಥೂರ್ ನಲ್ಲಿ ರೈಲು ಬೋಗಿ ಉತ್ಪಾದನೆ ಕಾರ್ಖಾನೆ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಅಭಿವೃದ್ಧಿಯ ಬಗ್ಗೆಯೇ ಯೋಚಿಸುತ್ತಾರೆ. ಯಾವುದೇ ಯೋಜನೆ ಜಾರಿಯಾದರೂ ಸಾಕು, ಅದು ಮುಗಿಯುವ ಹಂತದವರೆಗೂ ಪರಿಶೀಲನೆ ನಡೆಸುತ್ತಾರೆ. ವಿಳಂಬವಾದರೆ ಜವಾಬ್ದಾರಿ ವಹಿಸಿಕೊಂಡವರಿಗೆ ಸೂಚಿಸುತ್ತಾರೆ ಎಂದು ತಿಳಿಸಿದ್ದಾರೆ.
ದೇಶದ ಪ್ರಧಾನಿಯಾದವರು ತಾನೂ ತಿನ್ನದೆ, ಬೇರೆಯವರೂ ತಿನ್ನಲು ಬಿಡದೆ, ತಾನೂ ಮಲಗದೆ, ಬೇರೆಯವರನ್ನೂ ಮಲಗದೆ ದೇಶದ ಅಭಿವೃದ್ಧಿಗೆ ಬದ್ಧರಾಗಿದ್ದಾರಲ್ಲ, ಅದಕ್ಕಿಂತ ಇನ್ನೇನು ಬೇಕು ಒಂದು ದೇಶಕ್ಕೆ?
Leave A Reply