ಬಟ್ಟೆ ಮುಗೀತು, ಇನ್ನು ಸಂಗೀತದ ಸರದಿ, ಮದುವೆ ವೇಳೆ ಮುಸ್ಲಿಮರು ಸಂಗೀತ ಕಾರ್ಯಕ್ರಮ ನಡೆಸಬಾರದಂತೆ!
ಲಖನೌ: ಇತ್ತೀಚೆಗೆ ಉತ್ತರ ಪ್ರದೇಶದ ದರೂಲ್ ಉಲುಮ್ ದಿಯೋಬಂದ್ ಸಂಘಟನೆ ವಿಚಿತ್ರ ಕಾರಣಗಳಿಗಾಗಿ ಫತ್ವಾ ಹೊರಡಿಸಿ ಸುದ್ದಿಯಾಗಿತ್ತು. ಮುಸ್ಲಿಂ ಮಹಿಳೆಯರು ತೋಳು ಇರದ ಬಟ್ಟೆ, ಮುಖ ಕಾಣಿಸುವ ಹಾಗೆ ಫೇಸ್ ಬುಕ್ ನಲ್ಲಿ ಫೋಟೋ ಅಪ್ ಮಾಡಬಾರದು ಎಂದು ಫತ್ವಾ ಹೊರಡಿಸಿತ್ತು.
ಈಗ ಮತ್ತೊಂದು ಕಾರಣಕ್ಕೆ ಫತ್ವಾ ಹೊರಡಿಸುವ ಮೂಲಕ ಸುದ್ದಿಯಾಗಿದೆ. ಹೌದು, ಇನ್ನು ಮುಂದೆ ಮುಸ್ಲಿಮರು ಯಾವುದೇ ಕಾರಣಕ್ಕೂ ಕೂಡ ಸಂಗೀತ ಕಾರ್ಯಕ್ರಮ ಆಯೋಜಿಸಬಾರದು ಎಂದು ಈ ಮುಸ್ಲಿಂ ಸಂಘಟನೆ ಫತ್ವಾ ಹೊರಡಿಸಿದೆ.
ಮುಸ್ಲಿಮರು ಯಾವುದೇ ಮದುವೆ ಸಮಾರಂಭದಲ್ಲಿ ಸಂಗೀತ, ನೃತ್ಯ ಹಾಗೂ ಡಿಸ್ಕೋ ಜಾಕಿಯಂತಹ ಜೋರು ಶಬ್ದ ಹೊರಡಿಸುವ ಸಂಗೀತ ಆಯೋಜಿಸಿದರೆ ಅಂತಹ ಮದುವೆಗೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಸಂಸ್ಥೆಯ ಮುಫ್ತಿ ಅಜರ್ ಹುಸೇನ್ ತಿಳಿಸಿದ್ದಾರೆ.
ಸಂಗೀತ ಇಸ್ಲಾಮಿನಲ್ಲಿ ನಿಷಿದ್ಧವಾಗಿದ್ದು, ಈಗಾಗಲೇ ರಾಜಸ್ಥಾನದ ಕೋಟಾದಲ್ಲಿ ನಿಷೇಧ ಹೇರಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಮುಸ್ಲಿಮರು ಮದುವೆ ವೇಳೆ ಯಾವುದೇ ಸಂಗೀತಕ್ಕೂ ಅವಕಾಶ ಮಾಡಿಕೊಡಬಾರದು. ಒಂದು ವೇಳೆ ಆಯೋಜಿಸಿದರೆ ಅದು ಧರ್ಮದ ವಿರುದ್ಧ ಹೋದಂತೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಹಲವು ಮುಸ್ಲಿಮರು ರಾಜ್ಯದಲ್ಲಿ ಮದುವೆಯಾಗುವ ವೇಳೆ ಮನೋರಂಜನೆ ಉದ್ದೇಶಕ್ಕಾಗಿ ಸಂಗೀತ ಕಾರ್ಯಕ್ರಮ ಆಯೋಜಿಸುವ ಸಂಪ್ರದಾಯ ಜಾಸ್ತಿಯಾದ ಹಿನ್ನೆಲೆಯಲ್ಲಿ ದಿಯೋಬಂದ್ ಸಂಸ್ಥೆ ಈ ಫತ್ವಾ ಹೊರಡಿಸಿದೆ ಎಂದು ತಿಳಿದುಬಂದಿದೆ.
Leave A Reply