ಆರೆಸ್ಸೆಸ್ ಕುರಿತು ತಯಾರಾಗುತ್ತಿದೆ ಸಿನಿಮಾ, ಪ್ರಮುಖ ಪಾತ್ರದಲ್ಲಿ ನಟಿಸುವವರು ಯಾರು ಗೊತ್ತೇ?
ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಕುರಿತು ಸಿನಿಮಾ ಒಂದು ಸೆಟ್ಟೇರಲಿದೆ ಎಂದು ತಿಳಿದುಬಂದಿದ್ದು, ಬಾಹುಬಲಿಯಂತಹ ಐತಿಹಾಸಿಕ ಹಾಗೂ ದಾಖಲೆ ಬರೆದ ಸಿನಿಮಾ ನಿರ್ದೇಶಿಸಿದ ರಾಜಮೌಳಿ ಅವರ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರದ ಸ್ಕ್ರಿಪ್ಟ್ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ಮಹಾರಾಷ್ಟ್ರದ ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದ್ದು, ಶೀಘ್ರದಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗುತ್ತಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಹುಟ್ಟು, ಬೆಳವಣಿಗೆ, ಸಂಘಟನೆ ಇಷ್ಟು ದೊಡ್ಡ ಮಟ್ಟದಾಗಿ ಬೆಳೆಯಲು ಕಾರಣವಾದ ಕಾರ್ಯಕರ್ತರು, ಮುಖಂಡರ ಶ್ರಮ, ರಾಷ್ಟ್ರದ ಹಿತ ಕಾಪಾಡುವಲ್ಲಿ ಆರೆಸ್ಸೆಸ್ ಕೊಡುಗೆ, ರಾಷ್ಟ್ರೀಯ ವಾದ, ಅದರ ಸಿದ್ಧಾಂತ ಸೇರಿ ಹಲವು ವಿಷಯಗಳನ್ನು ಆಧರಿಸಿ ಸಿನಿಮಾ ಮಾಡಲುತ್ತದೆ ಎಂದು ಮೂಲಗಳು ತಿಳಿಸಿವೆ.
ಹಿಂದಿ ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಕನ್ನಡ, ತೆಲುಗು ಮತ್ತು ತಮಿಳಿಗೂ ಡಬ್ ಆಗಲಿದೆ ಎಂದು ತಿಳಿದುಬಂದಿದೆ.
Leave A Reply