ಸರಕು ಮತ್ತು ಸೇವಾ ತೆರಿಗೆ ವಿರೋಧಿಗಳೇ, ಒಂದು ಸಲ ಮಹಾರಾಷ್ಟ್ರದ ಆದಾಯ ಏರಿಕೆಯನ್ನೊಮ್ಮೆ ನೋಡಿ!
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆ ಯೋಜನೆ ಜಾರಿಗೊಳಿಸುವಾಗ ದೇಶದೆಲ್ಲೆಡೆ ಕೆಲ ಮೋದಿ ವಿರೋಧಿಗಳದ್ದು ಒಂದೇ ಬೊಬ್ಬೆ, ಇದು ದೇಶದ ವಿತ್ತೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿಸುವಂತಹ ಯೋಜನೆ ಎಂದು.
ಆದರೆ ಏನಾಯಿತು? ಪ್ರಸ್ತುತ ದೇಶದ ಜನರ ಖರೀದಿಗೆ ಅನುಗುಣವಾಗಿ ವಿವಿಧ ವಸ್ತುಗಳಿಗೆ ಜಿಎಸ್ಟಿ ನಿಗದಿಗೊಳಿಸಲಾಗಿದೆ. ದೇಶದ ಜನರಿಗೆ ಭಾರವಾದ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಅಷ್ಟೇ ಅಲ್ಲ, ಜಿಎಸ್ಟಿ ಜಾರಿಯ ಆರಂಭದ ದಿನಗಳಲ್ಲಿ ಕಡಿಮೆಯಾದ ಜಿಡಿಪಿ ದರ ಈಗ ಏಳರ ಗಡಿ ದಾಟಿದೆ.
ಇಷ್ಟಾದರೂ ಮೋದಿ ವಿರೋಧಿಗಳು ಮಾತ್ರ ಜಿಎಸ್ಟಿ ಜಾರಿಯಿಂದಾದ ಉಪಯೋಗವೇನು? ಎಂದೇ ಕೇಳುತ್ತಾರೆ. ಆದರೆ ವಾಸ್ತವದ ಪ್ರತಿರೂಪವಾಗಿ ಜಿಎಸ್ಟಿ ಮಹಾರಾಷ್ಟ್ರದ ವಿತ್ತೀಯ ವ್ಯವಸ್ಥೆ ಮೇಲೆ ಸಕಾರಾತ್ಮವಾಗಿ ಪರಿಣಾಮ ಬೀರಿದೆ.
ಹೌದು, ಪ್ರಸಕ್ತ ಸಾಲಿನ ವಿತ್ತೀಯ ವರ್ಷದಲ್ಲಿ ಮಹಾರಾಷ್ಟ್ರದ ತೆರಿಗೆ ಆದಾಯ ಪ್ರಮಾಣದಲ್ಲಿ ಶೇ.26ರಷ್ಟು ಏರಿಕೆಯಾಗಿದ್ದು, ಜಿಎಸ್ಟಿ ಜಾರಿಯಿಂದಲೇ ಮಹಾರಾಷ್ಟ್ರದ ಆದಾಯ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಪ್ರಸಕ್ತ ಸಾಲಿನಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ 1.14 ಲಕ್ಷ ಕೋಟಿ ಆದಾಯ ತೆರಿಗೆ ಮೂಲಕವೇ ಬಂದಿದ್ದು, ಅದರಲ್ಲಿ ಕಳೆದ ಬಾರಿಗಿಂತ 26ರಷ್ಟು ಏರಿಕೆಯಾಗಿದೆ. ಇದಕ್ಕೆ ಜಿಎಸ್ಟಿ ಜಾರಿಯೇ ಕಾರಣ ಎಂದು ತಿಳಿದುಬಂದಿದೆ.
Leave A Reply