ಕುಂದಾಪುರ ಕುವರನಿಂದ ಭಾರತಕ್ಕೆ ಕಾಮನ್ ವೆಲ್ತ್ ನಲ್ಲಿ ಪ್ರಥಮ ಪದಕ
Posted On April 5, 2018

ಗೋಲ್ಡ್ ಕೋಸ್ಟ್: ಸರ್ಫಿಂಗ್ ಸ್ವರ್ಗ ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾಗಿರುವ 21ನೇ ಆವೃತ್ತಿಯ ಕಾಮನವೇಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಭೇಟೆ ಆರಂಭವಾಗಿದ್ದು, ಕರ್ನಾಟಕದ ಕುಂದಾಪುರದ ಕುವರ ಕನ್ನಡಿಗ ಗುರುರಾಜ್ ಭಾರತಕ್ಕೆ ಮೊದಲ ಪದಕ ಗೆಲ್ಲಿಸಿ ಕೊಟ್ಟಿದ್ದಾರೆ.
ಗುರುವಾರ ಆರಂಭವಾದ ಕ್ರೀಡಾಕೂಟದಲ್ಲಿ 56 ಕೆ.ಜಿ. ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸ್ನ್ಯಾಚ್‌ನಲ್ಲಿ 111 ಕೆಜಿ ಎತ್ತಿದ 28ರ ಹರೆಯದ ಕನ್ನಡಿಗ ಗುರುರಾಜ್, ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದ ಮೂರನೇ ಪ್ರಯತ್ನದಲ್ಲಿ 138 ಕೆಜಿಯೊಂದಿಗೆ 249 ಕೆಜಿ ಭಾರ ಎತ್ತಿದ ಸಾಧನೆ ಮಾಡಿದರು. ಇದು ಅವರ ಇದುವರೆಗಿನ ಅತ್ಯುತ್ತಮ ಸಾಧನೆ. ಮಲೇಷಿಯಾದ ಮುಹಮ್ಮದ್ ಅಜರ್ ಅವರು 261 ಕೆಜಿ ಭಾರ ಎತ್ತುವ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕನ್ನಡಿಗ ಗುರುರಾಜ ಬೆಳ್ಳಿ ಪದಕದ ಮೂಲಕ ಭಾರತದ ಪದಕ ಭೇಟೆ ಆರಂಭಿಸಿರುವುದು ಹೆಮ್ಮೆಯ ವಿಚಾರ.
- Advertisement -
Trending Now
#ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
December 2, 2023
ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
December 2, 2023
Leave A Reply