ನರೇಂದ್ರ ಮೋದಿ ಅವಧಿಯಲ್ಲಿ ನಿರುದ್ಯೋಗ ಹೆಚ್ಚಾಯ್ತು ಎನ್ನುವವರೇ, ಈ ಸುದ್ದಿ ಓದಿ, ನಿಜ ತಿಳಿದುಕೊಳ್ಳಿ!
ದೆಹಲಿ: ಅದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇರಬಹುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇರಬಹುದು, ಎಲ್ಲೇ ಹೋದರೂ ಮೋದಿ ಅವರು ದೇಶದಲ್ಲಿ ಉದ್ಯೋಗ ಸೃಷ್ಟಿಸಲಿಲ್ಲ, ದಿನೇದಿನೆ ನಿರುದ್ಯೋಗ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ಟೀಕಿಸುತ್ತಿದ್ದರು. ಆ ಮೂಲಕ ಇದನ್ನೇ ತಮ್ಮ ಉದ್ಯೋಗ ಎಂದು ಭಾವಿಸಿದಂತೆ, ಪದೇಪದೆ ಆಡಿದ್ದೇ ಆಡುತ್ತಿದ್ದರು.
ಆದರೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದ ಯಾರೇ ಆಗಲಿ, ಇನ್ನು ಮುಂದೆ ನಿರುದ್ಯೋಗ ಎಂದು ಬಾಯಿಬಡಿದುಕೊಳ್ಳದಂತೆ ಮಾಡುವ ವರದಿಯೊಂದು ಬಿಡುಗಡೆಯಾಗಿದ್ದು, ದೇಶದಲ್ಲಿ ಗಣನೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದೆ.
ಹೌದು, ಅಮೆರಿಕದ ಆರ್ಥಿಕ ತಜ್ಞ ಆಶ್ನಾ ದೋಧಿಯಾ ಎಂಬಾತ ಮಾಸಿಕ ವರದಿ ಬಿಡುಗಡೆಗೊಳಿಸಿದ್ದು, ಫೆಬ್ರವರಿಯಲ್ಲಿ 47.8ರಷ್ಟಿದ್ದ ನಿಕ್ಕೇಯಿ ಭಾರತ ಸೇವೆಗಳ ಉದ್ಯಮ ಚಟುವಟಿಕೆ ಸೂಚ್ಯಂಕ 50.3ಕ್ಕೆ ತಲುಪಿದ್ದು, ಈ ಬೆಳವಣಿಗೆ ಕಳೆದ ಏಳು ವರ್ಷದಲ್ಲಿ ಇದೇ ಮೊದಲು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಉತ್ಪಾದನೆ ಹಾಗೂ ಸೇವಾ ಕ್ಷೇತ್ರದಲ್ಲಿ ಗಣನೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಭಾರತದ ಆರ್ಥಿಕ ಸ್ಥಿತಿ ಸಹ ಸುಧಾರಣೆಯತ್ತ ಸಾಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ದಿನಬೆಳಗಾದರೆ ಮೋದಿ ಅವರನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡವರಿಗೆ ಈ ವರದಿ ಅರಗಿಸಿಕೊಳ್ಳಲು ಕಷ್ಟವಾದರೂ, ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಯುವಜನತೆಗೆ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂಬ ಸಮಾಧಾನ ನಮ್ಮದಾಗಲಿ.
Leave A Reply