ಸೇನೆ ಗುಟುರಿಗೆ ನಡುಗಿತಾ ಚೀನಾ?, ವಿರೋಧಿ ರಾಷ್ಟ್ರ ಮಾಡಿದ್ದೇನು ಗೊತ್ತಾ?

ದೆಹಲಿ: ಏಷ್ಯಾದಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮುತ್ತಿರುವ ಭಾರತದ ವಿರುದ್ಧ ಶತ್ರು ರಾಷ್ಟ್ರಗಳು ನಿರಂತರವಾಗಿ ಕುತಂತ್ರಗಳು ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ ಅಧಿಕ್ಕಾರಕ್ಕೇರಿದ ನಂತರ ಭಾರತ ವಿಶ್ವಗುರು ಸ್ಥಾನಕ್ಕೇರುತ್ತಿದೆ. ಇದರಿಂದ ಕಂಗಾಲಾಗಿರುವ ಪಕ್ಕದ ರಾಷ್ಟ್ರಗಳು ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾ ಭಾರತದ ವಿರುದ್ಧ ಸದಾ ಹಲ್ಲು ಮಸೆಯುವ ಕಾರ್ಯದಲ್ಲಿ ನಿರತವಾಗಿವೆ.ಈ ಅಪವಾದಕ್ಕೆ ಇದೀಗ ಸಾಕ್ಷ್ಯವೊಂದು ದೊರೆತ್ತಿದ್ದು, ದೇಶದ ರಕ್ಷಣಾ ಇಲಾಖೆಯ ವೆಬ್ ಸೈಟ್ ನ್ನೇ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಲು ಕಾರಣ ಇತ್ತೀಚೆಗೆ ಭಾರತೀಯ ವಾಯುಪಡೆ ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಹೋರಾಟಕ್ಕೆ ಸದಾ ಸಿದ್ಧ ಎಂಬ ಹೇಳಿಕೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಭಾರತೀಯ ವಾಯುಪಡೆಯೂ ‘ಚೀನಾ ಮತ್ತು ಪಾಕಿಸ್ತಾನದಿಂದ ಎದುರಾಗಲಿರುವ ಎಂಥದ್ದೇ ಬಿಕ್ಕಟ್ಟನ್ನು ಎದುರಿಸಲಾಗುವುದು. ಎರಡು ರಾಷ್ಟ್ರಗಳನ್ನು ಎದುರಿಸಲು ನೂತನ ಕಾರ್ಯತಂತ್ರ ರೂಪಿಸಲಾಗುವುದು’ ಎಂದು ಹೇಳಿತ್ತು. ಈ ಹೇಳಿಕೆ ಹೊರಬಿದ್ದ ಕೆಲವೇ ದಿನಗಳಲ್ಲಿ ದೇಶದ ರಕ್ಷಣಾ ಇಲಾಖೆ ವೆಬ್ ಸೈಟ್ ಹ್ಯಾಕ್ ಆಗಿರುವುದು ಹಲವು ಅನುಮಾನಗಳಿಗೆ ಪುಷ್ಠಿ ನೀಡಿದೆ.
ರಕ್ಷಣಾ ಇಲಾಖೆಯ ವೆಬ್ ಸೈಟ್ ಹ್ಯಾಕ್ ಮಾಡಲಾಗಿದ್ದು, ಅದರಲ್ಲಿ ಚೀನಿ ಅಕ್ಷರಗಳು ಮೂಡಿವೆ. ಆದ್ದರಿಂದ ವೆಬ್ ಸೈಟ್ ಹ್ಯಾಕ್ ಮಾಡಿದ್ದರಿಂದ ಹಿಂದೆ ಚೀನಾ ಇರುವುದು ಅನುಮಾನಕ್ಕೆ ಮತ್ತಷ್ಟು ಬಲ ಬಂದಿದೆ. ಈ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದು, ವೆಬ್ ಸೈಟ್ ಹ್ಯಾಕಿಂಗ್ ಮಾಡಿರುವ ವಿಷಯ ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲಿ ವೆಬ್ ಸೈಟ್ ನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
Leave A Reply