ಮುಂದುವರಿದ ಪದಕ ಬೇಟೆ, ಭಾರತಕ್ಕೆ ಲಭಿಸಿದ ಮೂರನೇ ಚಿನ್ನ
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೇಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಭೇಟೆ ಮುಂದುವರಿದಿದ್ದು, ಭಾರತಕ್ಕೆ ಮೂರನೇ ಚಿನ್ನ ಲಭಿಸಿದೆ.
ಶನಿವಾರ ಬೆಳಗ್ಗೆ ನಡೆದ ಪುರುಷರ 77ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಸತೀಶ್ ಕುಮಾರ್ ಶಿವಲಿಂಗಂ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಪದಕ ಭೇಟೆಯನ್ನು ಮುಂದುವರಿಸಿದ್ದಾರೆ. ಇದೀಗ ಭಾರತದ ಕ್ರೀಡಾಪಟುಗಳು ಪಡೆದ ಪದಕಗಳ ಸಂಖ್ಯೆ ಐದಕ್ಕೇರಿದೆ.
ಸತೀಶ್ ಕುಮಾರ್ ಒಟ್ಟು 317 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. ಇಂಗ್ಲೆಂಡ್ ನ ಜಾಕ್ ಒಲಿವರ್ ಸತೀಶ್ ಕುಮಾರ್ ಶಿವಲಿಂಗಂ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಜಾಕ್ ಎರಡನೇ ಸ್ಥಾನ ಗಳಿಸಿ, ಬೆಳ್ಳಿ ಪದಕ ಪಡೆದಿದ್ದಾರೆ. ಆಸ್ಟ್ರೇಲಿಯಾದ ಫ್ರಾಂಕೋಯಿಸ್ ಇಟೌಂಡಿ 305 ಕೆ.ಜಿ ಎತ್ತುವ ಮೂಲಕ ಮೂರನೇ ಸ್ಥಾನಗಳಿಸಿ ಕಂಚಿನ ಪದಕಕಕ್ಕೆ ತೃಪ್ತಿ ಪಟ್ಟರು.
ಇದುವರೆಗೆ ಮೀರಾಬಾಯಿ ಚಾನು, ಸಂಜಿತಾ ಚಾನು (ಚಿನ್ನ), ದೀಪಕ್ ಲತೇರ್(ಕಂಚು) ಹಾಗೂ ಕರ್ನಾಟಕದ ಗುರುರಾಜ್ ಪೂಜಾರಿ ಬೆಳ್ಳಿ ಪದಕ ಪಡೆದಿದ್ದರು.
Leave A Reply