ಬರಲಿದೆ ಭಾರತೀಯ ಸೇನೆಗೆ 110 ಯುದ್ಧ ವಿಮಾನಗಳ ಬಲ, ಕಂಗಾಲಾಗಲಿವೆ ಶತ್ರುರಾಷ್ಟ್ರಗಳು!
ದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತೀಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಜತೆಗೆ ಅವರಿಗೆ ಶಸ್ತ್ರಾಸ್ತ್ರ ಪೂರೈಕೆಗಾಗಿ ಹಣಕಾಸು ಸ್ವಾತಂತ್ರ್ಯವನ್ನೂ ನೀಡುವ ಮೂಲಕ ವೈರಿಗಳಿಂದ ದೇಶವನ್ನು ರಕ್ಷಿಸಲು ಮುಂದಾದರು.
ಈಗ ಅದರ ಮುಂದುವರಿದ ಭಾಗವಾಗಿ ಕೇಂದ್ರ ಸರ್ಕಾರ ಭಾರತೀಯ ವಾಯುದಳವನ್ನು ಮುಂದಾಗಿದ್ದು, 15 ಶತಕೋಟಿ ಅಮೆರಿಕನ್ ಡಾಲರ್ ಹಣ ವ್ಯಯಿಸಿ ಬರೋಬ್ಬರಿ 110 ಯುದ್ಧ ವಿಮಾನಗಳ ಖರೀದಿ ಹಾಗೂ ತಯಾರಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆ ಮೇಕ್ ಇನ್ ಇಂಡಿಯಾಗೆ ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ 110 ಯುದ್ಧ ವಿಮಾನಗಳಲ್ಲಿ ಶೇ.85ರಷ್ಟು ಯುದ್ಧ ವಿಮಾನಗಳನ್ನು ಭಾರತದಲ್ಲೇ ತಯಾರಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ.
ಅಮೆರಿಕದ ಬೋಯಿಂಗ್ ಹಾಗೂ ಲಾಖೀಡ್ ಮಾರ್ಟಿನ್, ಸ್ವೀಡನ್‌ನ ಸಾಬ್ ಮತ್ತು ಫ್ರಾನ್ಸ್ ನ ದಸಾಲ್ಟ್ ವಿಮಾನ ತಯಾರಿಕಾ ಕಂಪನಿಗಳಿಗೆ ಟೆಂಡರ್ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಟೆಂಡರ್ ಕುರಿತು ಮಾಹಿತಿಗಾಗಿ ಮನವಿ ಸಲ್ಲಿಸಲು ಕಂಪನಿಗಳಿಗೆ ಜುಲೈ ವರೆಗೆ ಕಾಲಾವಕಾಶ ನೀಡಲಾಗಿದ್ದುಘಿ, ಟೆಂಡರ್ ಕರೆಯಲಾಗುತ್ತದೆ. ಎಲ್ಲ ಪ್ರಕ್ರಿಯೆ ಮುಗಿಯಲು ಮೂರ್ನಾಲ್ಕು ವರ್ಷವಾಗಬಹುದು ಎಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ಡೋಕ್ಲಾಂ, ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಹಾಗೂ ಜಮ್ಮು ಕಾಶ್ಮೀರ ಗಡಿಯಲ್ಲಿ ಉದ್ಧಟತನಮಾಡುವ ಪಾಕಿಸ್ತಾಕ್ಕೆ ಭಾರತದ ಈ ದಿಟ್ಟ ನಿರ್ಧಾರದಿಂದ ನಡುಕ ಉಂಟಾಗಿದೆ. ಈ 110ಯುದ್ಧ ವಿಮಾನಗಳು ಭಾರತೀಯ ವಾಯುದಳ ಸೇರಿದರೆ, ಭಾರತಕ್ಕೆ ದೈತ್ಯ ಶಕ್ತಿಯೊಂದು ಸೇರ್ಪಡೆಯಾಗಲಿದೆ ಎಂದೇ ವಿಶ್ಲೇಷಿಸಲಾಗಿದೆ.
Leave A Reply