ಭಾರತದ ಮೇಲೆ ಉಗ್ರರ ಕಣ್ಣು: ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ
ದೆಹಲಿ: ಪಾಕಿಸ್ತಾನ ಮೂಲದ ಉಗ್ರರು ದೋಣಿಯಲ್ಲಿ ಸಮುದ್ರ ಮಾರ್ಗದಲ್ಲಿ ಬಂದು ಭಾರತದ ಪಶ್ಚಿಮ ಕರಾವಳಿಯಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ. ಆದ್ದರಿಂದ ಕಟ್ಟೆಚ್ಚರ ವಹಿಸಬೇಕು ಎಂದು ಗುಪ್ತಚರ ಇಲಾಖೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಗುಪ್ತಚರ ಇಲಾಖೆ ಸೂಚನೆ ಮೆರೆಗೆ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ತೀವ್ರ ಮುಂಜಾಗೃತ ಕ್ರಮಗಳನ್ನು ಅಳವಡಿಸಲಾಗಿದೆ.
ಪಾಕಿಸ್ತಾನ ಕರಾಚಿ ಬಳಿ ಭಾರತದ ಹಡಗೊಂದನ್ನು ವಶಕ್ಕೆ ಪಡೆದಿದ್ದು, ಇತ್ತೀಚೆಗೆ ಅದನ್ನು ಬಿಡುಗಡೆ ಮಾಡಿದೆ. ಉಗ್ರರು ಅದೇ ಹಡಗನ್ನು ಬಳಸಿಕೊಂಡು ಭಾರತವನ್ನು ಪ್ರವೇಶಿಸಿ, ಮೀನುಗಾರರು, ಪ್ರವಾಸಿಗರ ವೇಷದಲ್ಲಿ ದಾಳಿ ನಡೆಸುವ ಅಪಾಯವಿದೆ ಎಂದು ಕರಾವಳಿ ರಕ್ಷಣಾ ಪಡೆಗೆ ಮತ್ತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗುಪ್ತಚರ ಇಲಾಖೆ ತಿಳಿಸಿದೆ. ವಿಶೇಷವಾಗಿ ಗೋವಾ, ಮುಂಬೈ ಅಥವಾ ಗುಜರಾತ್ ಭಾರತವನ್ನು ಪ್ರವೇಶಿಸಬಹುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಗುಪ್ತರಚರ ಇಲಾಖೆ ಸೂಚನೆ ಮೆರೆಗೆ ದೇಶಾದ್ಯಂತ ಕಟ್ಟೆಚ್ಚರ ವಹಿಸಿದ್ದು ವಿಶೇಷವಾಗಿ ಕರಾವಳಿಯಲ್ಲಿ ತೀವ್ರ ತಪಾಸಣೆ ವಹಿಸಲಾಗಿದೆ. ಗೋವಾ, ಮಂಗಳೂರು, ಮುಂಬೈ ಸೇರಿ ನಾನಾ ಕಡೆ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಾಗಿದೆ. ಅಲ್ಲದೇ ಗೋವಾದ ಸಮುದ್ರದ ತೀರದಲ್ಲಿರುವ ಕ್ಯಾಸಿನೋಗಳು ವಾಟರ್ ಸ್ಫೋರ್ಟ್ ಕೇಂದ್ರಗಳು ಹಾಗೂ ಬಾರ್ ಗಳಲ್ಲಿ ಸೂಕ್ತ ತಪಾಸಣೆ ವಹಿಸಿ, ಎಚ್ಚರಿಕೆಯಿಂದ ಇರಲು ಗೋವಾ ಸರ್ಕಾರ ಸೂಚಿಸಿದೆ.
Leave A Reply