ಕಾಮನ್ ವೆಲ್ತ್ ಸೂಪರ್ ಸಂಡೆ, ಶೂಟಿಂಗ್ ನಲ್ಲಿ ಭಾರತಕ್ಕೆ 6 ನೇ ಚಿನ್ನದ ಪದಕ
Posted On April 8, 2018

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ತಮ್ಮ ಸಾಧನೆ ಮುಂದುವರಿಸಿದ್ದು, ಭಾನುವಾರದ ಆರಂಭದಲ್ಲೇ ಚಿನ್ನದ ಪದಕಗಳ ಸಂಖ್ಯೆಯನ್ನು ಆರಕ್ಕೇರಿಸಿದ್ದಾರೆ. ಭಾನುವಾರ ಶೂಟೀಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮನು ಬಾಕೇರ್ ಚಿನ್ನದ ಪದಕ ವಿಜೇತರಾಗಿದ್ದಾರೆ. ಈ ಮೂಲಕ ಭಾರತದ ಚಿನ್ನದ ಪದಕಗಳ ಸಂಖ್ಯೆ ಆರಕ್ಕೇರಿದೆ.
ಶನಿವಾರ ಭರ್ಜರಿ ಪ್ರದರ್ಶನ ತೋರಿದ ಭಾರತೀಯ ಆಟಗಾರರು ಎರಡು ಚಿನ್ನವನ್ನು ಬಾಚಿಕೊಂಡಿದ್ದರು. ಇದೀಗ ಭಾನುವಾರವೂ ಪದಕ ಭೇಟೆ ಮುಂದುವರಿಸಿದ್ದು. ಶೂಟಿಂಗ್ ವಿಭಾಗದಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. 16 ವರ್ಷದ ಭಾರತದ ಮನು ಬಾಕೇರ್ 10 ಮೀಟರ್ ಪಿಸ್ತೂಲು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕವನ್ನು ವಶಪಡಿಸಿಕೊಂಡರು. ಇನ್ನು ಇದೇ ವಿಭಾಗದಲ್ಲೇ ಹೀನಾ ಸಿಧು ಬೆಳ್ಳಿ ಪದಕ ಪಡೆಯುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
- Advertisement -
Trending Now
ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
June 29, 2022
Leave A Reply