ಎಲ್ಲರ ಮುಂದೆ ರಾಷ್ಟ್ರಧ್ವಜ ಸುಟ್ಟ ದೇಶದ್ರೋಹಿ ಈಗ ಕಂಬಿಯ ಹಿಂದೆ!
ಚೆನ್ನೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಾಸ್ತವ ಹರಿದಾಡುತ್ತಿತ್ತು. ಇಸ್ರೇಲ್ ಸುತ್ತ ವೈರಿರಾಷ್ಟ್ರಗಳೇ ಇದ್ದರೂ, ಯಾರೂ ಅದರ ಕೂದಲು ಸೋಂಕಿಸಲು ಆಗಿಲ್ಲ. ಏಕೆಂದರೆ ಇಸ್ರೇಲಿನಲ್ಲಿರುವ 84 ಲಕ್ಷ ಜನರೂ ದೇಶ ಪ್ರೇಮಿಗಳೇ ಎಂಬುದು ಒಕ್ಕಣೆಯಾಗಿತ್ತು.
ಆದರೆ ಭಾರತದಲ್ಲಿ ಮಾತ್ರ ಹಾಗಲ್ಲ. ಜಮ್ಮು-ಕಾಶ್ಮೀರದಲ್ಲಿ ನಿಂತ ಯಾವನೋ ಪ್ರತ್ಯೇಕತವಾದಿ ಭಾರತದ ಅನ್ನವನ್ನೇ ತಿಂದು ಗೋ ಬ್ಯಾಕ್ ಇಂಡಿಯಾ ಎನ್ನುತ್ತಾನೆ. ಭಾರತ ಸರ್ಕಾರದ ಸ್ಕಾಲರ್ ಷಿಪ್ ಪಡೆಯುವ ವಿದ್ಯಾರ್ಥಿಗಳು ಭಾರತ್ ತೇರೆ ತುಕಡೆ ಹೋಂಗೆ ಎಂದು ಬಾಯಿಬಡಿದುಕೊಳ್ಳುತ್ತಾರೆ. ಅಂತಹ ದೇಶದ್ರೋಹಿಗಳೇ ನಮ್ಮಲ್ಲಿ ತುಂಬಿದ್ದಾರೆ.
ಇಂತಹ ದೇಶದ್ರೋಹದ ಪ್ರಕರಣ ಈಗ ತಮಿಳುನಾಡಿನಲ್ಲಿ ಸುದ್ದಿಯಾಗಿದ್ದು, ಭಾರತದ ಧ್ವಜವನ್ನು ಸುಟ್ಟುಹಾಕಿದ ದೇಶದ್ರೋಹಿ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ತಮಿಳುನಾಡಿನ ಕುಂಭಕೋಣಂ ತಾಲೂಕು ಪತೀಶ್ವರಂ ಶಾಲೆಯಲ್ಲಿ ಶಿಕ್ಷಕನಾಗಿರುವ ಪ್ರಭು ಎಂಬಾತನನ್ನು ಬಂಧಿಸಲಾಗಿದೆ. ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚಿಸದ ಹಿನ್ನೆಲೆಯಲ್ಲಿ ಈತ ಫೇಸ್ ಬುಕ್ ನಲ್ಲಿ ಭಾರತದ ಧ್ವಜ ಸುಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದ.
ರಾಷ್ಟ್ರಧ್ವಜ ಸುಟ್ಟ ಹಿನ್ನೆಲೆಯಲ್ಲಿ ಅಸಾಂವಿಧಾನಿಕ ಕಾಯ್ದೆ ಅನ್ವಯ ಈತನನ್ನು ಬಂಧಿಸಲಾಗಿದೆ. ಇದೇ ಕಾವೇರಿ ನಿರ್ವಹಣೆ ಮಂಡಳಿ ರಚಿಸದ ನೆಪವೊಡ್ಡಿ ಸಂಸತ್ ಕಲಾಪವನ್ನು ಸಹ ನಡೆಸಲು ತಮಿಳು ನಾಡು ಸಂಸದರು ಬಿಟ್ಟಿರಲಿಲ್ಲ.
Leave A Reply