ಭಾರತ್ ಬಂದ್ ಹಿಂದೆ ಇತ್ತು ಷಡ್ಯಂತ್ರ, ಮೋದಿ ಹಣೆಯಲು ಪ್ರತಿಪಕ್ಷಗಳು ಮಾಡಿದವೇ ಕುತಂತ್ರ?
ದೆಹಲಿ: ಇತ್ತೀಚೆಗೆ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಭಾರತ್ ಬಂದ್ ಹೆಸರಿನಲ್ಲಿ ನಡೆಸಿದ ಹಿಂಸಾಚಾರದ ಹಿಂದೆ ಷಡ್ಯಂತ್ರ ಇದೆ ಎಂದು ಮಧ್ಯಪ್ರದೇಶ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಇದರ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆಯೇ ಎಂಬ ಅನುಮಾನ ಮೂಡಿದೆ.
ಈ ಕುರಿತು ಗುಪ್ತಚರ ಇಲಾಖೆ ವರದಿ ಬಿಡುಗಡೆ ಮಾಡಿದ್ದು, ಏಪ್ರಿಲ್ ಎರಡರಂದು ದೇಶದ ಹಲವೆಡೆ ಬಂದ್ ಹೆಸರಿನಲ್ಲಿ ನಡೆಸಿದ ಹಿಂಸಾಚಾರ ಪೂರ್ವ ನಿಯೋಜಿತವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಸುಮಾರು 35 ಸಂಘಟನೆಗಳು ಮತ್ತು ಅವುಗಳಿಗೆ ಅಪಾರ ಹಣ, ಲಾಠಿ, ಪೋಸ್ಟರ್ ಸೇರಿ ಹಲವು ವಸ್ತುಗಳನ್ನು ನೀಡಿದ್ದು, ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ, ಈ ಷಡ್ಯಂತ್ರದಿಂದ ಹಿಂಸೆಯ ರೂಪ ಪಡೆಯಿತು ಎಂದು ವರದಿಯಲ್ಲಿ ಬಹಿರಂಗಗೊಳಿಸಿದೆ.
ಅಲ್ಲದೆ ಅಂಬೇಡ್ಕರ್ ಮೂರ್ತಿ ಧ್ವಂಸ ಸೇರಿ ಹಲವು ಹಿಂಸಾತ್ಮಕ ಕೃತ್ಯ ಎಸಗಲು ಪೊಲೀಸರ ಸಹಕಾರ ಸಹ ಪಡೆಯಲಾಗಿದೆ. ಹಾಗಾಗಿಯೇ ಬಂದ್ ಹಿಂಸೆಯ ರೂಪ ಪಡೆದು 9 ಮಂದಿ ಮೃತಪಟ್ಟು ಕೋಟ್ಯಂತರ ರೂಪಾಯಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಲು ಕಾರಣವಾಯಿತು ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಏಪ್ರಿಲ್ 2ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಈ ವೇಳೆ ಪ್ರತಿಭಟನೆ ಹಿಂಸಾಚಾರದ ರೂಪ ಪಡೆದು 9 ಜನ ಮೃತಪಟ್ಟಿದ್ದರು. ಮಧ್ಯಪ್ರದೇಶವೊಂದರಲ್ಲೇ 8 ಜನ ಮೃತಪಟ್ಟಿದ್ದರು.
ಆದಾಗ್ಯೂ, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರ ಹಿಂದೆ ಪ್ರತಿಪಕ್ಷಗಳ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸುತ್ತಿರುವ ಬೆನ್ನಲ್ಲೇ, ಗುಪ್ತಚರ ಇಲಾಖೆ ಷಡ್ಯಂತ್ರ ಇದೆ ಎಂದು ತಿಳಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Leave A Reply