• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಅವರು ಇಂದು ಚಾಲನೆ ನೀಡಲಿರುವ ರೈಲಿನಲ್ಲಿ ನಮ್ಮ ದೇಶದ ಆತ್ಮವಿಶ್ವಾಸವೂ ಓಡಲಿದೆ!

TNN Correspondent Posted On April 9, 2018
0


0
Shares
  • Share On Facebook
  • Tweet It

ಪಟನಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ರಚನೆಯಾದ ಬಳಿಕ ಭಾರತೀಯ ರೈಲುಗಳು, ನಿಲ್ದಾಣಗಳ ಅಭಿವೃದ್ಧಿಗೆ ಮುಂದಾಗಿದ್ದು, ಅದರ ಫಲವಾಗಿಯೇ ಇಂದು ದೇಶದ ವಿಮಾನ ನಿಲ್ದಾಣಗಳು ಆಧುನೀಕರಣಗೊಂಡಿದ್ದು ಪ್ರಯಾಣಿಕರಿಗೆ ಉತ್ಕೃಷ್ಟ ಸೌಲಭ್ಯ ಒದಗಿಸುತ್ತಿವೆ.

ಇದರ ಭಾಗವಾಗಿಯೇ ಮಾರ್ಚ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅತೀ ವೇಗದ ವಿದ್ಯುತ್ ಎಂಜಿನ್ ಹೊಂದಿರುವ ರೈಲಿಗೆ ಚಾಲನೆ ನೀಡಲಿದ್ದಾರೆ.

ಭಾರತೀಯ ರೈಲ್ವೆ ಕ್ಷೇತ್ರದಲ್ಲಿ ಈ ರೈಲು ಸಂಚಾರ ಹೊಸ ಮೈಲಿಗಲ್ಲು ಸ್ಥಾಪಿಸಲಾಗುತ್ತಿದೆ ಎಂದೇ ಹೇಳಲಾಗುತ್ತಿದ್ದು, ಇಷ್ಟು ಹಾರ್ಸ್ ಪವರ್ ಎಂಜಿನ್ ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಲಿದೆ. ಆ ಮೂಲಕ ಈ ರೈಲಿನಲ್ಲಿ ನಮ್ಮ ಆತ್ಮವಿಶ್ವಾಸವೂ ಓಡಲಿದೆ.

ಈ ರೈಲು 12 ಸಾವಿರ ಹಾರ್ಸ್ ಪವರ್ (ಎಚ್ ಪಿ) ಇರುವ ಎಂಜಿನ್ ಹೊಂದಿದ್ದು, ಇಷ್ಟು ಹಾರ್ಸ್ ಪವರ್ ಇರುವ ರೈಲುಗಳನ್ನು ಹೊಂದಿರುವ ರಷ್ಯಾ, ಚೀನಾ ಹಾಗೂ ಸ್ವೀಡನ್ ರಾಷ್ಟ್ರಗಳ ನಂತರದ ಸ್ಥಾನವನ್ನು ಭಾರತವೇ ಹೊಂದಲಿದೆ. ಈ ರೈಲು ತಾಸಿಗೆ 110 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದ್ದು, ಇದುವರೆಗೂ ಭಾರತದಲ್ಲಿ 6 ಸಾವಿರ ಹಾರ್ಸ್ ಪವರ್ ಇರುವ ಎಂಜಿನ್ ಹೊಂದಿರುವ  ರೈಲುಗಳು ಮಾತ್ರ ಇದ್ದವು.

ಅಲ್ಲದೆ ಮಾಧೆಪುರದಲ್ಲಿ ಇಂತಹ ವಿದ್ಯುತ್ ಎಂಜಿನ್ ರೈಲುಗಳ ತಯಾರಿಕೆಗೆ ಸ್ಥಾಪಿಸುವ ಕಾರ್ಖಾನೆಗೂ ಮೋದಿ ಚಾಲನೆ ನೀಡಲಿದ್ದು, ಈ ಕಾರ್ಖಾನೆಯಲ್ಲಿ ಮುಂದಿನ 11 ವರ್ಷಗಳ ಅವಧಿಯಲ್ಲಿ 8 ಸಾವಿರ ಹಾರ್ಸ್ ಪವರ್ ಇರುವ ರೈಲುಗಳ ತಯಾರಿಸಲಾಗುತ್ತದೆ. 2021ರ ವೇಳೆಗೆ ಇಂತಹ 60 ರೈಲುಗಳು ದೇಶಾದ್ಯಂತ ಓಡಾಡಲಿವೆ ಎಂದು ತಿಳಿದುಬಂದಿದೆ.

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search