ಉಗ್ರರೊಂದಿಗೆ ಕೈಜೋಡಿಸಿದ ಮಗನನ್ನೇ ಕೊಂದು ಬಿಡಿ ಎಂದ ತಾಯಿ

ಗುವಾಹಟಿ: ದೇಶದ್ರೋಹಿಗಳು, ಭಯೋತ್ಪಾದಕರಿಗೆ ತಮ್ಮ ಕುಟುಂಬದಲ್ಲೇ ಸೂಕ್ತ ಬೆಲೆ, ನೆಲೆ ಇಲ್ಲ ಎಂಬುದನ್ನು ಅಸ್ಸಾಮನ ಕುಟುಂಬವೊಂದು ಸಾಬೀತು ಪಡಿಸಿದೆ. ಹೆತ್ತ ಮಗ ದೇಶದ್ರೋಹಿ ಕಾರ್ಯದಲ್ಲಿ ಭಾಗಿಯಾಗಿದ್ದಾನೆ ಎಂಬುದು ತಿಳಿದ ತಾಯಿಯೇ ಆತನನ್ನು ಗುಂಡಿಕ್ಕಿ ಕೊಂದು ಬಿಡಿ ಎಂದು ಕೇಳಿಕೊಂಡಿದ್ದಾರೆ. ಅಸಾಮ್ ನಲ್ಲಿ ಕಳೆದ 2017 ರ ಜುಲೈನಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಸೇರಿರುವ ವರದಿ ಕೇಳಿರುವ ಪೋಷಕರು ಮತ್ತು ಆತನ ತಾಯಿ ಆತನನ್ನು ಗುಂಡಿಕ್ಕಿ ಕೊಂದು ಬಿಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಅಸ್ಸಾಂನ ಹೋಜೈ ಜಿಲ್ಲೆಯ ಜಮುನ್ಮುಖ ಗ್ರಾಮದ ಇಬ್ರಾಹ್ಮಿ ಜಮನ್ ಅವರ ಮಗ ಖಮರ್ ಉಜ್ಮಾನ್ ಭಯೋತ್ಪಾದಕ ಸಂಘಟನೆ ಸೇರಿದ ವ್ಯಕ್ತಿ. ಈತ ಕಳೆದ 2017ರ ಜುಲೈನಿಂದ ಕಾಣೆಯಾಗಿದ್ದ, ಇತ್ತೀಚೆಗೆ ಈತ ಗನ್ ಹೊಂದಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೇ ಚಿತ್ರಕ್ಕೆ ಆತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದಾನೆ ಮತ್ತು ಆತನ ಗುಪ್ತ ಹೆಸರು ಡಾ.ಹುರೈರಾಃ ಎಂಬ ಅಡಿ ಬರಹ ನೀಡಲಾಗಿತ್ತು.
ಮಗನ ಚಿತ್ರವನ್ನು ನೋಡಿ ತಾಯಿ ಗುರುತು ಹಿಡಿದ್ದಿದ್ದು, ಈತನೇ ನನ್ನ ಮಗ. ಮೊದಲಿಗಿಂತಲು ಸ್ವಲ್ಪ ಸಣ್ಣಾಗಿದ್ದಾನೆ. ನಮ್ಮ ಮಗ ಭಯೋತ್ಪಾದಕರೊಂದಿಗೆ ಕೈಜೋಡಿಸಿದ್ದೇ ಆದರೆ ಆತನಿಗೆ ಗುಂಡಿಕಿ ಕೊಂದು ಬಿಡಬೇಕು. ದೇಶದ್ರೋಹಿಯನ್ನು ನನ್ನ ಮಗ ಎಂದು ಹೇಳಿಕೊಳ್ಳಲು ನನಗೆ ಆಗುವುದಿಲ್ಲ ಎಂದು ಆತನ ತಾಯಿ ತೆಹೆರಾ ಬೇಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಮರ್ ಉಜ್ಮಾನ್ ಕುರಿತು ತನಿಖೆ ನಡೆಸಲಾಗುತ್ತಿದ್ದು, ಕಾಶ್ಮೀರದ ಪೊಲೀಸರೊಂದಿಗೆ ಮಾತುಕತೆ ನಡೆಸಲಾಗಿದೆ. ಆತನನ್ನು ಮರಳಿ ಮನೆಗೆ ಕರೆದುಕೊಂಡು ಬರುವತ್ತ ಚಿಂತನೆ ನಡೆಸಲಾಗುತ್ತಿದೆ ಎಂದು ಅಸ್ಸಾಂ ಡಿಜಿಪಿ ಮುಖೇಶ್ ಸಹಾಯ್ ತಿಳಿಸಿದ್ದಾರೆ.
ಜಮಾನ್ ಪದವಿ ವಿದ್ಯಾರ್ಥಿಯಾಗಿದ್ದು, ಚಾಣಾಕ್ಷ ವಿದ್ಯಾರ್ಥಿಯಾಗಿದ್ದ. ಕಳೆದ ವರ್ಷ ಜಮ್ಮು ಕಾಶ್ಮೀರಕ್ಕೆ ಕುಟುಂಬ ಪ್ರವಾಸ ಹೋದಾಗ ಆತ ಕಳೆದು ಹೋಗಿದ್ದ. ಆದರೆ ಆತ ಭಯೋತ್ಪಾದಕರೊಂದಿಗೆ ಕೈಜೋಡಿಸಿದ್ದು ತಿಳಿದಿರಲಿಲ್ಲ ಎಂದು ಸಹೋದರ ಮಫೀದುಲ್ ಹೇಳುತ್ತಾರೆ.
Leave A Reply