ಒಂದು ಲಕ್ಷ ಯುವಕರಿಗೆ ಉದ್ಯೋಗ ನೀಡಲು ಮುಂದಾದ ಆ ಬಿಜೆಪಿ ಸರ್ಕಾರ ಯಾವುದು ಗೊತ್ತೇ?
ರಾಂಚಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯುವಕರ ಕೌಶಲ ಅಭಿವೃದ್ಧಿಗೊಳಿಸಿ ಉದ್ಯೋಗ ನೀಡುತ್ತಿದ್ದರೂ, ಕೆಲವು ವಿರೋಧಿಗಳು ಮಾತ್ರ ಮೋದಿ ಅವಧಿಯಲ್ಲಿ ಉದ್ಯೋಗವೇ ಸೃಷ್ಟಿಯಾಗಿಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೂ ಮೋದಿ ಅವರು ಇದಾವುದಕ್ಕೂ ಲೆಕ್ಕಿಸಿದೆ ದೇಶದ ಜನರಿಗೆ ಉದ್ಯೋಗ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ನೂತನ ಉದ್ಯೋಗ ಸೃಷ್ಟಿಸುತ್ತಿದ್ದಾರೆ.
ಇದೇ ಮಾದರಿಯಲ್ಲಿ ಜಾರ್ಖಂಡ್ ಸರ್ಕಾರ ಯುವಕರಿಗೆ ಉದ್ಯೋಗ ನೀಡಲು ಮುಂದಾಗಿದ್ದು, ಬರೋಬ್ಬರಿ ಒಂದು ಲಕ್ಷ ಯುವಕರಿಗೆ ಕೌಶಲ ತರಬೇತಿ ನೀಡುವ ಜತೆಗೆ ಉದ್ಯೋಗ ಸಹ ಒದಗಿಸುವ ಯೋಜನೆ ರೂಪಿಸಿದೆ.
ಈ ಕುರಿತು ಮುಖ್ಯಮಂತ್ರಿ ರಘುಬರ್ ದಾಸ್ ಮಾಹಿತಿ ನೀಡಿದ್ದು, ನಮಗೆ ಮಾನವ ಸಂಪನ್ಮೂಲವೇ ಬೃಹತ್ ಶಕ್ತಿಯಾಗಿದ್ದು, ಅವರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಹಾಗಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಗೆ ಚಿಂತನೆ ನಡೆಸಿದ್ದು, ರಾಜ್ಯದ ಆರು ಅತೀ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕೌಶಲಾಭಿವೃದ್ಧಿ ಕೇಂದ್ರ ತೆರೆದು ಯುವಕರಿಗೆ ತರಬೇತಿ ನೀಡುವಂತೆ ಈಗಾಗಲೇ ಜಾರ್ಖಂಡ್ ಕೌಶಲಾಭಿವೃದ್ಧಿ ಮಿಶನ್ ಸೊಸೈಟಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ವಿವರಿಸಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಆಡಳಿತದಲ್ಲಿ ಉದ್ಯೋಗವೇ ಸೃಷ್ಟಿಯಾಗುತ್ತಿಲ್ಲ ಎಂದು ಬೊಬ್ಬೆ ಹಾಕುವವರ ಬಾಯಿಯನ್ನು ಜಾರ್ಖಂಡ್ ಬಿಜೆಪಿ ಸರ್ಕಾರ ಮುಚ್ಚಿಸಿದ್ದು, ಒಂದು ಲಕ್ಷ ಜನರಿಗೆ ಉದ್ಯೋಗ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ.
Leave A Reply