ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿರುವ ಹಿಂದಿನ ಮರ್ಮವೇನು ಗೊತ್ತಾ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ತಾವೊಬ್ಬ ಸಮಾಜವಾದಿ ಎನ್ನುತ್ತಲೇ 750 ಕೆಜಿ ತೂಕದ ಸೇಬಿನ ಹಾರ ಹಾಕಿಕೊಂಡು ಮಿಂಚುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಮುಖ್ಯಮಂತ್ರಿಯವರು ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿಎಂ ಸಿದ್ದರಾಮಯ್ಯನವರು ತಮ್ಮ ವರ್ಚಸ್ಸು ಪ್ರದರ್ಶಿಸಲು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆ ಎಂದು ಬಿಂಬಿಸಲಾಗುತ್ತಿದೆಯಾರೂ, ಸ್ವತಃ ಸಿದ್ದರಾಮಯ್ಯನವರಿಗೇ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲುವ ಭೀತಿ ಎದುರಾಗಿದ್ದು, ಯಾವುದಕ್ಕೂ ಇರಲಿ ಎಂದು ಬಾದಾಮಿಯಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂದು ತಿಳಿದುಬಂದಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಲೆಕ್ಕಾಚಾರದ ಪ್ರಕಾರ ಬಿಜೆಪಿ ಬಲಿಷ್ಠವಾಗಿದೆ. ಅಲ್ಲದೆ ಇರುವ 2.5 ಲಕ್ಷ ವೋಟುಗಳಲ್ಲಿ ಜೆಡಿಎಸ್ ನ ಜಿ.ಟಿ.ದೇವೇಗೌಡರೇ ತಮ್ಮ ಸಮುದಾಯದ ಸುಮಾರು 70 ಸಾವಿರ ವೋಟುಗಳನ್ನು ಪಡೆಯಲಿದ್ದು, ಸಿದ್ದರಾಮಯ್ಯನವರು ಈ ಬಾರಿ ಸೋಲುತ್ತಾರೆ ಎಂದೇ ಹೈಕಮಾಂಡ್ ಲೆಕ್ಕಾಚಾರ ಮಾಡಿದೆ. ಹಾಗಾಗಿ ಸಿಎಂ ಅವರಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿ ಶತಾಯ ಗತಾಯ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ತರಲು ಹೈಕಮಾಂಡ್ ತೀರ್ಮಾನಿಸಿದ್ದು, ಒಂದು ವೇಳೆ ಸಿದ್ದರಾಮಯ್ಯನವರು ಸೋತು ಹೋದರೆ ಮುಖಭಂಗವಾಗುತ್ತದೆ ಎಂದು ಕುರುಬರೇ ಜಾಸ್ತಿ ಇರುವ ಬಾದಾಮಿಯಿಂದಲೂ ಸ್ಪರ್ಧಿಸಲು ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಆದರೆ ರಾಜ್ಯವನ್ನು ಐದು ವರ್ಷಗಳಿಂದ ಆಳಿದವರಿಗೆ, ಅಹಿಂದಪರ, ಅವರ ಪರ, ಇವರ ಪರ ಎಂದು ಹೇಳಿಕೊಂಡು ತಿರುಗಾಡಿದವರಿಗೆ ಈಗ ಚುನಾವಣೆಯಲ್ಲಿ ಒಂದೇ ಕ್ಷೇತ್ರದಲ್ಲಿ ನಿಂತು ಗೆಲ್ಲುವ ವಿಶ್ವಾಸ ಇಲ್ಲಿದಿರುವುದು ನೋಡಿದರೆ ಇವರು ಹೇಗೆ ಆಡಳಿತ ನಡೆಸಿದರು ಐದು ವರ್ಷ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಸಿದ್ದರಾಮಯ್ಯನವರೇ ಉತ್ತರಿಸಬೇಕು.
Leave A Reply