ಪ್ರತಿ ಮುಸ್ಲಿಮನೂ ಆಯುಧ ಹೊಂದಬೇಕು ಎಂದು ಹೇಳಿದ ಅಧರ್ಮ ಬೋಧಕನ ಅರ್ಜಿ ತಿರಸ್ಕರಿಸಿದ ಕೋರ್ಟ್!
ಲಖನೌ: ಜಾಕೀರ್ ನಾಯ್ಕ್. ಈ ಹೆಸರು ಕೇಳುತ್ತಲೇ ಈತನೊಬ್ಬ ಇಸ್ಲಾಂ ಧರ್ಮ ಬೋಧಕ ಎಂದು ನೆನಪಾಗುತ್ತದೆ. ಆದರೆ ಈತ ಯಾವಾಗ ಪ್ರತಿ ಮುಸ್ಲಿಮನೂ ಒಂದು ಆಯುಧ ಹೊಂದಿರಬೇಕು ಎಂದು ಅಧರ್ಮ ಬೋಧಿಸಲು ಆರಂಭಿಸಿದನೋ ಆಗಲೇ ಜನ ಈತನ ನಂಬುವುದನ್ನು ನಿಲ್ಲಿಸಿದರು. ಅಷ್ಟೇ ಅಲ್ಲ, ಈತನ ಅಧರ್ಮ ಬೋಧನೆಗೆ ಪ್ರತಿಯಾಗಿ ಹಲವು ಕೇಸುಗಳು ದಾಖಲಾದವು. ಕೊನೆಗೆ ಈತ ದೇಶವನ್ನೇ ಬಿಟ್ಟು ಪರಾರಿಯಾಗಬೇಕಾಯಿತು.
ಇಂತಹ ಅಧರ್ಮ ಬೋಧಕ ತನಗೆ ಜಾಮೀನು ರಹಿತ ವಾರೆಂಟ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಉತ್ತರ ಪ್ರದೇಶದ ಅಲಹಾಬಾದ್ ಹೈಕೊರ್ಟ್ ಸಾರಾಸಗಟವಾಗಿ ತಿರಿಸ್ಕರಿಸಿದ್ದು, ಜಾಕೀರ್ ನಾಯ್ಕ್ ಗೆ ತೀವ್ರ ಹಿನ್ನಡೆ ಹಾಗೂ ಮುಖಭಂಗವಾಗಿದೆ.
ಇಸ್ಲಾಮಿಕ್ ಸಂಶೋಧನೆ ಫೌಂಡೇಷನ್ ಮುಖ್ಯಸ್ಥನೂ ಆಗಿರುವ ಈತನ ವಿರುದ್ಧ ಧರ್ಮದ ಧರ್ಮದ ನಡುವೆ ಕಿಚ್ಚು ಹೊತ್ತಿಸಿದ ಆರೋಪವಿದ್ದು, 2010ರಲ್ಲಿ ಝಾನ್ಸಿ ನ್ಯಾಯಾಲಯ ನಾಯ್ಕ್ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಮಾಡಿತ್ತು.
ಈಗ ಇದನ್ನು ರದ್ದುಗೊಳಿಸಬೇಕು ಎಂದು ಜಾಕೀರ್ ನಾಯ್ಕ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅದನ್ನು ನ್ಯಾಯಮೂರ್ತಿ ಅಮರ್ ಸಿಂಗ್ ಚೌಹಾಣ್ ತಿರಸ್ಕರಿಸಿದ್ದಾರೆ. ಅಲ್ಲದೆ ಏಪ್ರಿಲ್ 28ರಂದು ಪ್ರಕರಣದ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.
ಧರ್ಮ ಧರ್ಮದ ನಡುವೆ ಕಿಚ್ಚು ಹೊತ್ತಿಸುವ, ಸಾಮಾಜಿಕ ಶಾಂತಿ ಕದಡಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಜಾಕೀರ್ ನಾಯ್ಕ್ ವಿರುದ್ಧ ಹಲವು ಪ್ರಕರಣ ದಾಖಲಿಸಲಾಗಿದ್ದು, ಈತ ಪ್ರಸ್ತುತ ದೇಶದಿಂದಲೇ ತಲೆಮರೆಸಿಕೊಂಡಿದ್ದಾನೆ.
Leave A Reply