ಸ್ವದೇಶಿ ಜಿಪಿಎಸ್ ನ ನಾವಿಕ್ ಯೋಜನೆ ಪೂರ್ಣ: ಉಪಗ್ರಹ ನಭಕ್ಕೆ ಸೇರಿಸಿದ ಇಸ್ರೋ
ದೆಹಲಿ: ನಿರಂತರ ಹೊಸ ಸಂಶೋಧನೆಯಲ್ಲಿ ತೊಡಗುತ್ತಾ, ತಂತ್ರಜ್ಞಾನದಲ್ಲಿ ಭಾರತವನ್ನು ಸ್ವಾವಲಂಭನೆಯ ಹಾದಿಯತ್ತ ಕರೆದ್ಯೊಯುತ್ತಿರುವ ಇಸ್ರೋ ಇದೀಗ ಮತ್ತೊಂದು ಮಹತ್ತರ ಸಾಧನೆಯನ್ನು ಮಾಡಿದೆ. ಸ್ವದೇಶಿ ಜಿಪಿಎಸ್ ಕಾರ್ಯಾಚರಣೆಗೆ ಅಭಿವೃದ್ಧಿಪಡಿಸಿರುವ ರೀಜನಲ್ ನ್ಯಾವಿಗೇಷನ್ ಉಪಗ್ರಹ ಸಿಸ್ಟಂ (ನಾವಿಕ್)ಉಪಗ್ರಹಗಳ ಸಮೂಹಕ್ಕೆ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿ ನಾವಿಕ್ ಯೋಜನೆಯನ್ನು ಪೂರ್ಣ ಮಾಡಿದೆ.
ಬೆಳಗ್ಗೆ 4.04 ಗಂಟೆಗೆ ಇಸ್ರೋದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಪಿಎಸ್‌ಎಲ್‌ವಿ -ಸಿ41 ಮೂಲಕ ಐಆರ್‌ಎನ್‌ಎಸ್‌ಎಸ್ -1I ಉಪಗ್ರಹ ಯಶಸ್ವಿಯಾಗಿ ನಭೋ ಮಂಡಲಕ್ಕೆ ಸೇರಿಸಿದೆ. ಈ ಉಪಗ್ರಹ ನ್ಯಾವಿಗೇಷನ್ ಮತ್ತು ರೇಂಜಿಂಗ್ ಕಾರ್ಯಾಚರಣೆ ನಡೆಸಲಿದ್ದು, ಉಡಾವಣೆಯಾದ ನಿಗಧಿಯಂತೆ ಉಪಗ್ರಹ 19 ನಿಮಿಷದಲ್ಲಿ ಕಕ್ಷೆ ಸೇರಿದೆ.
ಈ ಉಪ್ರಗಹವನ್ನು ಬೆಂಗಳೂರು ಅಲ್ಫಾ ಡಿಸೈನ್ ಟೆಕ್ನಾಲಜಿಸ್ ಇಸ್ರೊ ಸಹಭಾಗಿತ್ವದಲ್ಲಿ ರೂಪಿಸಿದ್ದು, ಕಕ್ಷೆಯಲ್ಲಿ ದೋಷಯುಕ್ತ ಕಾರ್ಯ ನಿರ್ವಹಣೆಯಲ್ಲಿರುವ ಐಆರ್‌ಎನ್‌ಎಸ್‌ಎಸ್-1I ಎ ಬದಲಿಗೆ ಪಿಎಸ್‌ಎಲ್‌ವಿ-ಸಿ4 1,425 ಕೆ.ಜಿ ತೂಕ ಹೊಂದಿದೆ.
ಬಹು ನಿರೀಕ್ಷಿತ, ಮತ್ತು ಸ್ವದೇಶಿ ಜಿಪಿಆರ್ ಎಸ್ ಹೊಂದಲು ಆರಂಭಿಸಿದ್ದ ನಾವಿಕ್ ಯೋಜನೆಯ ಕೊನೆಯ ಹಂತ ಪೂರ್ಣಗೊಂಡಿದೆ. ಫೂಲ್‌ಪ್ರೂಫ್ ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಗ್ನಲ್‌ಗಳನ್ನು ಒದಗಿಸಲು ಏಂಟು ಉಪಗ್ರಹಗಳನ್ನು ನಭಕ್ಕೆ ಸೇರಿಸಬೇಕಿತ್ತು. ಗುರುವಾರ ಆ ಯೋಜನೆಯ ಕೊನೆಯ ಉಪಗ್ರಹ ನಭಕ್ಕೆ ಸೇರಿಸಿದ್ದು, ನಾವಿಕ್ ಯೋಜನೆ ಪೂರ್ಣಗೊಂಡಿದೆ.
Leave A Reply