ಅಷ್ಟಕ್ಕೂ ನರೇಂದ್ರ ಮೋದಿ ಅವರೇ ಉಪವಾಸ ಕೂರುವಂತಾಗಲು ಕಾಂಗ್ರೆಸ್ ಹೇಗೆ ಕಾರಣ ಗೊತ್ತೇ?

ದೆಹಲಿ: ಕಳೆದ ವಾರ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ಸಿನ ಮುಖಂಡರು ಹೊಟ್ಟೆ ಬಿರಿಯೋ ತನಕ ತಿಂದು ಉಪವಾಸ ಆಚರಿಸುವ ಮೂಲಕ ಉಪವಾಸದ ಮೌಲ್ಯವನ್ನು ಕಳೆದುಬಿಟ್ಟರು. ಅಷ್ಟರಮಟ್ಟಿಗೆ ಕಾಂಗ್ರೆಸ್ ಜನರ ನಂಬಿಕೆಯಿಂದ ದೂರ ಉಳಿಯುವಂತೆ ಮಾಡಿತು ಈ ಪ್ರಕರಣ.
ಆದರೆ ಪ್ರಧಾನಿಯಂಥ ಪ್ರಧಾನಿಯವರೇ ಇಂದು ಉಪವಾಸ ಆಚರಿಸುತ್ತಿದ್ದಾರೆ. ಅದೂ ಏಕೆ ಗೊತ್ತಾ? ಇದೇ ಕಾಂಗ್ರೆಸ್ಸಿನ ಉಪಟಳದಿಂದ. ಹೌದು, ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಕಲಾಪದಲ್ಲಿ ಬರೀ ಗದ್ದಲ ಎಬ್ಬಿಸುವ ಮೂಲಕ ಸುಗಮವಾಗಿ ಕಲಾಪ ನಡೆಯಲು ಬಿಡದ ಕಾಂಗ್ರೆಸ್, ದೇಶದ ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಪೋಲು ಮಾಡಿತು. ಇದರಿಂದ ಮನನೊಂದಿರುವ ಪ್ರಧಾನಿ ಮೋದಿಯವರು ಗುರುವಾರ ಉಪವಾಸ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ, ಸಂಸತ್ತಿನಲ್ಲಿ ಯಾವುದೇ ವಿಧೇಯಕ ಅಂಗೀಕಾರಕ್ಕೂ ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ರಾಜ್ಯಸಭೆ ಹಾಗೂ ಲೋಕಸಭೆಯ ಅಮೂಲ್ಯ 250 ಗಂಟೆಯನ್ನು ವ್ಯರ್ಥಮಾಡಲಾಗಿದೆ. 2017-18ನೇ ಸಾಲಿನಲ್ಲಿ ಲೋಕಸಭೆ ಅಧಿವೇಶನಕ್ಕೆ 430 ಕೋಟಿ ರೂ. ಹಾಗೂ ರಾಜ್ಯಸಭೆಗೆ 260 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಆದರೆ ಅಧಿವೇಶನವೇ ಸುಗಮವಾಗಿ ನಡೆಯಲು ಬಿಡದ ಕಾಂಗ್ರೆಸ್ ಬಹುತೇಕ ಹಣ ನಷ್ಟ ಮಾಡಿದೆ.
ಕಳೆದ ಒಂದು ವರ್ಷದಲ್ಲಿ ನಡೆದ 29 ಕಲಾಪಗಳಲ್ಲಿ ಕೇವಲ 35 ಗಂಟೆ ಮಾತ್ರ ಚರ್ಚೆಯಾಗಿದ್ದು, ಉಳಿದ ಎಲ್ಲ ಅವಧಿಯೆಲ್ಲ ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಗಲಾಟೆ ನಡೆಸಿಯೇ ವ್ಯರ್ಥ ಮಾಡಿವೆ. ಖಂಡಿತವಾಗಿಯೂ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಗಲಾಟೆ ಮಾಡುವ ಹಕ್ಕು ಹೊಂದಿವೆ.
ಆದರೆ ಗಂಭೀರ ವಿಷಯಗಳಲ್ಲಿ ಸರ್ಕಾರ ಎಡವಿದಾಗ ಎಲ್ಲ ಪ್ರತಿಪಕ್ಷಗಳು ಅಧಿವೇಶನದಲ್ಲಿ ಗಲಾಟೆ, ಪ್ರತಿಭಟನೆ ಮಾಡುತ್ತವೆ. ಆದರೆ ಯಾವುದೇ ಕ್ಷುಲಕ್ಕ ಕಾರಣವೊಡ್ಡಿ ವರ್ಷದಲ್ಲಿ ನಡೆದ ಎಲ್ಲ ಕಲಾಪಕ್ಕೂ ಅಡ್ಡಿ ಮಾಡಿದರೆ, ಅಲ್ಲಿ ಸಮಯ ಹಾಗೂ ತೆರಿಗೆ ಎರಡೂ ವ್ಯರ್ಥ. ಇದರಿಂದ ಸಾರ್ವಜನಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ.
Leave A Reply