ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಕೀಲಿಕೆ ಓದಿದ ನಿಮಗೆ ನೀತಿ ಸಂಹಿತೆಯ ಜ್ಞಾನ ಇಲ್ಲವೇ?
ಮೈಸೂರು: ಸನ್ಮಾನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಎಲ್ ಬಿ ಓದಿದವರು. ಕೆಲವು ವರ್ಷ ವಕೀಲಿಕೆಯನ್ನೂ ಮಾಡಿದವರು. ಮೇಲಾಗಿ ಕಾನೂನು ತಿಳಿದುಕೊಂಡವರು. ಇದೇ ಹೆಸರಲ್ಲಿ ಕೆಲವೊಮ್ಮೆ ಬಡಾಯಿಯನ್ನೂ ಕೊಚ್ಚಿಕೊಳ್ಳುವವರು.
ಆದರೆ ಇಷ್ಟೆಲ್ಲ ತಿಳಿದುಕೊಂಡಿರುವ, ಲಾಯರ್ ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ನೀತಿ ಸಂಹಿತೆಯ ಬಗ್ಗೆ ಗೊತ್ತಿಲ್ಲವೇ ಎಂಬ ಅನುಮಾನ ಕಾಡುವಂತಹ ಪ್ರಕರಣವೊಂದು ಸುದ್ದಿಯಾಗಿದೆ.
ಹೌದು, ಎಚ್.ಡಿ.ಕೋಟೆ ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿಬಡವರಿಗೆ ವಿತರಿಸುವ ತೊಗರಿ ಬೇಳೆ ಪ್ಯಾಕೆಟ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಡಿತರ ಪದಾರ್ಥಗಳ ಮೇಲೆ ಇರುವ ರಾಜಕಾರಣಿಗಳ ಭಾವಚಿತ್ರ ಮುಚ್ಚಿಸಿ ವಿತರಣೆ ಮಾಡಬೇಕು. ಆದರೆ ಸಿದ್ದರಾಮಯ್ಯನವರು ಮತದ ಆಸೆಗಾಗಿ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸೂಚಿಸದೆ, ಅಧಿಕಾರಿಗಳಿಂದಲೂ ಮಾಹಿತಿ ನೀಡಿಸದೆ ವಿತರಿಸುತ್ತಿದ್ದಾರೆ ಎಂದು ತಾಲೂಕು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಕೂಡಲೇ ಈ ಕುರಿತು ಸುದ್ದಿಯಾಗುತ್ತಲೇ ಚುನಾವಣಾಧಿಕಾರಿ ನ್ಯಾಯಬೆಲೆ ಅಂಗಡಿಯವರಿಗೆ ಸೂಚನೆ ನೀಡಿದ್ದು, ಬಳಿಕ ಅಂಗಡಿ ಮಾಲೀಕರು ಪ್ಯಾಕೇಟ್ ಮೇಲಿದ್ದ ಸಿದ್ದರಾಮಯ್ಯನವರ ಭಾವಚಿತ್ರ ಕಾಣದಂತೆ ಸ್ಟಿಕ್ಕರ್ ಅಂಟಿಸಿದ್ದಾರೆ ಎಂದು ತಿಳಿದುಬಂದಿದೆ.
ಆದಾಗ್ಯೂ ಮತದ ಆಸೆಗಾಗಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಕುಕ್ಕರ್ ನೀಡುತ್ತಿದ್ದು, ಒಂದು ಲಾರಿ ಕುಕ್ಕರ್ ವಶಪಡಿಸಿಕೊಳ್ಳಲಾಗಿತ್ತು. ಈಗ ಮುಖ್ಯಮಂತ್ರಿ ಅವರ ಭಾವಚಿತ್ರ ಇರುವ ಪಡಿತರ ಧಾನ್ಯದ ಪ್ಯಾಕೆಟ್ ನೀಡಲಾಗುತ್ತಿದೆ. ಹೇಳಿ ಸಿದ್ದರಾಮಯ್ಯನವರೇ ಇದು ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ? ನೀವು ಕಲಿತ ಕಾನೂನು ಕಾಲೇಜಿನಲ್ಲಿ ಇದನ್ನೆಲ್ಲ ಹೇಳಿಕೊಟ್ಟಿಲ್ಲವೇ ಅಥವಾ ಮತ ಪಡೆಯಲು ನೀವು ಮಾಡುತ್ತಿರುವ ತಂತ್ರವೇ?
Leave A Reply