ಮೇಕ್ ಇಂಡಿಯಾ ಯೋಜನೆಗೆ ನಮೋ ಎಂದ ಅಮರಿಕ, ಭಾರತ ಬಯಸಿದರೆ ಜಾವೆಲಿನ್ ಕ್ಷಿಪಣಿ ತಯಾರಿಸಲು ಸಹ ಒಪ್ಪಿಗೆ
ದೆಹಲಿ: ಒಂದು ಕಾಲದಲ್ಲಿ ನರೇಂದ್ರ ಮೋದಿ ಅವರಿಗೆ ವೀಸಾ ಸಹ ನೀಡಲು ಒಪ್ಪದಿದ್ದ ಅಮೆರಿಕ ಈಗ ವಿಶ್ವ ನಾಯಕ ನರೇಂದ್ರ ಮೋದಿ ಅವರಿಗೆ ಮನಸೋತಿದ್ದು, ಅಮೆರಿಕದ ಲಾಖೀಡ್ ಮಾರ್ಟೀನ್ ಕಂಪನಿ ಭಾರತಕ್ಕೆ ಯುದ್ಧ ವಿಮಾನ ತಯಾರಿಸಿ ನೀಡಲು ಒಪ್ಪಿಗೆ ಸೂಚಿಸಿತ್ತು.
ಆದರೆ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಈ ಕಂಪನಿ ಈಗ ಭಾರತಕ್ಕಾಗಿ ಜಾವೆಲಿನ್ ಕ್ಷಿಪಣಿ ಸಹ ತಯಾರಿಸಲು ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.
ಈಗಾಗಲೇ ಭಾರತದಲ್ಲಿ ಲಾಖೀಡ್ ಮಾರ್ಟಿನ್ ಸಂಸ್ಥೆ ಭಾರತದಲ್ಲಿ ಘಟಕ ಸ್ಥಾಪಿಸಿ ಮೇಕ್ ಇನ್ ಇಂಡಿಯಾ ಮೂಲಕ ಎಫ್ 16 ಯುದ್ಧ ವಿಮಾನ ತಯಾರಿಸುವ ಹೊಣೆ ಹೊತ್ತಿದ್ದು, ಮುಂದಿನ ದಿನಗಳಲ್ಲಿ ಸೇನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಜಾವೆಲಿನ್ ಕ್ಷಿಪಣಿ ಸಹ ತಯಾರಿಸಲು ಅವಕಾಶ ಸಿಕ್ಕರೆ ನಿರ್ಮಿಸಲಾಗುವುದು ಎಂದು ಕಂಪನಿ ಆಶಯ ವ್ಯಕ್ತಪಡಿಸಿದೆ.
ಈ ಕುರಿತು ಕಂಪನಿಯ ಅಂತಾರಾಷ್ಟ್ರೀಯ ಉದ್ಯಮ ವಿಭಾಗದ ಮುಖ್ಯಸ್ಥರಾಗಿರುವ ರಾಂಡಾಲ್ ಎಲ್. ಹೌವಾರ್ಡ್ ಮಾಹಿತಿ ನೀಡಿದ್ದು, ಭಾರತ ಸರ್ಕಾರ ಬಯಸಿದರೆ ಮೇಕ್ ಇಂಡಿಯಾ ಯೋಜನೆಯ ಅನ್ವಯವೇ ಭಾರತದಲ್ಲಿ ಜಾವೆಲಿನ್ ಕ್ಷಿಪಣಿ ತಯಾರಿಸಲು ನಾವು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಭಾರತದ ವಾಯುದಳ ಬಲಪಡಿಸುವ ದೃಷ್ಟಿಯಿಂದ ಸರ್ಕಾರ 15 ಶತಕೋಟಿ ಡಾಲರ್ ವೆಚ್ಚದಲ್ಲಿ 120 ಎಫ್ 16 ಯುದ್ಧ ವಿಮಾನ ತಯಾರಿಕೆಗೆ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಭಾರತಕ್ಕಾಗಿ ಜಾವೆಲಿನ್ ಕ್ಷಿಪಣಿ ಸಹ ತಯಾರಿಸಲು ಅಮೆರಿಕ ಕಂಪನಿ ಸಿದ್ಧವಿರುವುದು ಸಂತಸದ ಸಂಗತಿ. ಅದೂ ಮೇಕ್ ಇಂಡಿಯಾ ಯೋಜನೆಯ ಅನ್ವಯವೇ!
Leave A Reply