ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕಿದೆ ಅಪಾರ ಮಹತ್ವ, ಉತ್ತರ ಪ್ರದೇಶದಲ್ಲಿ 12 ನಾಯಕರು ಬಿಜೆಪಿ ಸೇರ್ಪಡೆ!
ಲಖನೌ: ಪ್ರಧಾನಿ ಮೋದಿ ಅವರ ನಾಯಕತ್ವದ ಮೋಡಿಯೇ ಅಂಥಾದ್ದು. ಅವರು ವಿದೇಶಕ್ಕೆ ಹೊರಡಲೆಂದು ವಿಮಾನ ಹತ್ತಿದರೆ ಸ್ವಾಗತಿಸಲು ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಲ್ಲುತ್ತದೆ. ಆ ದೇಶಕ್ಕೆ ಹೋದರೆ ಕೆಂಪು ಹಾಸಿ ಸ್ವಾಗತ ಮಾಡುತ್ತದೆ. ಇನ್ನು ಅವರು ದೇಶದ ಯಾವ ಮೂಲೆಗೆ ಹೋದರೂ ಲಕ್ಷ ಲಕ್ಷ ಜನ ಸೇರುತ್ತಾರೆ. ಮೋದಿ ಮೋದಿ ಎಂದು ಕೂಗುವ ಮೂಲಕ ಬೆಂಬಲ ಸೂಚಿಸುತ್ತಾರೆ. ರಾಹುಲ್ ಗಾಂಧಿ ಹೋದಾಗಲೂ ಅವರ ಎದುರು ಮೋದಿ ಮೋದಿ ಎಂದು ಕೂಗಿದ್ದು, ಮೋದಿ ಅವರ ನಾಯಕತ್ವಕ್ಕೆ ಹಿಡಿದ ಕನ್ನಡಿ.
ಇದೇ ಕಾರಣಕ್ಕೆ ಕೇಂದ್ರದಲ್ಲಿ ಜನ ಬಿಜೆಪಿ ಸರ್ಕಾರ ಇರುವಂತೆ ನೋಡಿಕೊಂಡಿದ್ದಾರೆ. ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರುವಂತೆ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೋದಿ ಅವರ ಅಭಿವೃದ್ಧಿಪರ ಆಡಳಿತ ಮೆಚ್ಚಿ ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಅದರ ಜತೆಗೆ ನೂರಾರು ನಾಯಕರು ಬಿಜೆಪಿ ಸೇರ್ಪಡೆಯಾಗಿ ಮೋದಿ ಅವರಂತೆ ಅಭಿವೃದ್ಧಿ ಮಾಡಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆ ನಿದರ್ಶನ ಎಂಬಂತೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ 12ಕ್ಕೂ ಹೆಚ್ಚು ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಾವು ಬಿಜೆಪಿ ಸೇರಲು ನರೇಂದ್ರ ಮೋದಿ ಅವರ ಆಡಳಿತ ವೈಖರಿಯೇ ಕಾರಣ ಎಂದು ತಾವು ಬಿಜೆಪಿ ಸೇರುತ್ತಿರುವ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಅದು ಮೋದಿ ಅವರ ಆಡಳಿತದ ತಾಕತ್ತು.
ಹೌದು, ಎಸ್ಪಿಯ ಮುಖಂಡರಾಗಿದ್ದ ಅಶೋಕ್ ರಾವತ್, ಜೈ ಪ್ರಕಾಶ್ ರಾವತ್ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ನಾಥ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರ ಜತೆಗೆ ಮಾಜಿ ಶಾಸಕರಾದ ಪ್ರೇಮ್ ಪ್ರಕಾಶ್, ಬ್ರಿಜೇಂದ್ರ ಸಿಂಗ್, ಸಮಾಜ ವಾದಿ ಪಕ್ಷದ ಮುಖಂಡರಾದ ಸಂಜೀವ್ ವಕ್ತಾರ ಸಂಜೀವ್ ಮಿಶ್ರಾ ಸೇರಿ ಹಲವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಒಂದು ದೇಶದ ನಾಯಕನಾದವನು ತಾನು ಅಭಿವೃದ್ಧಿ ಪರ ಆಡಳಿತ ನಡೆಸುವ ಜತೆಗೆ ತನ್ನ ಕೆಳಗಿನವರಿಗೂ ಇದೇ ಮನೋಭಾವ ಮೂಡಿಸುವ ಮೂಲಕ ಎಲ್ಲರನ್ನೂ ಅಭಿವೃದ್ಧಿಯತ್ತ ಕೊಂಡೊಯ್ದರೆ ಮಾತ್ರ ದೇಶದ ಏಳಿಗೆ ಸಾಧ್ಯ ಎಂಬ ಮಾತಿದೆ. ಇದಕ್ಕೆ ಕಳಶವಿಟ್ಟಂತೆ ಪ್ರಧಾನಿ ಮೋದಿ ಅವರು ಆಡಳಿತ ನಡೆಸುತ್ತಿದ್ದಾರೆ ಎಂಬುದೇ ಸಂತಸದಾಯಕ ಸಂಗತಿ.
Leave A Reply