ಉನ್ನಾವೋ ಅತ್ಯಾಚಾರ ಆರೋಪಿಗಳ ಶಿಕ್ಷೆ ಕುರಿತು ಯೋಗಿ ಆದಿತ್ಯನಾಥರು ಏನು ಹೇಳಿದ್ದಾರೆ ಗೊತ್ತೇ?
ಲಖನೌ: ಬಿಜೆಪಿ ಆಡಳಿತದ ಯಾವುದೇ ರಾಜ್ಯದಲ್ಲಿ ಯಾವುದೇ ಅಚಾತುರ್ಯ, ಅನಾಹುತವಾದರೂ ಕಾಂಗ್ರೆಸ್ಸಿಗರು ದೇಶವೇ ಕೇಳುವ ಹಾಗೆ ಬೊಬ್ಬೆ ಹಾಕುತ್ತಾರೆ. ಇದು ಪ್ರಧಾನಿ ಮೋದಿ ಅವರ ವೈಫಲ್ಯ ಎಂದು ಘೀಳಿಡುತ್ತಾರೆ.
ಆದರೆ ಬಿಜೆಪಿ ಮಾತ್ರ, ಯಾವುದೇ ಅನಾಹುತ ನಡೆದರೂ ನ್ಯಾಯಸಮ್ಮತವಾಗಿ ಆಡಳಿತ ನಡೆಸುತ್ತಿದೆ. ಇದಕ್ಕೆ ಪ್ರತಿರೂಪವಾಗಿ ಉನ್ನಾವೋದಲ್ಲಿ 16 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ಹೆಸರು ಕೇಳಿಬಂದಿದ್ದು, ಈ ಕುರಿತು ಯೋಗಿ ಆದಿತ್ಯನಾಥ ಖಡಕ್ ಆಗಿ ಮಾತನಾಡಿದ್ದಾರೆ.
ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥರು, ಅಪರಾಧ ಎಸಗುವ ಯಾರೇ ಆದರೂ ನುಣುಚಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿ ಎಷ್ಟೇ ಪ್ರಭಾವಿಯಾಗಿದ್ದರೂ ಅವರಿಗೆ ಶಿಕ್ಷೆ ವಿಧಿಸದೆ ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಖಡಕ್ ಮಾತುಗಳನ್ನಾಡಿದ್ದಾರೆ.
ಅತ್ಯಾಚಾರದ ಪ್ರಕರಣದ ಕುರಿತು ಸುದ್ದಿಯಾಗುತ್ತಲೇ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ಈಗಾಗಲೇ ಪ್ರಕರಣ ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ನಿರ್ಲಕ್ಷ್ಯ ತೋರಿದ ವೈದ್ಯರು ಹಾಗೂ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಯೋಗಿ ತಿಳಿಸಿದ್ದಾರೆ.
ಆದಾಗ್ಯೂ ಉನ್ನಾವೋ ಎಂಬಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಎಂಬುವವರನ್ನು ಬಂಧಿಸಲಾಗಿದೆ. ಇಷ್ಟಾದರೂ ಸುಮ್ಮನಿರದ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದು, ಇದಕ್ಕೆ ಯೋಗಿ ಆದಿತ್ಯನಾಥರು ಸರಿಯಾಗಿಯೇ ಪ್ರತ್ಯುತ್ತರ ನೀಡಿದ್ದಾರೆ. ಅಪರಾಧಿಗಳಿಗೆ ಶಿಕ್ಷೆಯಾಗಲಿ ಎಂಬುದು ನಮ್ಮ ಆಶಯವೂ ಆಗಿದೆ.
Leave A Reply