ದೇಗುಲದಲ್ಲಿ ಅತ್ಯಾಚಾರ ಮಾಡಿದ್ದು ಖಂಡನೀಯವೇ, ಆದರೆ ಮದರಸಾದಲ್ಲಿ ನಡೆಯುವ ಅನ್ಯಾಯದ ಕುರಿತು ಏಕೆ ಪ್ರಶ್ನಿಸಲ್ಲ?
ಲಖನೌ: ಅತ್ಯಾಚಾರದಂತಹ ಪ್ರಕರಣ ದೇಶದ ಎಲ್ಲೇ ನಡೆಯಲಿ, ಎಂತಹ ಪ್ರಭಾವಿ ವ್ಯಕ್ತಿಯಿಂದಲೇ ನಡೆಯಲಿ. ಅದಕ್ಕೆ ಕ್ಷಮೆ ಇಲ್ಲ ಹಾಗೂ ತಕ್ಕ ಶಿಕ್ಷೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ.
ಉತ್ತರ ಪ್ರದೇಶದ ಉನ್ನಾವೋ ಎಂಬಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಇದರಲ್ಲಿ ಭಾಗಿಯಾದ ಆರೋಪದಲ್ಲಿ ಬಿಜೆಪಿ ಶಾಸಕರೊಬ್ಬರನ್ನು ಬಂಧಿಸಲಾಗಿದೆ. ಸರ್ಕಾರ ಸಹ ಕ್ರಮ ಕೈಗೊಳ್ಳುತ್ತೇವೆ ಎಂದಿದೆ.
ಅತ್ತ ಕಥುವಾ ಎಂಬಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಕೊಲೆ ಮಾಡಲಾಗಿದೆ. ಇದು ಸಹ ಅಕ್ಷಮ್ಯ ಅಪರಾಧವೇ. ಅದರಲ್ಲೂ ದೇವಾಲಯದಲ್ಲಿ ಅತ್ಯಾಚಾರ ಎಸಗಿದ್ದು ಹೀನ ಕೃತ್ಯವೇ.
ಆದರೆ ಇದಕ್ಕೆಲ್ಲ ಹಿಂದೂಗಳ ಮನಸ್ಥಿತಿಯೇ ಕಾರಣ, ಹಿಂದೂಗಳೆಲ್ಲ ದೇವಾಲಯ ಪವಿತ್ರ ಎಂದು ದೇವಾಲಯದಲ್ಲೇ ಅತ್ಯಾಚಾರ ಮಾಡಿದರೂ ಸುಮ್ಮನಿದ್ದಾರೆ ಎಂದೆಲ್ಲ ಟೀಕೆಗಳು ವ್ಯಕ್ತವಾಗುತ್ತಿವೆ. ಒಂದು ಘಟನೆಯನ್ನು ಹಿಡಿದು ಇಡೀ ಹಿಂದೂಗಳನ್ನೇ ಟೀಕಿಸಲಾಗುತ್ತಿದೆ.
ಆದರೆ ದೇಶಾದ್ಯಂತ ನಡೆಯುತ್ತಿರುವ ಲವ್ ಜಿಹಾದ್, ಬಲವಂತದ ಮತಾಂತರ, ಮದರಸಾಗಳಲ್ಲಿ ನಡೆಯುವ ಧರ್ಮಬೋಧನೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದೇ ಮುಸ್ಲಿಮರು ಹಿಂದೂ ಯುವತಿಯರನ್ನು ಬಲವಂತವಾಗಿ ಮತಾಂತರಿಸಿದ ಪ್ರಕರಣಗಳು ಸುದ್ದಿಯಾದಾಗ ಯಾರೂ ಸೊಲ್ಲೆತ್ತುವುದಿಲ್ಲ.
ಅಷ್ಟೇ ಏಕೆ, ಕಳೆದ ಇದೇ ಉತ್ತರ ಪ್ರದೇಶದಲ್ಲಿ 56 ಬಾಲಕಿಯರನ್ನು ಪೊಲೀಸರು ರಕ್ಷಿಸಿದಾಗ ಯಾರೂ ಉತ್ತರ ಪ್ರದೇಶದ ಮದರಸಾಗಳ ಬಗ್ಗೆ ಮಾತನಾಡಿಲಿಲ್ಲ. ಕನಿಷ್ಠ ಯೋಗಿ ಆದಿತ್ಯನಾಥರ ಸರ್ಕಾರವನ್ನು ಹೊಗಳಲಿಲ್ಲ. ಈಗ ನೋಡಿದರೆ ಒಂದೇ ಒಂದು ಘಟನೆಯಿಂದ ಇಡೀ ಹಿಂದೂಗಳನ್ನೇ ತೆಗಳುತ್ತಿದ್ದಾರೆ. ಇಂತಹ ಇಬ್ಬಂದಿತನಕ್ಕೆ ಏನೆನ್ನಬೇಕು?
Leave A Reply