ಅಕ್ರಮವಾಗಿ ದೇಶ ಪ್ರವೇಶಿಸಿದ ಇಬ್ಬರು ರೋಹಿಂಗ್ಯಾಗಳ ಬಂಧನ
ತೆಂಗ್ನೋಪಾಲ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ, ದೇಶಕ್ಕೆ ಕಂಟಕವಾಗಿರುವ ರೋಹಿಂಗ್ಯಾಗಳನ್ನು ಹಿಡಿದು ಜೈಲಿಗಟ್ಟುವ, ಅವರ ದೇಶಕ್ಕೆ ಮರಳಿ ಕಳುಹಿಸುವ ಕಾರ್ಯವನ್ನು ಸೈನಿಕರು, ಪೊಲೀಸರು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಇದೀಗ ಮಣಿಪುರದ ಭಾರತದ ಗಡಿಯಲ್ಲಿ ಅಕ್ರಮವಾಗಿ ನುಸುಳಿ, ಜೀವನ ಸಾಗಿಸುತ್ತಿದ್ದ ರೋಹಿಂಗ್ಯಾಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಒಂದು ವರ್ಷದಿಂದ ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯ ಮೊರ್ರೆ ನಗರದಲ್ಲಿ ವಾಸಿಸುತ್ತಿದ್ದರು. ಈ ಕುರಿತು ಮಾಹಿತಿ ಪಡೆದಿರುವ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಮ್ಮದ್ ಶೋಬಿಕ್ (26) ಮತ್ತು ಆತನ ಪತ್ನಿ ಆರೋಫಾ (26) ಬಂಧಿತರು. ಕಳೆದ ವರ್ಷದಿಂದ ಮೊರ್ರೆಯಲ್ಲಿ ವಾಸಿಸುತ್ತಿದ್ದರು. ಆದರೆ ದೇಶವನ್ನು ಯಾವಾಗ ಪ್ರವೇಶಿಸಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತೆಂಗ್ನೋಪಾಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸರೆಂಗ್ತೆಮ್ ಐಬೋಂಮ್ಚಾ ತಿಳಿಸಿದ್ದಾರೆ.
ಇತ್ತೀಚೆಗೆ ಮೊರ್ರೆ ನಗರದಲ್ಲೇ ಅಕ್ರಮವಾಗಿ ದೇಶ ಪ್ರವೇಶಿಸಿ ಜೀವನ ನಡೆಸುತ್ತಿದ್ದ ಮೂವರು ರೋಹಿಂಗ್ಯಗಳನ್ನು ಬಂಧಿಸಲಾಗಿತ್ತು. ಪೊಲೀಸರ ಮಾಹಿತಿ ಪ್ರಕಾರ ಇವರೆಲ್ಲರೂ ಅಪರಾಧಿ ಚಟುವಟಿಕೆಯಲ್ಲಿ ತೊಡಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪ್ರಸ್ತುತ ಬಂಧಿಸಲಾಗಿರುವ ಮೊರ್ರೆ ಪಟ್ಟಣದ ಭಾರತ ಮ್ಯಾನ್ಮಾರ್ ಗಡಿಯಲ್ಲಿದ್ದು, ಕಟ್ಟುನಿಟ್ಟಿನ ಕ್ರಮ, ಅಕ್ರಮವಾಸಿಗಳ ಮೇಲೆ ಕಣ್ಗಾವಲು ಇಟ್ಟಿರುವುದರಿಂದ ಈ ಬಂಧನಗಳು ನಡೆಯುತ್ತಿವೆ. ಇತ್ತೀಚೆಗೆ ಕೇರಳದಲ್ಲೂ ರೋಹಿಂಗ್ಯಾಗಳನ್ನು ಬಂಧಿಸಲಾಗಿತ್ತು. ಇದು ದೇಶಾದ್ಯಂತ ರೋಹಿಂಗ್ಯಾಗಳು ಅಕ್ರಮವಾಗಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂಬುದು ಸಾಬೀತಾಗುತ್ತಿದೆ.
Leave A Reply