ಪ್ರತ್ಯೇಕ ಧರ್ಮದ ಹಿಂದಿನ ಷಡ್ಯಂತ್ರ ಬಯಲು: ಮಹಾದೇವಿ ಹೇಳಿದವ್ರಿಗೆ ಬೇಕಂತೆ ಕಾಂಗ್ರೆಸ್ ಟಿಕೆಟ್
ಬೆಂಗಳೂರು: ರಾಜ್ಯದಲ್ಲಿ ನೆಮ್ಮದಿ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದ ಹಿಂದೂಗಳ ಮಧ್ಯೆ ವಿಷ ಬೀಜ ಬಿತ್ತಿದ್ದ ಮಾತೆ ಬಸವಕಲ್ಯಾಣದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ಪ್ರತ್ಯೇಕ ಧರ್ಮದ ಹಿಂದಿನ ಷಡ್ಯಂತ್ರ ಒಂದೊಂದಾಗಿ ಬದಲಾಗುತ್ತಿವೆ. ಪ್ರತ್ಯೇಕ ಧರ್ಮದ ಬೇಡಿಕೆಗೆ ಯಾವುದೇ ಪೂರ್ವಾಪರ ಸಲಹೆ ಸೂಚನೆಗಳಿಲ್ಲದೇ ಒಪ್ಪಿಗೆ ನೀಡಿ, ಕೇಂದ್ರಕ್ಕೆ ಕಳಿಸಿದ್ದ ಕಾಂಗ್ರೆಸ್ ಸರ್ಕಾರ ಮತ್ತು ಮಾತೆ ಮಹಾದೇವಿ ಹೋರಾಟದ ಹಿಂದಿನ ಅಸಲಿಯತ್ತು. ಮಹಾದೇವಿ ಅವರ ಇತ್ತೀಚಿನ ನಡೆಗಳ ಮೂಲಕ ಸಾಬೀತಾಗುತ್ತಿದೆ.
ಇತ್ತೀಚೆಗೆ ಮಾತೆ ಮಹಾದೇವಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೆಂಬಲಿಸಿದ ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಲಿಂಗಾಯತರು ಮತ ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಇದೀಗ ಮಾತೆ ಮಹಾದೇವಿ ತಮ್ಮ ಬೆಂಬಲಿಗ ಆನಂದ ದೇವಪ್ಪಗೆ ಕಾಂಗ್ರೆಸ್ ನಿಂದ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಮಾತೆ ಮಹಾದೇವಿ ಅವರ ಈ ಎಲ್ಲ ನಡೆಗಳ ಹಿಂದೆ ಅಧಿಕಾರ ದಾಹಃ ಕಾಂಗ್ರೆಸ್ ಮತ ನೀಡಿ, ನನ್ನ ಬೆಂಬಲಿಗನಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಎಂಬ ಅಂಶಗಳು ಹಲವು ಅನುಮಾನಗಳು ಸೃಷ್ಟಿಸುತ್ತಿವೆ. ಕೇವಲ ಬಿಜೆಪಿ ದ್ವೇಷವಿಟ್ಟುಕೊಂಡು ಹೀಗೆ ಧರ್ಮ ಒಡೆಯುವ ದುಷ್ಕೃತ್ಯಕ್ಕೆ ಮಾತೆ ಮಹಾದೇವಿ ಕೈ ಹಾಕಿದ್ದಾರೆಯೇ ಎಂಬ ಅನುಮಾನಗಳಿಗೆ ಪುಷ್ಠಿ ನೀಡುತ್ತಿವೆ.
ಮಾತೆ ಮಹಾದೇವಿ ಚುನಾವಣೆಗೆ ಸ್ಪರ್ಧಿಸಿದ್ದರು: ಮಾತೆ ಮಹಾದೇವಿ ಧಾರವಾಡದಿಂದ ಈ ಹಿಂದೇ ಸ್ಫರ್ಧಿಸಿ ಹೀನಾಯ ಸೋಲು ಅನುಭವಿಸಿದ್ದರು. ಅಲ್ಲಿ ಬಿಜೆಪಿಯ ಪ್ರಲ್ಹಾದ್ ಜೋಷಿ ವಿಜೇತರಾಗಿದ್ದರು. ಆದ್ದರಿಂದ ತಮ್ಮ ರಾಜಕೀಯ ತೆವಲು ತೀರಿಸಿಕೊಳ್ಳಲು, ಅಧಿಕಾರ ದಾಹಕ್ಕಾಗಿ ಕಾಂಗ್ರೆಸ್ ಬೆಂಬಲಿಸುತ್ತಿರುವ ಮಹಾದೇವಿ ಹೋರಾಟದ ನೈಜ ಸ್ಥಿತಿಯ ಅನಾವರಣವಾಗಿದೆ.
Leave A Reply