ವಿಭೂತಿ ಹಚ್ಚಿ, ಹೂ ಮುಡಿದಿದ್ದಕ್ಕೇ ಹಿಂದೂ ಬಾಲಕಿಯರಿಗೆ ಶಿಕ್ಷೆ ನೀಡಿದ ಶಾಲಾ ಆಡಳಿತ ಮಂಡಳಿ!
ಚೆನ್ನೈ: ದೇಶಾದ್ಯಂತ ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಅನ್ಯ ಧರ್ಮೀಯರನ್ನು ಶಾಲೆಗೆ ಸೇರಿಸಿಕೊಂಡು ಅವರಿಗೆ ಶಿಕ್ಷಣ ನೀಡುತ್ತಿವೆಯೋ ಅಥವಾ ಧರ್ಮಬೋಧನೆ ಮಾಡುವ ಮೂಲಕ ಮತಾಂತರಕ್ಕೆ ಪ್ರಚೋದಿಸುತ್ತಿವೆಯೋ ಎಂಬ ಅನುಮಾನ ಮೂಡುತ್ತಿದೆ.
ಹೌದು, ತಮಿಳುನಾಡಿನ ಅರಾನಿ ಬಳಿಯ ದೇವಿಕಾಪುರಂನಲ್ಲಿ ಕ್ಲೂನಿ ಎಂಬ ಇಸ್ಲಾಮಿಕ್ ಆಡಳಿತ ಮಂಡಳಿ ನೇತೃತ್ವದ ಶಾಲೆಯಲ್ಲಿ ಹಿಂದೂ ಬಾಲಕಿಯರು ಹಣೆಗೆ ವಿಭೂತಿ ಹಚ್ಚಿಕೊಂಡು, ತಲೆಗೆ ಹೂ ಮುಡಿದುಕೊಂಡು ಹೋಗಿದ್ದಕ್ಕೆ ಶಿಕ್ಷೆ ವಿಧಿಸಿವೆ.
ಇಬ್ಬರು ಹುಡುಗಿಯರನ್ನು ಕರೆಸಿದ ಶಾಲೆಯ ಶಿಕ್ಷಕಿಯರು ಬಲವಂತವಾಗಿ ಹಣೆಯ ಮೇಲಿನ ವಿಭೂತಿ ಅಳಿಸಿಹಾಕಿದ್ದಾರೆ. ತಲೆಯಲ್ಲಿ ಮುಡಿದ ಹೂ ಕಿತ್ತುಹಾಕುವ ಜತೆಗೆ ಕೂದಲು ಹಿಡಿದು ಎಳೆದಾಡಿದ್ದಾರೆ. ಇನ್ನೊಮ್ಮೆ ಹೀಗೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡಿನಲ್ಲಿ ಹಿಂದೂಗಳು ಪಂಗುಣಿ ಎಂಬ ಹಬ್ಬವನ್ನು ಆಚರಿಸುವ ಸಂಪ್ರದಾಯವಿದ್ದು, ಎಲ್ಲ ಮಹಿಳೆಯರು, ಬಾಲಕಿಯರು ತಿಂಗಳು ಪೂರ್ತಿ ವಿಭೂತಿ, ಹಚ್ಚಿಕೊಳ್ಳುವುದು, ಹೂ ಮುಡಿದುಕೊಳ್ಳುವುದು ನಿಯಮವಿದೆ ಎಂದು ಮೂಲಗಳು ತಿಳಿಸಿವೆ.
ಶಾಲೆ ಆಡಳಿತ ಮಂಡಳಿಯ ಕುರಿತು ಬಾಲಕಿಯ ಪೋಷಕಿಯೊಬ್ಬರು ಮಾತನಾಡಿದ್ದು, ಮೊದಲ ದಿನ ನನ್ನ ಮಗಳು ಶಾಲೆಗೆ ಹೋಗುವಾಗ ಹಣೆಗೆ ವಿಭೂತಿ ಹಚ್ಚಿಕೊಂಡು, ಹೂ ಮುಡಿದು ಹೋಗಿದ್ದಾಳೆ. ಶಾಲೆ ಆಡಳಿತ ಮಂಡಳಿ ನಾಳೆಯಿಂದ ಹೀಗೆ ಬರಬಾರದು ಎಂದು ಸೂಚಿಸಿದೆ. ಆದರೆ ಮರುದಿನವೂ ಹಾಗೆಯೇ ಹೋದ ಕಾರಣ ಕುಪಿತಗೊಂಡು ಮಗಳಿಗೆ ಶಿಕ್ಷೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗ ಹೇಳಿ, ಶಾಲೆಗೂ, ಶಿಕ್ಷಣಕ್ಕೂ, ಸಂಪ್ರದಾಯದಂತೆ ವಿಭೂತಿ ಹಚ್ಚಿಕೊಂಡು, ಹೂ ಮುಡಿದುಕೊಂಡು ಹೋಗುವುದಕ್ಕೂ ಯಾವುದಾದರೂ ಸಂಬಂಧವಿದೆಯಾ?
Leave A Reply