ರಾಮಮಂದಿರ ಭಾರತದ ಸಂಸ್ಕೃತಿಯ ಅಸ್ಮಿತೆಯ ಸಂಕೇತ: ಮೋಹನ್ ಭಾಗವತ್
ಮುಂಬೈ: ಅಯೋದ್ಯೆಯಲ್ಲಿದ್ದ ಶ್ರೀರಾಮನ ಮಂದಿರವನ್ನು ಭಾರತದ ಮುಸ್ಲಿಮರು ಕೆಡವಲಿಲ್ಲ. ಕೆಲವು ವಿದೇಶಿ ಶಕ್ತಿಗಳು ಬಂದು ರಾಮಮಂದಿರವನ್ನು ಕೆಡವಿದ್ದು, ಅದಲ್ಲದಕ್ಕೂ ತಕ್ಕ ಉತ್ತರ ನೀಡುವ ಕಾಲ ಬಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಜೀ ಹೇಳಿದರು.
ಮಹಾರಾಷ್ಟ್ರದ ಪಲ್ಗರ್ ಜಿಲ್ಲೆಯ ದಹನುವಿನಲ್ಲಿ ನಡೆದ ವಿರಾಟ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ವಿದೇಶಿ ಶಕ್ತಿಗಳು ಭಾರತೀಯರ ಶ್ರದ್ಧೇಯ ಕೇಂದ್ರವಾದ ರಾಮಂದಿರವನ್ನು ಕೆಡವಿದ್ದು, ಅದಕ್ಕೆ ಭಾರತದ ಮುಸ್ಲಿಮರು ಕಾರಣರಲ್ಲ. ರಾಷ್ಟ್ರೀಯವಾದಿಗಳು ಒಂದುಗೂಡಿ ರಾಮಮಂದಿರವನ್ನು ಪುನರ್ ನಿರ್ಮಿಸಬೇಕಿದೆ ಎಂದು ಹೇಳಿದ್ದಾರೆ.
ಯಾವ ಸ್ಥಳದಲ್ಲಿ ಶ್ರೀರಾಮನ ಮಂದಿರವಿತ್ತೋ ಅದೇ ಸ್ಥಳದಲ್ಲಿ ರಾಮನ ಭವ್ಯ ಬಂದಿರವನ್ನು ನಿರ್ಮಿಸಬೇಕಾದದ್ದು, ನಮ್ಮೇಲ್ಲರ ಕರ್ತವ್ಯ. ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕು. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಅಲ್ಲದೇ ಅದಕ್ಕಾಗಿ ನಾವು ಹೋರಾಟಕ್ಕೂ ಸಿದ್ಧರಾಗಬೇಕು ಎಂದು ಹೇಳಿದ್ದಾರೆ.
ಒಂದು ವೇಳೆ ರಾಮಮಂದಿರ ನಿರ್ಮಿಸದಿದ್ದರೇ ಭವ್ಯ ಭಾರತದ ವಿಜೃಂಭಿತ ಸಂಸ್ಕೃತಿಯೊಂದಿಗೆ ನಮ್ಮ ಸಂಬಂಧವೇ ನಶಿಸಿ ಹೋಗುತ್ತದೆ. ನಾವು ಇದೀಗ ಸ್ವತಂತ್ರರಾಗಿದ್ದು, ನಾವು ರಾಮಮಂದಿರ ಕಟ್ಟುವ ಹಕ್ಕನ್ನು ಹೊಂದಿದ್ದೇವೆ. ರಾಮಮಂದಿರ ನಮ್ಮ ಸಂಸ್ಕೃತಿಯ ಪ್ರತಿಬಿಂಭವಿದ್ದಂತೆ ಎಂದು ಹೇಳಿದ್ದಾರೆ.
Leave A Reply