ಬ್ರಿಟಿಷರ ನಾಡಿಗೆ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾದಿದೆ ಅಭೂತಪೂರ್ವ ಸ್ವಾಗತ
ದೆಹಲಿ: ನರೇಂದ್ರ ಮೋದಿ ಅವರೆಂದರೇನೆ ಹಾಗೆ. ಅವರು ಪ್ರಧಾನಿಯಾದ ಬಳಿಕ ವೀಸಾ ನೀಡುವುದಿಲ್ಲ ಎಂದಿದ್ದ ಅಮೆರಿಕ ವೀಸಾ ನೀಡುವ ಜತೆಗೆ ಕೆಂಪು ಹಾಸು ಹಾಸಿ ಸ್ವಾಗತ ನೀಡಿತು. ಈ ನಾಲ್ಕು ವರ್ಷಗಳಲ್ಲಿ ಮೋದಿ ಯಾವ ದೇಶಕ್ಕೆ ಹೋದರೂ ಅಲ್ಲಿನ ಸರ್ಕಾರ ಅದ್ಧೂರಿಯಾಗಿ ಸ್ವಾಗತಿಸುತ್ತಿವೆ. ಅಷ್ಟರಮಟ್ಟಿಗೆ ಮೋದಿ ಅವರು ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
ಈಗ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನು ಆಳಿದ ಬ್ರಿಟಿಷರ ನಾಡಿಗೆ ಹೊರಟಿದ್ದು, ಆ ದೇಶ ಭಾರತದ ಪ್ರಧಾನಿಯನ್ನು ಅಭೂತಪೂರ್ವವಾಗಿ ಸ್ವಾಗತಿಸಲು ಸಕಲ ಸಿದ್ಧತೆ ನಡೆಸಿದೆ.
ಹೌದು, ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಭೇಟಿಗಾಗಿ ಮಂಗಳವಾರ ರಾತ್ರಿ ಬ್ರಿಟನ್ ತಲುಪಲಿದ್ದು, ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲು ಬ್ರಿಟನ್ ನಿರ್ಧರಿಸಿದೆ. ಈ ಕುರಿತು ಮೋದಿ ಅವರನ್ನು ಸ್ವಾಗತಿಸಲು ನೇಮಿಸಿದ ಸಿದ್ಧತಾ ತಂಡದ ಅಧಿಕಾರಿಗಳು ಮಾತನಾಡಿದ್ದು, “ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಭಯ ದೇಶಗಳ ಸಂಬಂಧ ವೃದ್ಧಿಗೆ ಬ್ರಿಟನ್ ಬದ್ಧವಾಗಿದ್ದು, ಈ ದಿಸೆಯಲ್ಲಿ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
ನರೇಂದ್ರ ಮೋದಿ ಅವರು ಬ್ರಿಟನ್ ಭೇಟಿ ವೇಳೆ ಪ್ರಧಾನಿ ಥೆರೇಸಾ ಮೇ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಮೋದಿ ಅವರಿಗಾಗಿ ಬ್ರಿಟನ್ ರಾಜ ಚಾರ್ಲ್ಸ್ ಸಮಾರಂಭವೊಂದನ್ನು ಏರ್ಪಡಿಸಿದ್ದು, ಭಾರತದ ಹೆಮ್ಮೆಯ ಪ್ರಧಾನಿ ಬ್ರಿಟಿಷ್ ರಾಜರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಲಂಡನ್ ನ ಸೈನ್ಸ್ ಮ್ಯೂಸಿಯಂನಲ್ಲಿ ನಡೆಯುವ “5000 ಇಯರ್ಸ್ ಆಫ್ ಸೈನ್ಸ್ ಆ್ಯಂಡ್ ಇನೋವೇಷನ್” ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ನರೇಂದ್ರ ಮೋದಿ ಅವರೇ ವಹಿಸಿಕೊಳ್ಳಲಿದ್ದಾರೆ. ಭೇಟಿ ವೇಳೆ ಉಭಯ ರಾಷ್ಟ್ರಗಳ ನಡುವೆ ಮಹತ್ತರ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಭಾರತದ ಪ್ರಧಾನಿಯೊಬ್ಬರು ವಿದೇಶ ಪ್ರವಾಸಕ್ಕಾಗಿ ವಿಮಾನ ಹತ್ತಲು ಸಿದ್ಧರಾದರೆ ಇಡೀ ವಿಶ್ವವೇ ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧರಾಗುತ್ತಿರುವುದು ಪ್ರತೀ ಭಾರತೀಯನೂ ಹೆಮ್ಮೆಪಡುವ ಸಂಗತಿಯಾಗಿದೆ. ಇದರ ಎಲ್ಲ ಕ್ರೆಡಿಟ್ಟೂ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಸಲ್ಲಬೇಕು.
Leave A Reply