ಹಿಂದೂ ಭಯೋತ್ಪಾದನೆ ಎಂಬ ಸುಳ್ಳು ಹುಟ್ಟುಹಾಕಿದವರೇ ಕೇಳಿ ಕೋರ್ಟ್ ನೀಡಿದ ಈ ತೀರ್ಪು
ದೆಹಲಿ: 2007ರಲ್ಲಿ ಮೆಕ್ಕಾ ಮಸೀದಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುಳ್ಳು ಬೊಗಳೇ ಬಿಡುತ್ತಾ, ಹಿಂದೂಗಳ ಮೇಲೆ ಗೂಬೇ ಕೂರಿಸಿ, ಹಿಂದೂ ಭಯೋತ್ಪಾದನೆ ಎಂಬ ಪೊಳ್ಳುವಾದವನ್ನು ಹುಟ್ಟುಹಾಕಿದವರಿಗೆ ಇದೀಗ ಹೈದರಾಬಾದ್ ನ ಎನ್ ಐಎ ವಿಶೇಷ ನ್ಯಾಯಾಲಯ ತಕ್ಕ ಉತ್ತರ ನೀಡಿದೆ.
ಹಿಂದೂ ಭಯೋತ್ಪಾದನೆ ಎಂಬ ಪೊಳ್ಳುವಾದವನ್ನು ಹುಟ್ಟುಹಾಕಿ ಬಲಪಂಥಿಯ ಸಂಘಟನೆಗಳ ಮೇಲೆ ಗೂಬೆ ಕೂಡಿಸಲು ಪ್ರಯತ್ನಿಸಿದವರಿಗೆ ಕೋರ್ಟ್ ನಿಂದಲೇ ಉತ್ತರ ದೊರಕಿದೆ. 2007ರಲ್ಲಿ ಒಂಬತ್ತು ಜನರನ್ನು ಬಲಿ ಪಡೆದ ಹೈದರಾಬಾದ್ ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಎಲ್ಲ ಆರೋಪಿಗಳನ್ನು ಹೈದರಾಬಾದ್ ನ ಎನ್ ಐಎ ವಿಶೇಷ ನ್ಯಾಯಾಲಯ ಸೋಮವಾರ ದೋಷಮುಕ್ತಗೊಳಿಸಿದೆ.
ಬಲಪಂಥೀಯ ಸಂಘಟನೆಗಳ 10 ಜನರನ್ನು ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿತ್ತು. ಅವರ ಪೈಕಿ ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ, ಸ್ವಾಮಿ ಅಸೀಮಾನಂದ ಅಲಿಯಾಸ್ ನಬ ಕುಮಾರ್ ಸರ್ಕಾರ್, ಭರತ್ ಮೋಹನ್‌ಲಾಲ್ ರತೇಶ್ವರ್ ಅಲಿಯಾಸ್ ಭರತ್ ಭಾಯ್ ಮತ್ತು ರಾಜೇಂದ್ರ ಚೌಧರಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಇಬ್ಬರು ಆರೋಪಿಗಳಾದ ಸ್ವಾಮೀ ಅಸೀಮಾನಂದ ಮತ್ತು ಭರತ್ ಮೋಹನ್‌ಲಾಲ್ ರತೇಶ್ವರ್ ಜಾಮೀನಿನ ಮೇಲೆ ಹೊರಬಂದಿದ್ದರು. ಇತರ ಮೂವರನ್ನು ಹೈದರಾಬಾದ್ ಜೈಲಿನಲ್ಲಿ ನ್ಯಾಯಾಂಗದ ರಿಮಾಂಡ್‌ನಲ್ಲಿರಿಸಲಾಗಿತ್ತು. 4ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ಹಾಗೂ ಎನ್‌ಐಎ ವಿಶೇಷ ನ್ಯಾಯಾಲಯ ಕಳೆದ ವಾರವೇ ಪ್ರಕರಣದ ವಿಚಾಚರಣೆ ಪೂರ್ತಿಗೊಳಿಸಿತ್ತು. ಇದೀಗ ಸೋಮವಾರ ತೀರ್ಪು ಪ್ರಕಟಿಸಿದ್ದು ಎಲ್ಲರನ್ನು ದೋಷಮುಕ್ತ ಗೊಳಿಸಿದೆ.
Leave A Reply