ಹಿಂದೂ ದೇವಸ್ಥಾನದ ಮೇಲೆ ಸವಾರಿ ಮಾಡ ಹೊರಟ ಹಸಿರು ನ್ಯಾಯಾಧೀಕರಣಕ್ಕೆ ಸುಪ್ರೀಂ ಪಾಠ
ದೆಹಲಿ: ಸದಾ ಹಿಂದೂ ಧರ್ಮದ ನೀತಿ, ನಿಯಮಗಳು, ಆಚರಣೆಗಳು, ಪದ್ಧತಿಗಳ ಮೇಲೆ ಯಾವುದಾದರೂ ನೆಪ ಹೇಳಿಕೊಂಡು ನಿಷೇಧ ಹೇರುವ ಷಡ್ಯಂತ್ರ ಮಾಡುವುದು ದೇಶದಲ್ಲಿರುವ ಕೆಲವು ಹಿಂದೂ ವಿರೋಧಿಗಳ ಕಾರ್ಯತಂತ್ರವಾಗಿದೆ. ಅದಕ್ಕೆ ತಕ್ಕಂತೆ ಇತ್ತೀಚೆಗೆ ರಾಷ್ಟ್ರೀಯ ಹಸಿರುವ ನ್ಯಾಯಾಧೀಕರಣವೂ ವಿಶ್ವಪ್ರಸಿದ್ಧ, ಹಿಂದೂಗಳ ಶ್ರದ್ಧೆಯ ಕೇಂದ್ರ ಅಮರನಾಥ್ ದೇವಸ್ಥಾನದಲ್ಲಿ ಕೆಲವು ಆಚರಣೆಗಳ ಮೇಲೆ ವಿನಾಕಾರಣ ನಿಷೇಧ ಹೇರಿತ್ತು. ಇದೀಗ ಹಸಿರು ನ್ಯಾಯಾಧೀಕರಣದ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ಹಿಂದೂಗಳ ಭಾವನೆಗೆ ಜಯ ದೊರೆತಿದೆ.
ಅಮರನಾಥ ದೇವಾಲಯದಲ್ಲಿ ಗಂಟೆ ಬಾರಿಸಬಾರದು, ಜೈ ಕಾರ ಹಾಕಬಾರದು, ಮಂತ್ರಪಠಣ ಮಾಡಬಾರದು ಎಂಬ ಎಡಬಿಡಂಗಿ ನಿಷೇಧಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಹೇರಿತ್ತು. ಇದು ಅಮರನಾಥ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಗಂಟೆ ಬಾರಿಸುವುದು, ಮಂತ್ರ ಪಠಣ ಮಾಡುವುದರಿಂದ ಶಿವಲಿಂಗಕ್ಕೆ ಧಕ್ಕೆ ಬರುತ್ತದೆ ಎಂಬ ನೆಪವಿಟ್ಟುಕೊಂಡು ಈ ನಿಷೇಧ ಹೇರಿತ್ತು. ನಿಷೇಧವನ್ನು ಪ್ರಶ್ನಿಸಿ ಅಮರನಾಥ ದೇವಾಲಯ ಮಂಡಳಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ದೇವಸ್ಥಾನ ಮಂಡಳಿಯ ವಾದವನ್ನು ಒಪ್ಪಿಕೊಂಡ ಸುಪ್ರೀಂ ಕೋರ್ಟ್ ಹಸಿರು ನ್ಯಾಯಾಧೀಕರಣ ಹೇರಿದ ನಿಷೇಧವನ್ನು ರದ್ದುಪಡಿಸಿದೆ.
Leave A Reply