ಶೀಘ್ರದಲ್ಲಿ ವಿಶ್ವದಲ್ಲೇ ಎತ್ತರವಾದ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣವಾಗಲಿದೆ. ಎಲ್ಲಿ ಗೊತ್ತಾ?
ದೆಹಲಿ: ಮುಂದಿನ ಅಕ್ಟೋಬರ್ ನಲ್ಲಿ ಅರೇಬಿಯನ್ ಸಮುದ್ರದ ಮಧ್ಯಭಾಗದಲ್ಲಿ ವಿಶ್ವದಲ್ಲೇ ಎತ್ತರವಾದ ಛತ್ರಪತಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ಒಪ್ಪಿದ್ದು, ಹಿಂದೂ ರಕ್ಷಕನ ಪ್ರತಿಮೆಯೊಂದು ಸಮುದ್ರದ ನಡುವೆ ರಾರಾಜಿಸುವ ಕಾಲ ಸನ್ನಿಹಿತವಾಗಿದೆ.
ಈ ಕುರಿತು ಮಹಾರಾಷ್ಟ್ರ ಶಾಸಕ ವಿನಾಯಕ್ ಮೇಟೆ ಮಾಹಿತಿ ನೀಡಿದ್ದು, ಅಕ್ಟೋಬರ್ ನಲ್ಲಿ ಪ್ರತಿಮೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಕುದುರೆ ಮೇಲೆ ಕುಳಿತಿರುವ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಅರೇಬಿಯನ್ ಸಮುದ್ರದ ಮಧ್ಯಭಾಗದ 15.96 ಹೆಕ್ಟೇರ್ ಪ್ರದೇಶದ ವ್ಯಾಪ್ತಿಯಲ್ಲಿ ಶಿವಾಜಿ ಮಹಾರಾಜರ ಸ್ಮಾರಕ ನಿರ್ಮಾಣ ಮಾಡಲಿದ್ದು, ಸುಮಾರು 210 ಮೀಟರ್ ಉದ್ದವಿರುವ ಶಿವಾಜಿ ಪ್ರತಿಮೆ ವಿಶ್ವದಲ್ಲೇ ಉದ್ದದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಎಂಜಿನಿಯರಿಂಗ್, ಸಾಮಗ್ರಿ ಸಂಗ್ರಹಣೆ ಹಾಗೂ ನಿರ್ಮಾಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ಕಳೆದ ಮಾರ್ಚ್ 1ರಂದೇ ಬರೋಬ್ಬರಿ 2,500 ಕೋಟಿ ರೂಪಾಯಿ ಮಂಜೂರು ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಈಗಾಗಲೇ ಸಮೀಕ್ಷೆ ಕಾರ್ಯ ನಡೆದಿದ್ದು, ಮಾನ್ಸೂನ್ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ವಿವರಿಸಿದ್ದಾರೆ.
ಕಾಮಗಾರಿ ಮುಗಿಯಲು ಎರಡೂವರೆ ವರ್ಷ ಅವಧಿ ಬೇಕಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಚೀನಾದಲ್ಲಿ 2008ರಲ್ಲಿ ನಿರ್ಮಿಸಿರುವ ಬುದ್ಧನ ಪ್ರತಿಮೆಯು 208 ಮೀಟರ್ ಉದ್ದವಾಗಿದ್ದು, ಮಹಾರಾಷ್ಟ್ರ ಸರ್ಕಾರ 220 ಮೀಟರ್ ಉದ್ದದ ಪ್ರತಿಮೆ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸಿಲು ಹೊರಟಿರುವುದು ಹಿಂದೂಗಳಿಗೆ ಹೆಮ್ಮೆಯ ವಿಷಯವಾಗಿದೆ.
Leave A Reply