ಬ್ರಾಹ್ಮಣ ವಿರೋಧಿಗಳೇ ಎಲ್ಲಿದ್ದೀರಿ, ಅರ್ಚಕರೊಬ್ಬರು ದಲಿತ ವ್ಯಕ್ತಿಯನ್ನು ದೇವಾಲಯದೊಳಗೆ ಹೊತ್ತೊಯ್ದಿದ್ದನ್ನು ನೋಡಿರಿ!
ಹೈದರಾಬಾದ್: ದೇಶದಲ್ಲಿ ಎಲ್ಲಾದರೂ ದಲಿತರ ಮೇಲೆ ಹಲ್ಲೆಯಾದರೆ, ಅನ್ಯಾಯವಾದರೆ ತುಂಬ ಜನ ಆರೋಪಿಗಳ ವಿರುದ್ಧ ಮಾತನಾಡದೆ ಬ್ರಾಹ್ಮಣರ ವಿರುದ್ಧ ಮಾತನಾಡುತ್ತಾರೆ. ಪುರೋಹಿತ ಶಾಹಿಯಿಂದಲೇ ದೇಶದಲ್ಲಿ ಅಸಮಾನತೆ ಸೃಷ್ಟಿಯಾಗಿದೆ ಎಂದು ಬೊಬ್ಬೆ ಹಾಕುತ್ತಾರೆ.
ಆದರೆ ಹೈದರಾಬಾದಿನಲ್ಲಿ ಬ್ರಾಹ್ಮಣ ಅರ್ಚಕರೊಬ್ಬರು ದಲಿತ ಭಕ್ತರೊಬ್ಬರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ದೇವಾಲಯ ಪ್ರವೇಶಿಸುವ ಮೂಲಕ ಭಕ್ತಿ, ದೇವರು, ದರ್ಶನ ಎಲ್ಲರಿಗೂ ಒಂದೇ ಎಂಬ ಸೌಹಾರ್ದಯುತ ಸಂದೇಶ ಸಾರುವ ಮೂಲಕ ಬ್ರಾಹ್ಮಣ ವಿರೋಧಿಗಳಿಗೆ ಸರಿಯಾದ ಚಾಟಿಯೇಟು ನೀಡಿದ್ದಾರೆ.
ಹೌದು, ಹೈದರಾಬಾದಿನ ಜಿಯಾಗುಡದ ಶ್ರೀ ರಂಗನಾಥ ದೇವಾಲಯದಲ್ಲಿ ಇಂಥದ್ದೊಂದು ಸೌಹಾರ್ದಯುತ ಸಂದೇಶ ಸಾರುವ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿಲ್ಕೂರ್ ಬಾಲಾಜಿ ದೇವಾಲಯದಲ್ಲಿ ಅರ್ಚಕರಾಗಿರುವ ಸಿ.ಎಸ್.ರಂಗರಾಜನ್ ಅವರು ದಲಿತ ಭಕ್ತ ಆದಿತ್ಯ ಪರಶ್ರೀ ಎಂಬುವವರ ಕೊರಳಿಗೆ ಹಾರ ಹಾಕಿ ದೇವಾಲಯದ ಪ್ರಾಂಗಣ ಪ್ರವೇಶಿಸುವ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅರ್ಚಕ, ದೇಶದಲ್ಲಿ ಕೆಲ ಮೂಲಭೂತವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮಾಜದಲ್ಲಿ ಅಸಮಾನತೆ ಇದೆ ಎಂದು ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಹೀಗೆ ವಿಷಬೀಜ ಬಿತ್ತುವವರಿಗೆ ನಿಜಾಂಶ ತಿಳಿಸಲು ಹಾಗೂ ಅವರು ತಮ್ಮ ಮನಸ್ಸಿನಲ್ಲಿರುವ ಕೊಳಕನ್ನು ತೊಲಗಿಸಲಿ ಎಂದು ದಲಿತ ಭಕ್ತರೊಬ್ಬರನ್ನು ಹೆಗಲ ಮೇಲೆ ಹೊತ್ತು ದೇವಾಲಯ ಪ್ರವೇಶಿಸಿ ಸೌಹಾರ್ದದ ಸಂದೇಶ ಸಾರಿದ್ದೇನೆ, ನಾವೆಲ್ಲರೂ ಒಂದಾಗಿ, ಮನುಷ್ಯರಂತೆ ಬದುಕಬೇಕು ಎಂಬುದೇ ನನ್ನ ಆಶಯ ಎಂದು ಅರ್ಚಕರು ತಿಳಿಸಿದ್ದಾರೆ. ಇನ್ನಾದರೂ ಕುತ್ಸಿತ ಮನಸ್ಸುಗಳು ದೇಶದಲ್ಲಿ ಅಸಮಾನತೆ ಇದೆ ಎಂದು ಬೊಬ್ಬೆ ಹಾಕುವುದನ್ನು ಬಿಟ್ಟು, ಒಂದಾಗಿ ಬಾಳಲು ಸಹಕಾರ ನೀಡಲಿ ಎಂಬುದೇ ನಮ್ಮ ಆಶಯವೂ ಆಗಿದೆ.
Leave A Reply