ಚಾಯ್ ವಾಲಾನನ್ನು ಹೀಯಾಳಿಸುವವರೇ ಕೇಳಿ.. ಪುಣೆಯ ಟೀ ಮಾರಾಟಗಾರರ ತಿಂಗಳ ಆದಾಯ 12 ಲಕ್ಷ
ಪುಣೆ: ಭಾರತ ಪ್ರಧಾನಿ ನರೇಂದ್ರ ಮೋದಿ ಒಂದು ಕಾಲದಲ್ಲಿ ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದ್ದರು. ಮುಂದೇ ಅವರು ಸಮಾಜಸೇವೆಯಲ್ಲಿ ಸಕ್ರಿಯರಾಗಿ ಗುಜರಾತ್ ಮುಖ್ಯಮಂತ್ರಿಯಾಗಿ ನಿರಂತರವಾಗಿ ಮೂರು ಭಾರಿ ಆಯ್ಕೆಯಾದರು. ಅಲ್ಲದೇ ಇದೀಗ ಪ್ರಧಾನ ಮಂತ್ರಿಗಳಾಗಿ ವಿಶ್ವವೇ ಮೆಚ್ಚುವ ಆಡಳಿತ ನೀಡುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಟೀ ಮಾರುವುದನ್ನು ಹೀಯಾಳಿಸಿದ ಕಾಂಗ್ರೆಸ್ಸಿಗರು ತಮ್ಮ ಹೀನ ಮನಸ್ಥಿತಿ ಹೊರ ಹಾಕಿದ್ದರು. ಅಲ್ಲದೇ ಇತ್ತೀಚೆಗೆ ನರೇಂದ್ರ ಮೋದಿ ಸ್ವಾಭಿಮಾನಿಯಾಗಿ ಬದುಕುವುದನ್ನು ಇಟ್ಟುಕೊಂಡು ಪಕೋಡ ಮಾರುವ ಉದ್ಯೋಗವೂ ಉತ್ತಮ ಎಂದು ಹೇಳಿದ್ದರು.
ಮೋದಿ ಅವರ ಪಕೋಡ ಹೇಳಿಕೆಯನ್ನು ಹೀಯಾಳಿಸುವ ಮೂಲಕ ಕಾಂಗ್ರೆಸ್ಸಿಗರು ತಳಮಟ್ಟದಲ್ಲಿ ಪಕೋಡ ಮಾರುತ್ತಿರುವವರಿಗೆ ಅಪಮಾನ ಮಾಡಿತ್ತು. ಇದೀಗ ಮತ್ತೊಂದು ಸುದ್ದಿಯೊಂದು ಪುಣೆಯಿಂದ ಬಂದಿದ್ದು ಒಬ್ಬ ಟೀ ಮಾರಾಟಗಾರ ತಿಂಗಳಿಗೆ 12 ಲಕ್ಷ ಆದಾಯ ಪಡೆಯುವ ಮೂಲಕ ಟೀ ಮಾರಾಟಗಾರರನ್ನು ಹೀಯಾಳಿಸುವವರಿಗೆ ತನ್ನ ಸಾಧನೆಯಿಂದಲೇ ಉತ್ತರ ನೀಡಿದ್ದಾರೆ.
ಶಾಲೆಯಲ್ಲಿ ಗೆಳೆಯರೊಂದಿಗೆ ಲಾಸ್ಟ್ ಬೆಂಚ್ ನಲ್ಲಿ ಕುಳಿತುಕೊಳ್ಳುತ್ತಿದ್ದ ವ್ಯಕ್ತಿ, ಎಲ್ಲರೂ ಕೀಳಾಗಿ ಕಾಣುತ್ತಿದ್ದ ಯುವಕ ಇದೀಗ ತನ್ನ ಟೀ ಅಂಗಡಿಯಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ ತಿಂಗಳಿಗೆ 12 ಲಕ್ಷ ಆದಾಯ ಪಡೆಯುತ್ತಿದ್ದಾನೆ. ಪುಣೆ ನಗರದಲ್ಲಿ ಪ್ರಖ್ಯಾತಿ ಪಡೆದಿರುವ ನವ್ಲೇ ಟೀ ಅಂಗಡಿಯ ಮಾಲೀಕನೇ ಈ ಸಾಧಕ ನವನಾಥ ಯವ್ಲೇ.
ತನ್ನ ಟೀ ಅಂಗಡಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಬೇಕು ಎಂಬುದು ನವನಾಥ ಯವ್ಲೇ ಅವರು ಗುರಿ ಹೊಂದಿದ್ದಾರೆ. ಅಲ್ಲದೇ ಈ ಉದ್ಯೋಗ ನನಗೆ ಲಾಭ ನೀಡುವ ಜೊತೆಗೆ ಹಲವರಿಗೆ ಉದ್ಯೋಗ ದೊರಕಿಸಿಕೊಟ್ಟಿದೆ. ಪಕೋಡಾ ಮಾರಾಟ, ಟೀ ಮಾರಾಟವೂ ಸಹ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅಲ್ಲದೇ ವೇಗವಾಗಿ ಕಡಿಮೆ ಖರ್ಚಿನಲ್ಲಿ ಉದ್ಯಮ ಆರಂಭಿಸಬಹು ಎನ್ನುತ್ತಾರೆ ನವನಾಥ ಯವ್ಲೇ.
2011ರಲ್ಲಿ ಗೆಳೆಯದೊಂದಿಗೆ ಟೀ ಉದ್ಯಮ ಆರಂಭಿಸಿದ ಯವ್ಲೇ ‘ನಾಲ್ಕು ವರ್ಷ ನಮ್ಮ ಟೀ ಹೇಗೆ ಇರಬೇಕು ಎಂಬುದರ ಕುರಿತು ಸಂಶೋಧನೆ ನಡೆಸಿ, ಚರ್ಚೆ ನಡೆಸಿದ ನಂತರ ನಮ್ಮ ಬ್ರ್ಯಾಂಡ್ ಸೃಷ್ಟಿಸಿದ್ದೇವೆ. ಇದೀಗ ಪುಣೆಯಲ್ಲಿ ಎರಡು ಕೇಂದ್ರಗಳನ್ನು ಆರಂಭಿಸಿದ್ದು, ನಿತ್ಯ ಮೂರು ಸಾವಿರದಿಂದ ನಾಲ್ಕು ಸಾವಿರ ಟೀ ಕಪ್ ಮಾರಾಟ ಮಾಡುತ್ತೇವೆ. ತಿಂಗಳಿಗೆ 10 ರಿಂದ 12 ಲಕ್ಷ ಆದಾಯ ಪಡೆಯುತ್ತಿದ್ದೇವೆ. ಇದನ್ನು ವಿಶ್ವದರ್ಜೆಯ ಬ್ರ್ಯಾಂಡ್ ಆಗಿ ರೂಪಿಸುವ ಇರಾದೆ ಎನ್ನುತ್ತಾರೆ ನವನಾಥ ಯವ್ಲೇ.
Leave A Reply