ಚುನಾವಣೆಯಲ್ಲಿ ಸಿಪಿಎಂ ಸೋಲುತ್ತಲೇ ಮಾಣಿಕ್ ಸರ್ಕಾರ್ ಗೆ ಬಂಗಲೆ ಆಸೆ ಹುಟ್ಟಿತೇ?
ಕೋಲ್ಕತ್ತಾ: ಮಾಣಿಕ್ ಸರ್ಕಾರ್ ಸುಮಾರು ಎರಡು ದಶಕಕ್ಕೂ ಹೆಚ್ಚು ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾದರೂ ಸ್ವಂತದ್ದೊಂದು ಮನೆ ಹೊಂದಿಲ್ಲ, ಇನ್ನೂ ಬಸ್ಸಿನಲ್ಲಿಯೇ ಓಡಾಡುತ್ತಾರೆ ಎಂಬುದು ಎಲ್ಲರೂ ಅಭಿಮಾನಪಡುವ ವಿಷಯವಾಗಿತ್ತು. ಅವರೂ ಸಾಧಾರಣವಾಗಿ ಹೀಗೆಯೇ ಇದ್ದ ಕಾರಣ ಜನ ಮತ ಹಾಕುತ್ತಿದ್ದರು. ಅಷ್ಟಕ್ಕೂ ಗ್ರಾಪಂ ಅಧ್ಯಕ್ಷನೇ ಕಾರಿನಲ್ಲಿ ತಿರುಗಾಡುವ ಈ ಕಾಲದಲ್ಲಿ ಮುಖ್ಯಮಂತ್ರಿಯಾದರೂ ಆಟೋ ಬಸ್ಸಿನಲ್ಲಿ ಓಡಾಡುವುದು ಶ್ಲಾಘನೀಯ ಸಂಗತಿಯೇ ಆಗಿತ್ತು.
ಆದರೆ ಇಂತ ಮಾಣಿಕ್ ಸರ್ಕಾರ್ ಅವರಿಗೆ ಸಿಪಿಎಂ ಚುನಾವಣೆಯಲ್ಲಿ ಮಕಾಡೆ ಮಲಗಿದ ಬಳಿಕ, ಸೋಲುಂಡ ಬಳಿಕ ಬಂಗಲೆ, ಕಾರಿನ ಅವಶ್ಯಕತೆ ಬಿತ್ತೇ? ಇಷ್ಟು ದಿನ ಇಲ್ಲದೆ ಇದ್ದ ಬಯಕೆಗಳು ಈಗ ಏಕೆ ಜನ್ಮತಾಳಿವೆ? ಏಕೆ ಮಾಣಿಕ್ ಸರ್ಕಾರ್ ಕಾರು, ಬಂಗಲೆ ಬಯಸುತ್ತಿದ್ದಾರೆ? ಅಂದರೆ ಇಷ್ಟು ದಿನ ಅವರು ನಡೆಸಿದ ಸರಳ ಜೀವನ ಮತ ಪಡೆಯಲು, ಜನರ ಓಲೈಸಲು ಮಾಡಲಾಗುತ್ತಿತ್ತೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.
ಹೌದು, ಚುನಾವಣೆಯಲ್ಲಿ ಸಿಪಿಎಂ ಸೋಲುಂಡು ಬಿಜೆಪಿ-ಐಪಿಎಫ್ ಟಿ ಸರ್ಕಾರ ರಚನೆಯಾದ ಬಳಿಕ ಮನೆಯೇ ಇಲ್ಲದ ಮಾಣಿಕ್ ಸರ್ಕಾರ ಸಿಪಿಎಂ ಪಕ್ಷದ ಕಚೇರಿಯಲ್ಲಿ ಪತ್ನಿ ಜತೆ ಹೋಗಿ ವಾಸವಿದ್ದರು. ಆದರೆ ಈಗ ತಮಗೊಂದು ಬಂಗಲೆ ಹಾಗೂ ಕಾರಿನ ವ್ಯವಸ್ಥೆ ಮಾಡಬೇಕು ಎಂದು ಮಾಣಿಕ್ ಸರ್ಕಾರ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಖಂಡಿತವಾಗಿಯೂ ಪ್ರತಿಪಕ್ಷದ ನಾಯಕನಾಗಿ ಮಾಣಿಕ್ ಸರ್ಕಾರ್ ಅವರು ತಮಗೊಂದು ನಿವಾಸ, ವಾಹನ ಪಡೆಯಲು, ಅದಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುವ ಎಲ್ಲ ಹಕ್ಕುಗಳೂ ಇವೆ. ಆದರೆ, ವಾಸ ಮಾಡಲು ಬಂಗಲೆಯೇ ಬೇಕು, ಓಡಾಡಲು ಕಾರೇ ಬೇಕು ಹಾಗೂ ಆ ನಿವಾಸ ಮುಖ್ಯಮಂತ್ರಿ ನಿವಾಸದ ಬಳಿಯೇ ಬೇಕು ಎಂದು ಮಾಣಿಕ್ ಸರ್ಕಾರ್ ಬೇಡಿಕೆ ಇಟ್ಟಿರುವುದು ಜನ ಅಚ್ಚರಿಪಡುವಂತಾಗಿದೆ,
ಅದರಲ್ಲೂ ಎರಡು ದಶಕದವರೆಗೆ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸ್ವಂತದ ಮನೆ ಇಲ್ಲದೆ, ಆಟೋದಲ್ಲಿ ಓಡಾಡಿ ಈಗ ಚುನಾವಣೆಯಲ್ಲಿ ಸೋತ ಬಳಿಕ ಮಾಣಿಕ್ ಸರ್ಕಾರ್ ಅವರಲ್ಲಿದ್ದ ಸರಳ ವ್ಯಕ್ತಿತ್ವ, ಸರಳತನ ಸತ್ತುಹೋಗಿ ಐಷಾರಾಮಿ ಜೀವನ ಬಯಸುತ್ತಿದೆಯಾ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ. ಇದಕ್ಕೆ ಮಾಣಿಕ್ ಸರ್ಕಾರ್ ಅವರೇ ಉತ್ತರಿಸಬೇಕು.
Leave A Reply