ಷಾ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಶಾಸ್ತಿ… ಲೋಯಾ ಸಾವಿನ ತನಿಖೆಯಿಲ್ಲ ಎಂದ ಕೋರ್ಟ್
![](https://tulunadunews.com/wp-content/uploads/2018/04/loya_630_630.jpg)
ದೆಹಲಿ: ಶತಾಯಗತಾಯ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿರುವ ಪ್ರತಿಪಕ್ಷಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ವಿರುದ್ಧ ಹೂಡಿದ್ದ ಷಡ್ಯಂತ್ರಕ್ಕೆ ಕೋರ್ಟ್ ತಕ್ಕ ಉತ್ತರವನ್ನು ಆದೇಶ ಮೂಲಕವೇ ತಿಳಿಸಿದೆ. ಈ ಮೂಲಕ ಅಮಿತ್ ಷಾ ವಿರುದ್ಧ ಸೋಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ನ್ಯಾಯಾಧೀಶ ಎಚ್.ಬಿ.ಲೋಯಾ ಸಾವಿಗೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ ರಾಜಕೀಯ ದುರುದ್ದೇಶವಿಟ್ಟುಕೊಂಡು ಪಿಐಎಲ್ ಸಲ್ಲಿಸಿದವರಿಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಜಕೀಯ ಹಿತಾಸಕ್ತಿ ಇಟ್ಟುಕೊಂಡು ಸುಪ್ರೀಂ ಕೋರ್ಟ್ ಗೆ ದೂರು ಸಲ್ಲಿಸಲಾಗಿದೆ. ಇದರಿಂದ ನ್ಯಾಯಾಂಗದ ಘನತೆಗೆ ಕುಂದು ಉಂಟಾಗುತ್ತಿದೆ. ಅಲ್ಲದೇ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದೆ. ವಿನಾಕಾರಣ ರಾಜಕೀಯ ಹಿತಾಸಕ್ತಿಗಾಗಿ ಅರ್ಜಿ ಸಲ್ಲಿಸಿದವರ ವಿರುದ್ಧ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಕೋರ್ಟ್ ಛೀಮಾರಿ ಹಾಕಿದೆ.
ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ನ್ಯಾಯಾಧೀಶ ಎಚ್.ಬಿ.ಲೋಯಾ ಸಾವಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಸೇರಿ ಹಲವು ಬಿಜೆಪಿ ವಿರೋಧಿ ಶಕ್ತಿಗಳು ಸುಪ್ರೀಂ ಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದವು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿಯಲ್ಲಿ ರಾಜಕೀಯ ಹಿತಾಸಕ್ತಿಯಿದ್ದು, ಗೊತ್ತು ಗುರಿಯಿಲ್ಲದೇ ಆರೋಪಗಳನ್ನು ಮಾಡಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿತಲ್ಲದೇ ಯಾವುದೇ ತನಿಖೆ ಅವಶ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಅಮಿತ್ ಷಾ ವಿರುದ್ಧ ನಡೆಸುತ್ತಿದ್ದ ಷಡ್ಯಂತ್ರಕ್ಕೆ ಸುಪ್ರೀಂ ಕೋರ್ಟ್ ಕೊನೆ ಮೊಳೆ ಹೊಡೆದಿದೆ.
ಮಗನೇ ಕೊಲೆಯಲ್ಲ ಎಂದಿದ್ದ: ಜಸ್ಟಿಸ್ ಲೋಯಾ ಸಾವು ಸಹಜವಾಗಿದೆ. ನನ್ನ ತಂದೆಯ ಸಾವಿನಲ್ಲಿ ಯಾವುದೇ ರೀತಿಯ ಅನುಮಾನಗಳಿಲ್ಲ. ವಿನಾಕಾರಣ ತಂದೆಯ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಲೋಯಾ ಪುತ್ರ ಕೆಲ ದಿನಗಳ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆದರೂ ವಿರೋಧ ಪಕ್ಷಗಳು ತನಿಖೆಗೆ ಆಗ್ರಹಿಸಿ, ಪೈಐಎಲ್ ಸಲ್ಲಿಸಿದ್ದವು.
Leave A Reply