ನಿರ್ಧಾರ ಚತುರ ಯೋಗಿ ಆದಿತ್ಯನಾಥ ಫೇಸ್ ಬುಕ್ಕಿನಲ್ಲೂ ನಂಬರ್ ಒನ್!
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ಅಕ್ರಮ ಕಸಾಯಿಖಾನೆ ಮುಚ್ಚಿಸಿದ್ದು, ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಮುಂದಾಗಿದ್ದು, ರೈತರ ಸಾಲ ಮನ್ನಾ ಮಾಡಿ ರೈತರ ಏಳಿಗೆಗೆ ಶ್ರಮಿಸಿದ್ದು ಸೇರಿ ಅವರು ತೆಗೆದುಕೊಂಡ ಹಲವು ದಿಟ್ಟ ನಿರ್ಧಾರಗಳು ದೇಶದ ಗಮನ ಸೆಳೆದಿದ್ದವು.
ಇಂತಹ ಯೋಗಿ ಆದಿತ್ಯನಾಥರು ಈಗ ಫೇಸ್ ಬುಕ್ಕಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದು, ಫೇಸ್ ಬುಕ್ಕಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಖ್ಯಾತಿ ಹೊಂದಿರುವ ಸಿಎಂ ಆಗಿ ಹೊರಹೊಮ್ಮಿದ್ದಾರೆ.
ಇದುವರೆಗೂ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಇದುವರೆಗೂ ಸಾಮಾಜಿಕ ಜಾಲತಾಣದಲ್ಲಿ ಅತೀ ಜನಪ್ರಿಯ ರಾಜಕಾರಣಿಗಳಾಗಿದ್ದರು.
ಪ್ರಸಕ್ತ ವರ್ಷದ ಜನವರಿಯಲ್ಲಿ ಫೇಸ್ ಬುಕ್ ಮಾಹಿತಿ ನೀಡಿದ್ದು, 2017ರ ಜನವರಿ ಒಂದರಿಂದ ಡಿಸೆಂಬರ್ 31ರವರೆಗಿನ ವರದಿ ಪ್ರಕಾರ ಯೋಗಿ ಆದಿತ್ಯನಾಥರು ಫೇಸ್ ಬುಕ್ಕಿನಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ದಿಟ್ಟ ನಿರ್ಧಾರಗಳ ಮೂಲಕ ದೇಶದ ಗಮನ ಸೆಳೆದಿರುವ ಯೋಗಿ ಆದಿತ್ಯನಾಥರು ಈಗ ದೇಶದಲ್ಲೇ ಫೇಸ್ ಬುಕ್ಕಿನಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿರುವುದು ಅವರ ಪ್ರಖರ ನಾಯಕತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
Leave A Reply