ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ನಡಿಯಿತೇ ನಕಲಿ ತನಿಖೆ?
ಮುಂಬೈ: 2008ರ ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ತರ ವಿಷಯವೊಂದು ಬಹಿರಂಗವಾಗಿದ್ದು, ಪ್ರಕರಣದಲ್ಲಿ ಹಿಂದೂ ಸಂಘಟನೆಯ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರನ್ನು ಪ್ರಕರಣದಲ್ಲಿ ಸಿಕ್ಕಿಹಾಕಿಸಲು ಷಡ್ಯಂತ್ರ ನಡೆದಿದೆ ಎಂಬ ಕುರಿತು ಅನುಮಾನಗಳು ಮೂಡುವಂತಾಗಿದೆ.
ಈ ಕುರಿತು ಪ್ರಕರಣದ ತನಿಖಾ ತಂಡದಲ್ಲಿದ್ದ ಅಧಿಕಾರಿಯಾಗಿದ್ದ ಮೆಹಬೂಬ್ ಅಬ್ದುಲ್ ಕರೀಮ್ ಮುಜಾವರ್ ಮಹತ್ವದ ಮಾಹಿತಿ ನೀಡಿದ್ದು, ಮಾಲೇಗಾಂವ್ ಸ್ಫೋಟ ಪ್ರಕರಣ ತನಿಖೆಯೇ ನಕಲಿ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಪುರೋಹಿತ್ ಅವರನ್ನು ತಪ್ಪಿತಸ್ಥರು ಎಂದು ಸಾಬೀತುಪಡಿಸಲು ತನಿಖೆಯ ಹಾದಿಯನ್ನೇ ಪೊಲೀಸ್ ಅಧಿಕಾರಿಗಳು ಬದಲಿಸಿದ್ದಾರೆ. ಅಲ್ಲದೆ ಸ್ಫೋಟದ ಪ್ರಮುಖ ಆರೋಪಿಗಳಾದ ಸಂದೀಪ್ ದಾಂಗೆ ಹಾಗೂ ರಾಮ್‌ಜೀ ಕಾಲ್ಸಂಗ್ರೆ ಅವರನ್ನು ಎಟಿಎಸ್ ಅಧಿಕಾರಿಗಳು ಎನ್ ಕೌಂಟರ್ ಮಾಡಿ ಬಿಸಾಕಿದ್ದಾರೆ ಎಂದು ವಿವರಿಸಿದ್ದಾರೆ.
ಇದರ ಜತೆಗೆ ಪ್ರಕರಣ ಹಳ್ಳ ಹಿಡಿಸುವ ದಿಸೆಯಲ್ಲಿ ತನಿಖೆ ಕೈಗೊಂಡಿದ್ದು ಹಾಗೂ ಪ್ರಕರಣದ ಆರೋಪಿಗಳನ್ನು ಹತ್ಯೆ ಮಾಡಿರುವ ಕುರಿತು ಸಂಪೂರ್ಣ ದಾಖಲೆ ನನ್ನ ಬಳಿ ಇದ್ದು, ಶೀಘ್ರದಲ್ಲೇ ಸೋಲಾಪುರ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಕೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮಾಲೇಗಾಂವ್ ಎಂಬಲ್ಲಿ 2008ರ ಸೆಪ್ಟೆಂಬರ್ 29ರಂದು ಬಾಂಬ್ ನಡೆಸಿದ ಬಾಂಬ್ ದಾಳಿಯಲ್ಲಿ 6 ಜನ ಮೃತಪಟ್ಟು, ನೂರಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಆದಾಗ್ಯೂ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹಿಂದೂ ಭಯೋತ್ಪಾದನೆ ಇದೆ ಎಂದು ದೇಶಾದ್ಯಂತ ಬೊಬ್ಬೆ ಹಾಕಲಾಗಿತ್ತು.
ಆದರೆ ಎಟಿಎಸ್ ಅಧಿಕಾರಿಯೇ ತನಿಖೆಯನ್ನು ಹಳ್ಳ ಹಿಡಿಸಲಾಗಿದೆ ಎಂದು ತಿಳಿಸಿರುವುದು ಅಂದಿನ ಯುಪಿಎ ಸರ್ಕಾರದ ಮೇಲೂ ಅನುಮಾನ ಮೂಡುವಂತಾಗಿದೆ.
Leave A Reply