• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ದಲಿತ ಸಮಾಜಕ್ಕೆ ಸರ್ವಸ್ವವನ್ನು ಧಾರೆ ಎರೆದ ಮಹಾನ್ ಚೇತನದ ಸಮಾಧಿಯ ಪರಿಸ್ಥಿತಿ ಹೇಗಿದೆ, ಗೊತ್ತಾ!!

Hanumantha Kamath Posted On April 23, 2018
0


0
Shares
  • Share On Facebook
  • Tweet It

ಮಂಗಳೂರಿನ ಅತ್ತಾವರ-ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿ ಇರುವ ಸ್ಥಳಕ್ಕೆ ನೀವು ಒಮ್ಮೆ ಹೋಗಿ ನೋಡಿ ಬರಬೇಕು. ದಲಿತ ಸಮಾಜದ ಅಭ್ಯುದಯಕ್ಕೆ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ವ್ಯಕ್ತಿಯ ಸಮಾಧಿ ಇರುವ ಸ್ಥಳ ಇದೆನಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಯಾರಾದರೂ ಗಣ್ಯರು ಅಥವಾ ಬೇರೆ ಜಿಲ್ಲೆ ಅಥವಾ ರಾಜ್ಯದ ಕುದ್ಮುಲ್ ರಂಗರಾವ್ ಅವರ ಅಭಿಮಾನಿಗಳು ಇಲ್ಲಿ ಭೇಟಿ ಕೊಡುವ ವಿಷಯ ಗೊತ್ತಾದರೆ ಸ್ಥಳೀಯರು ಇಲ್ಲಿ ಮೊದಲೇ ಬಂದು ಒಂದಿಷ್ಟು ಸ್ವಚ್ಚತೆಯನ್ನು ಮಾಡಿ ಹೋಗುವ ಪರಿಸ್ಥಿತಿ ಇದೆ ಎಂದರೆ ನೀವು ಅರ್ಥ ಮಾಡಿಕೊಳ್ಳಿ. ನಮ್ಮ ಜನಪ್ರತಿನಿಧಿಗಳು ಇವರ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೆ ಎಂದು ಗೊತ್ತಾಗುತ್ತೆ.
ಕುದ್ಮುಲ್ ರಂಗರಾವ್ ನನಗೆ ಗೊತ್ತಿರುವ ಹಾಗೆ ಬ್ರಾಹ್ಮಣ ಮನೆತನದವರು. ಆದರೆ ಆ ಪುಣ್ಯಾತ್ಮ ತಮ್ಮ ಜೀವನವನ್ನು ದಲಿತರ ಏಳಿಗೆಗಾಗಿ ಮುಡಿಪಾಗಿಟ್ಟರು. ಬಹುಶ: ಈಗಿನ ದಲಿತ ನಾಯಕರೆನಿಸಿಕೊಂಡಿರುವ ಮಾಯಾವತಿಯಂತವರು ಕುದ್ಮುಲ್ ರಂಗರಾವ್ ಅವರ ಬದುಕಿನ ಒಂದು ಶೇಕಡಾ ಮಾದರಿಯನ್ನು ತಮ್ಮಲ್ಲಿ ಅಳವಡಿಸಿದರೆ ದಲಿತರ ಬದುಕು ಯಾವತ್ತೋ ಉದ್ಧಾರವಾಗುತ್ತಿತ್ತು. ಯಾಕೆಂದರೆ ಕುದ್ಮುಲ್ ರಂಗರಾವ್ ಅವರ ಕಾಲದಲ್ಲಿ ದಲಿತರ ಬದುಕು ನಿಜಕ್ಕೂ ಶೋಚನೀಯವಾಗಿತ್ತು. ಮಹಾತ್ಮಾ ಗಾಂಧಿಯವರು ದಲಿತರ ಏಳಿಗೆಗೆ ಹೋರಾಡುತ್ತಿದ್ದರು. ಇನ್ನೊಂದೆಡೆ ಕುದ್ಮುಲ್ ರಂಗರಾವ್ ಅವರ ಹೋರಾಟ ನಡೆಯುತ್ತಿತ್ತು. ಕುದ್ಮುಲ್ ರಂಗರಾವ್ ಅವರಿಗೆ ದಲಿತ ಸಮಾಜದ ಯುವಕರು ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಆಸೆ ಇತ್ತು. ದಲಿತ ಯುವಕರು ಸರಕಾರಿ ಉದ್ಯೋಗ ಗಳಿಸಬೇಕು ಎನ್ನುವ ಗುರಿ ಇತ್ತು. ದಲಿತ ಯುವಕರು ಕಾರಿನಲ್ಲಿ ಹೋಗಬೇಕು ಎನ್ನುವ ಮನಸ್ಸಿತ್ತು. ಅದಕ್ಕಾಗಿ ಅವರು ತಮ್ಮ ಬದುಕಿನ ಬಹುತೇಕ ಭಾಗವನ್ನು ದಲಿತ ಕೇರಿಗಳಲ್ಲಿ ಕಳೆದರು. ಆ ಮೂಲಕ ದಲಿತರ ಬದುಕಿಗೆ ಹೊಸ ಅರ್ಥ ಕೊಡಲು ಬಯಸಿದ್ದರು. ಅಂತಹ ಮಾನವತೆಯ ಮೂರ್ತಿಗೆ ನಾವು ಏನು ಮಾಡಿದ್ದೇವೆ. ಅವರ ಸಮಾಧಿ ಇರುವ ಅತ್ತಾವರ-ಬಾಬುಗುಡ್ಡೆ ಪ್ರದೇಶವನ್ನು ನೋಡಿದರೆ ನಮ್ಮ ಜನಪ್ರತಿನಿಧಿಗಳು ಅವರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.

ಶಾಸಕರು ಮನಸ್ಸು ಮಾಡಿರಲೇ ಇಲ್ಲ..

ಕುದ್ಮುಲ್ ರಂಗರಾವ್ ತಮ್ಮ ಜಾತಿಯ ಕಾರಣಕ್ಕೆ ದೊಡ್ಡವರಾಗಿರಲಿಲ್ಲ. ಅವರು ತಮ್ಮದಲ್ಲದ ಬೇರೆ ಜಾತಿಯವರ ಏಳಿಗೆಗಾಗಿ ಶ್ರಮ ವಹಿಸಿದವರು. ಯಾವುದೇ ಪಕ್ಷಕ್ಕೆ ಸೇರಿ ದೊಡ್ಡ ನಾಯಕರಾಗಲು ಹೋಗಲಿಲ್ಲ. ಅದರ ಬದಲು ದಲಿತ ಯುವಕರನ್ನು ದೊಡ್ಡ ನಾಯಕರನ್ನಾಗಿಸಲು ಪ್ರಯತ್ನಪಟ್ಟರು. ಒಟ್ಟಿನಲ್ಲಿ ಮಹಾತ್ಮಾ ಗಾಂಧಿಜಿಯವರಿಂದ ಕೊಂಡಾಡಲ್ಪಟ್ಟ ಕುದ್ಮುಲ್ ರಂಗರಾವ್ ಅವರ ಸಮಾಧಿ ಇರುವ ಸ್ಥಳ ಮಾತ್ರ ಗತವೈಭವವನ್ನು ನೆನಪಿಸುವಂತೆ ಇದೆ. ಅದಕ್ಕೆ ಕಾರಣ ಏನು? ಸಂಶಯವೇ ಇಲ್ಲ. ನಿರ್ಲಕ್ಷ್ಯ.
ಮಂಗಳೂರಿನಲ್ಲಿ ಕುದ್ಮುಲ್ ರಂಗರಾವ್ ಅವರ ನೆನಪಿನಲ್ಲಿ ಇರುವುದು ಒಂದು ಹಾಸ್ಟೆಲ್ ಮತ್ತು ಒಂದು ರಸ್ತೆ ಮಾತ್ರ. ಈಗ ಆಗಬೇಕಾದದ್ದು ಏನೆಂದರೆ ಅವರ ಸಮಾಧಿ ಇರುವ ಸ್ಥಳ ಸಮಗ್ರವಾಗಿ ಅಭಿವೃದ್ಧಿ ಕಾಣಲೇ ಬೇಕಿದೆ. ಇಲ್ಲಿನ ಸ್ಥಳೀಯರ ಬಹುಕಾಲದ ಬೇಡಿಕೆಯಂತೆ ಈ ಪ್ರದೇಶವನ್ನು ನವದೆಹಲಿಯಲ್ಲಿ ಮಹಾತ್ಮಾ ಗಾಂಧಿಜಿಯವರ ಸಮಾಧಿ ರಾಜ್ ಘಾಟ್ ನಂತೆಯೇ ಅಭಿವೃದ್ಧಿ ಮಾಡಬೇಕು. ಸಮಾಧಿಯ ಸುತ್ತಮುತ್ತಲೂ ಆಕರ್ಷಣೀಯ ಉದ್ಯಾನವನ್ನು ಮಾಡಿದರೆ ಆಗ ನಾಗರಿಕರು ಕೂಡ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿ ನೀವು ಒಂದಿಷ್ಟು ಹೊತ್ತು ನಿಂತರೆ ಹೊಸ ಚೈತನ್ಯವೊಂದು ನಿಮ್ಮನ್ನು ಆವರಿಸಿದಂತೆ ಆಗುತ್ತದೆ. ಆದರೆ ಬೇಸರದ ವಿಷಯ ಏನೆಂದರೆ ಇಷ್ಟು ದೊಡ್ಡ ವ್ಯಕ್ತಿಯ ಸಮಾಧಿ ಇರುವ ಜಾಗವನ್ನು ಹುಡುಕಿಕೊಂಡು ಹೋಗುವುದೇ ದೊಡ್ಡ ಪ್ರಯಾಸದ ಕೆಲಸದಂತೆ ಆಗಿದೆ. ಈ ಪ್ರದೇಶಕ್ಕೆ ಪ್ರವೇಶಿಸುವ ಗೇಟಿನಿಂದ ಹಿಡಿದು ಯಾವುದನ್ನು ಕೂಡ ಜನಪ್ರತಿನಿಧಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.

ಮುಂದಿನ ಸಮಾಜಕ್ಕೆ ತಿಳಿಸುವ ಕಾರ್ಯ ನಡೆಯಬೇಕು…

ಇಲ್ಲಿಯ ಸ್ಥಳೀಯರು ಹೇಳುವ ಪ್ರಕಾರ ಈ ಪ್ರದೇಶವನ್ನು ಅಭಿವೃದ್ಧಿ ಮಾಡಿದರೆ ಜನರಿಗೆ ಕುದ್ಮುಲ್ ರಂಗರಾವ್ ಅವರ ಕೊಡುಗೆಯನ್ನು ಮುಂದಿನ ತಲೆಮಾರಿಗೂ ಹಸ್ತಾಂತರಿಸುವ ಕಾರ್ಯ ಆಗುತ್ತದೆ. ಜನ ಒಬ್ಬ ಪುಣ್ಯ ಪುರುಷನ ಜೀವನ ವೃತ್ತಾಂತದಿಂದ ಪ್ರೇರೆಪಣೆ ಪಡೆದು ತಾವು ಕೂಡ ಇಂತಹ ಮಹಾನ್ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಬಹುದು. ಅದರೊಂದಿಗೆ ದಲಿತ ಸಮಾಜದ ಹಿರಿಯರು ಕುದ್ಮುಲ್ ರಂಗರಾವ್ ಅವರು ತಮ್ಮ ಸಮಾಜಕ್ಕೆ ಮಾಡಿದ ಸೇವೆಯನ್ನು ಇಂದಿನ ಯುವಕರಿಗೆ ತಿಳಿಸಿಕೊಡಲು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಸಮಾಜಕ್ಕೆ, ತನ್ನ ಜಾತಿಯ ಏಳಿಗೆಗೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಸಹಜ. ಆದರೆ ಬೇರೆ ಸಮಾಜ, ಬೇರೆ ಜಾತಿಯವರ ಏಳಿಗೆಗೆ ಹೊರಡುವುದು
ಸಾಮಾನ್ಯ ವಿಷಯವಲ್ಲ. ಆದ್ದರಿಂದ ಕುದ್ಮುಲ್ ರಂಗರಾವ್ ಅವರಂತಹ ನಾಯಕರು ನಮ್ಮ ಸಮಾಜದಲ್ಲಿ ಹೈಲೈಟ್ಸ್ ಆಗಬೇಕು. ಆಗ ಮಾತ್ರ ನಮ್ಮಲ್ಲಿ ಉದ್ಭವಿಸಿರುವ ಸಾಮಾಜಿಕ ಅಸಮಾನತೆಗೆ ಒಂದು ಅಂತ್ಯ ಸಿಗುತ್ತದೆ. ಮುಂದೆ ಈ ಭಾಗದಲ್ಲಿ ಶಾಸಕರಾಗಿ ಬರುವವರು ಈ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುತ್ತಾರೆ ಎನ್ನುವ ಆಶಾಭಾವನೆ ಎಲ್ಲರಲ್ಲಿಯೂ ಇದೆ

0
Shares
  • Share On Facebook
  • Tweet It


Kudmul Rangarao


Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Hanumantha Kamath September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Hanumantha Kamath September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search