ಕಾಂಗ್ರೆಸ್ಸಿನ ಇದೇ ಕಪಿಲ್ ಸಿಬಲ್ 2010ರಲ್ಲಿ ನ್ಯಾಯಮೂರ್ತಿಗಳ ಮಹಾಭಿಯೋಗ ವಿರೋಧಿಸಿದ್ದರು ಗೊತ್ತಾ?

ದೆಹಲಿ: ಈ ಕಾಂಗ್ರೆಸ್ಸಿಗರು ಎಂತಹ ಊಸರವಳ್ಳಿ, ಇಬ್ಬಂದಿತನದ ಸಂಸ್ಕೃತಿಯವರು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದವರು ಆಗಾಗ ಭಾರತದ ಪ್ರಜಾಪ್ರಭುತ್ವ ಉಳಿಸಿ ಎಂದು ಬೊಬ್ಬೆ ಹಾಕುವುದೇ ದೊಡ್ಡ ಅಣಕವಾಗಿ ಕಾಣುತ್ತದೆ.
ಇಂಥಾದ್ದೇ ಅಣಕವೊಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ವಿಷಯದಲ್ಲಿ ಬಹಿರಂಗವಾಗಿದ್ದು, ಕಾಂಗ್ರೆಸ್ಸಿನ ಇಬ್ಬಂದಿತನ ಢಾಳಾಗಿದೆ. ಹೌದು, ದೇಶಾದ್ಯಂತ ಸುಪ್ರೀಂ ಕೋರ್ಟ್ ಮುಖ್ಯಮಂತ್ರಿ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮಹಾಭಿಯೋಗಕ್ಕೆ ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಸಜ್ಜಾಗಿವೆ. ಈಗಾಗಲೇ ಈ ಮನವಿಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದಾರೆ.
ಹೀಗೆ ಕ್ಷುಲ್ಲಕ ಕಾರಣಕ್ಕಾಗಿ ದೀಪಕ್ ಮಿಶ್ರಾ ವಿರುದ್ಧ ಪ್ರತಿಪಕ್ಷಗಳು ಸಹಿ ಹಾಕಿದ್ದ ನೋಟಿಸ್ ಅನ್ನು ಉಪರಾಷ್ಟ್ರಪತಿಯವರಿಗೆ ಸಲ್ಲಿಸಿದ್ದರು. ಆದರೆ ಉಪರಾಷ್ಟ್ರಪತಿಯವರು ನೋಟಿಸ್ ತಿರಸ್ಕರಿಸಿದ್ದರು. ಆಗ ಬಾಯಿಬಿಟ್ಟ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ಆಗಲೇಬೇಕು. ನಾವು ನ್ಯಾಯಾಲಯದ ಮೆಟ್ಟಿಲು ಏರುತ್ತೇವೆ ಎಂದು ತಿಳಿಸಿದ್ದಾರೆ.
ಎಂತಹ ವಿಪರ್ಯಾಸ ನೋಡಿ, ಇದೇ ಕಪಿಲ್ ಸಿಬಲ್, 2010ರಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುವಾಗ, ರಾಜಕಾರಣಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗ ಮಂಡಿಸುವುದು ಅನ್ಯಾಯದ ಸಂಗತಿ ಎಂದಿದ್ದರು. ಆದರೆ ಈಗ ಅವರೇ ಮಹಾಭಿಯೋಗದ ಪರವಾಗಿ ನಿಂತು ನ್ಯಾಯಾಲಯದ ಮೆಟ್ಟಿಲು ಹತ್ತಲು ಹೊರಟಿರುವುದು ಕಾಂಗ್ರೆಸ್ಸಿಗರ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ.