• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವೇದವ್ಯಾಸ ಕಾಮತ್ ಅವರಿಗೆ ಕೆಎಎಸ್ ಕಿರೀಟ ಇಲ್ಲದಿರಬಹುದು, ಅಭಿವೃದ್ಧಿಯ ತುಡಿತ ಇದೆ…

Hanumantha Kamath Posted On April 24, 2018


  • Share On Facebook
  • Tweet It

ಮಂಗಳೂರು ನಗರ ದಕ್ಷಿಣದಲ್ಲಿ ಯೋಗೀಶ್ ಭಟ್ ಅವರು ರೂಪುರೇಶೆ ಮಾಡಿಟ್ಟು ಹೋಗಿದ್ದ ಮತ್ತು ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮುಗಿಸುವುದಕ್ಕಾಗಿ ಬರೊಬ್ಬರಿ ಐದು ವರ್ಷಗಳನ್ನು ತೆಗೆದ ಜೆ ಆರ್ ಲೋಬೋ ಅವರಿಗೆ ತಮ್ಮದೇ ಯಾವುದಾದರೂ ಯೋಜನೆ ತರಲು ಹೇಳಿದರೆ ಅದೆಷ್ಟು ವರ್ಷಗಳು ಬೇಕಾಗಬಹುದು ಎನ್ನುವ ಪ್ರಶ್ನೆಯೊಂದಿಗೆ ಈ ಬಾರಿಯ ಚುನಾವಣೆ ಹೊಸ್ತಿಲಿಗೆ ಬಂದು ಮುಟ್ಟಿದೆ. ಮಂಗಳೂರು ನಗರ ದಕ್ಷಿಣದಲ್ಲಿ ಈ ಬಾರಿ ಭಾರತೀಯ ಜನತಾ ಪಾರ್ಟಿ ಯುವ ನಾಯಕನಿಗೆ ಟಿಕೆಟ್ ನೀಡಿದೆ. ನಲ್ವತ್ತರ ಗಡಿಯಲ್ಲಿರುವ ಡಿ ವೇದವ್ಯಾಸ್ ಕಾಮತ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಿಂದ ಬಂದವರು. ಸಂಘದ ಶಿಸ್ತು ಮತ್ತು ಸಂಯಮ ಮತ್ತು ಸಂಘಟನಾ ಸಾಮರ್ತ್ಯ ರಕ್ತಗತವಾಗಿ ಬಂದಿದೆ. ಅದರೊಂದಿಗೆ ಸಮಾಜದಲ್ಲಿರುವ ದುರ್ಬಲ, ಅಸಹಾಯಕ ಜನರಿಗೆ ಸಹಾಯ ಮಾಡಬೇಕೆಂಬ ತುಡಿತ ಚಿಕ್ಕವಯಸ್ಸಿನಲ್ಲಿಯೇ ಇತ್ತು.

ಮಂಗಳೂರು ಚಲೋ…

ಕೆಲವು ವ್ಯಕ್ತಿಗಳು ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಮಾಜ ಸೇವೆ ಮಾಡುತ್ತಾರೆ. ನಾಲ್ಕು ಜನ ಪಾಪದವರಿಗೆ ಹಣ ಕೊಟ್ಟು ಫೋಟೋ ತೆಗೆದು ಅದನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಎಷ್ಟು ಲಾಭವಾಯಿತು ಎಂದೇ ನೋಡುತ್ತಾರೆ. ಸಮಾಜ ಸೇವೆಯನ್ನು ಚುನಾವಣೆಯಲ್ಲಿ ಗೆಲ್ಲಲು ಅಸ್ತ್ರವನ್ನಾಗಿ ಮಾಡುತ್ತಾರೆ. ಆದರೆ ವೇದವ್ಯಾಸ ಕಾಮತ್ ಅಥವಾ ಆಪ್ತರ ವಲಯದಲ್ಲಿ ಬಾಬು ಅಥವಾ ಬಾಬಣ್ಣ ಎಂದೇ ಕರೆಯಲ್ಪಡುವ ಈ ಮನುಷ್ಯ ಚುನಾವಣೆ ಅಥವಾ ರಾಜಕೀಯ ಎನ್ನುವ ಶಬ್ದದ ಸೆಳೆತಕ್ಕೆ ಒಳಗಾಗುವ ಮೊದಲೇ ಸಮಾಜ ಸೇವೆಗೆ ಹೊರಟವರು. ಕಾಲೇಜು ದಿನಗಳು ಮುಗಿದ ಬಳಿಕ ಸಮಾನ ಮನಸ್ಕ ಯುವಕರ ತಂಡ ಪರಮ ಪೂಜ್ಯನೀಯ ಕಾಶೀಮಠಾಧೀಶರಾಗಿದ್ದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸಲಹೆ ಮತ್ತು ಆರ್ಶೀವಾದದಿಂದ ಒಂದು ಸಮಾಜಸೇವಾ ಸಂಘಟನೆಯನ್ನು ಪ್ರಾರಂಭಿಸಿದ್ದು ವೇದವ್ಯಾಸರ ಸಾಮಾಜಿಕ ಕಾಳಜಿಗೆ ಸಾಕ್ಷಿ. ಅದೇ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್. ಪ್ರತಿ ತಿಂಗಳು ಅನೇಕ ಜನ ಅಶಕ್ತರಿಗೆ ತಿಂಗಳ ವೈದ್ಯಕೀಯ ಖರ್ಚಿಗಾಗಿ ಪಿಂಚಣಿಯ ರೂಪದಲ್ಲಿ ಈ ಟ್ರಸ್ಟ್ ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲದೆ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ತನಕ ಓದಿಸುವ ಕೆಲಸವನ್ನು ಡಿ ವೇದವ್ಯಾಸ ಕಾಮತ್ ಮಾಡುತ್ತಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದರೂ ಜಾತಿ, ಮತ, ಭೇದವಿಲ್ಲದೆ ಗೆಳೆಯರನ್ನು ಸಂಪಾದಿಸಿರುವ ವೇದವ್ಯಾಸ ಕಾಮತ್ ಅವರ ಮುಖ್ಯ ಸಾಮರ್ತ್ಯವೇ ಸಂಘಟನಾ ಶಕ್ತಿ. ಬಿಜೆಪಿಯ ಯಾವುದೇ ಕಾರ್ಯಕ್ರಮವಿರಲಿ ವೇದಿಕೆಯ ಮೇಲೆ ಕಡಿಮೆ, ವೇದಿಕೆಯ ಹಿಂದೆ ಹಗಲಿರುಳು ಶ್ರಮಿಸುವುದು ಇವರ ಶೈಲಿ. ಹಿಂದಿನ ಬಾರಿ “ಮಂಗಳೂರು ಚಲೋ” ಕಾರ್ಯಕ್ರಮ ಆಯೋಜನೆಯಾದಾಗ ರಾತ್ರಿಯೀಡಿ ಬೇರೆ ಬೇರೆ ಪ್ರದೇಶದಿಂದ ಬರುತ್ತಿದ್ದ ಕಾರ್ಯಕರ್ತರ ವಸತಿ ಜವಾಬ್ದಾರಿ ತೆಗೆದುಕೊಂಡು ದುಡಿದು ರಾತ್ರಿ ಮಲಗದೇ ಬೆಳಿಗ್ಗೆ ಉಪಹಾರ ಕೂಡ ಸೇವಿಸಲು ಸಮಯ ಇಲ್ಲದೆ ತಲೆಸುತ್ತಿ ಬಂದು ವೈದ್ಯರಿಂದ ವಿಶ್ರಾಂತಿಯ ಸಲಹೆ ಪಡೆದುಕೊಂಡಿದ್ದರು. ಆದರೂ ವಿಶ್ರಾಂತಿ ಮಾಡದೇ ಕಾರ್ಯಕ್ರಮ ಮುಗಿಯುವ ತನಕ ಇದ್ದು, ಪೊಲೀಸರ ಲಾಠಿ ಚಾರ್ಜ್ ನಿಂದ ಗಾಯಗೊಂಡ ಕಾರ್ಯಕರ್ತರ ಆರೋಗ್ಯ ವಿಚಾರಿಸಲು ವಿವಿಧ ಆಸ್ಪತ್ರೆಗೆ ಓಡಾಡಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಮಲ್ಪೆಯಲ್ಲಿ ಬಿಜೆಪಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ಕಾರ್ಯಕರ್ತರ ಮೇಲೆ ಬೆಂಗ್ರೆಯಲ್ಲಿ ಕಲ್ಲಿನ ದಾಳಿಗಳಾದಾಗ ತಡರಾತ್ರಿ ಆಸ್ಪತ್ರೆಗೆ ಭೇಟಿಕೊಟ್ಟು ಅವರ ಆರೋಗ್ಯ ವಿಚಾರಿಸಿದ್ದರು.

ಪಕ್ಷ ಸಂಘಟನೆಗೆ ಸದಾ ಹೋರಾಟ..

ಬಿಜೆಪಿಯ ಕಾರ್ಯಕ್ರಮಗಳಿಗೆ ಬೇರೆ ಬೇರೆ ಕಡೆಯಿಂದ ಒತ್ತಡ ತಂದು ಕಾರ್ಯಕ್ರಮ ವಿಫಲಗೊಳಿಸಲು ಸಂಚು ನಡೆಸುತ್ತಿದ್ದವರು ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಛಾತಿ ತೋರಿಸುವ ವೇದವ್ಯಾಸರ ಬಗ್ಗೆ ಯುವ ಕಾರ್ಯಕರ್ತರಲ್ಲಿಯೂ ಸೆಳೆತವಿದೆ. ವೇದವ್ಯಾಸ ಕಾಮತ್ ಅವರಿಗೆ ಟಿಕೆಟ್ ಸಿಕ್ಕಿದರೆ ನಮ್ಮ ಅಭ್ಯಂತರವಿಲ್ಲ, ಅದು ಬಿಟ್ಟು ಯಾರಿಗೋ ಪಕ್ಷಕ್ಕೆ ಕೆಲಸ ಮಾಡದೇ ಕೇವಲ ವೇದಿಕೆಯಲ್ಲಿ ಕಾಣಿಸಿಕೊಳ್ಳುವವರಿಗೆ ಟಿಕೆಟ್ ಕೊಟ್ಟರೆ ನಾವು ಕೆಲಸ ಮಾಡೊಲ್ಲ ಎಂದವರೆಷ್ಟೋ ಜನ. ಅವರಿಗೆ ಟಿಕೆಟ್ ಸಿಗುವುದು ತಡವಾದಾಗ ಎಷ್ಟೋ ಮನೆಗಳಲ್ಲಿ ಹೆಂಗಸರು, ಹಿರಿಯರು ಸಿಡಿಮಿಡಿಗೊಂಡು ಮಾತನಾಡಿದ್ದು ಸಾಮಾಜಿಕ ತಾಣಗಳಲ್ಲಿ ಪ್ರಸಾರವಾದಾಗ ಸ್ವತ: ವೇದವ್ಯಾಸರಿಗೆ ಆಶ್ಚರ್ಯವಾದ್ದದ್ದು ಇದೆ. ಇನ್ನು ರಾಜಕೀಯದಲ್ಲಿ ಕುತಂತ್ರ ಮಾಡಲು ಗೊತ್ತಿಲ್ಲದೇ ಇವರ ಮೈನಸ್ ಪಾಯಿಂಟ್. ಇವರಿಂದ ಉಪಕಾರ ಪಡೆದವರು ಹಿಂದಿನಿಂದ ಇವರ ಬಗ್ಗೆ ಟೀಕೆ, ಅವಹೇಳನ ಮಾಡಿದರೂ “ಪರ್ವಾಗಿಲ್ಲ, ನಾನು ದೇವರು ಕೊಟ್ಟ ಶಕ್ತಿಯಿಂದ ಸಹಾಯ ಮಾಡಿದೆ, ಇದರಲ್ಲಿ ನನ್ನದು ಎನ್ನುವುದು ಏನೂ ಇಲ್ಲ. ಸಹಾಯ ಪಡೆದುಕೊಂಡವರಿಗೆ ಒಳ್ಳೆಯದಾಗಲಿ” ಎಂದು ಹಾರೈಸುವಷ್ಟು ಅವರ ಮುಗ್ಧತನ ನೋಡಿದಾಗ ಅನೇಕ ಬಾರಿ ಆಶ್ಚರ್ಯವಾಗುತ್ತದೆ.
ನಿಮಗೆ ಮಂಗಳೂರು ನಗರ ದಕ್ಷಿಣದಲ್ಲಿ ನಿಜಕ್ಕೂ ಅಭಿವೃದ್ಧಿಯೇ ಆಗಬೇಕು ಎಂದು ಮನಸ್ಸಿದ್ದರೆ ಈ ಬಾರಿ ವೇದವ್ಯಾಸ್ ಕಾಮತ್ ಅವರನ್ನು ಆಯ್ಕೆ ಮಾಡಿದರೆ ಒಳ್ಳೆಯದು ಎನ್ನುವುದು ಎಲ್ಲರ ಅಭಿಪ್ರಾಯ. ಏಕೆಂದರೆ ವೇದವ್ಯಾಸರಿಗೆ ಮಂಗಳೂರು ಹೇಗೆ ಅಭಿವೃದ್ಧಿಯಾಗಬೇಕು ಎನ್ನುವುದರ ಬಗ್ಗೆ ಕಾಮನ್ ಸೆನ್ಸ್ ಇದೆ. ಅವರಿಗೆ ಕೆಎಎಸ್ ಎನ್ನುವ ಕಿರೀಟ ಇಲ್ಲದೇ ಇರಬಹುದು. ಆದರೆ ಏನು ಮಾಡಿದರೆ ಏನಾಗುತ್ತದೆ ಎನ್ನುವ ಪರಿಜ್ಞಾನ ಇದೆ. ಮಂಗಳೂರಿಗೆ ಭಾಗ್ಯ ಇದ್ದರೆ ಅವರಂತಹ ಯುವಶಕ್ತಿಯ ಕೈಯಲ್ಲಿ ಅಧಿಕಾರ ಕೊಟ್ಟು ಸ್ಮಾರ್ಟ್ ಸಿಟಿ ಅನುಷ್ಟಾನಕ್ಕೆ ಬರುವುದನ್ನು ನೋಡಬಹುದು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search