ಗುಜರಾತಿನಲ್ಲಿ 300 ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತಿರುವ ಹಿಂದೆ ಕಾಂಗ್ರೆಸ್ ಕೈವಾಡವಿದೆಯೇ?
ಅಹಮದಾಬಾದ್: ಖಂಡಿತವಾಗಿಯೂ ದೇಶದಲ್ಲಿ ಯಾವುದೇ ವ್ಯಕ್ತಿ ಸ್ವಯಂ ಪ್ರೇರಿತವಾಗಿ ಬೇರೆ ಧರ್ಮಕ್ಕೆ ಮತಾಂತರವಾಗುವ ಎಲ್ಲ ಹಕ್ಕುಗಳೂ ಇವೆ. ಆದರೆ ಗುಜರಾತಿನಲ್ಲಿ ಬರೋಬ್ಬರಿ 300 ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೈವಾಡವಿದೆಯೇ ಎಂಬ ಪ್ರಶ್ನೆ ಹಾಗೂ ಅನುಮಾನ ಮೂಡುತ್ತಿವೆ.
ಹೌದು, ಗುಜರಾತಿನ ಉನಾ ತಾಲೂಕಿನ ಸಂಧಿಯಾ ಎಂಬ ಗ್ರಾಮದಲ್ಲಿ 2016ರಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾದ ಕಾರಣ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಲಿದ್ದಾರೆ. ಆದರೆ ಈ ಪ್ರತಿಭಟನೆಯನ್ನೇ ಕಾಂಗ್ರೆಸ್ ದಾಳವಾಗಿಸಿಕೊಂಡಿದ್ದು, ಸ್ಥಳೀಯ ಮುಖಂಡರನ್ನು ಬಳಸಿಕೊಂಡು ಮತಾಂತರಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಘಟನೆ ನಡೆದು ಈಗ ಎರಡು ವರ್ಷಗಳಾಗಿವೆ. ಗೋರಕ್ಷಣೆ ಹೆಸರಲ್ಲಿ ಹಿಂಸೆ ಮಾಡಕೂಡದು ಎಂದು ಪ್ರಧಾನಿ ನರೇಂದ್ರ ಮೋದಿಯವರೇ ತಿಳಿಸಿದ್ದಾರೆ. ಹೀಗೆ ಹಿಂಸೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮೋದಿ ಅವರು ಎಲ್ಲ ರಾಜ್ಯ ಸರ್ಕಾರಗಳಿಗೂ ಸೂಚಿಸಿದ್ದಾರೆ. ಹಾಗಾಗಿ ಇತ್ತೀಚೆಗೆ ಗೋರಕ್ಷಣೆ ಹೆಸರಿನಲ್ಲಿ ನಡೆದ ಹಿಂಸಾಚಾರ ಪ್ರಕರಣಗಳೂ ಕಡಿಮೆಯಾಗಿವೆ.
ಹೀಗಿರುವಾಗ ಎರಡು ವರ್ಷದ ಹಿಂದೆ ನಡೆದ ಘಟನೆಯನ್ನೇ ಈಗ ಕೆದಕಲಾಗುತ್ತಿದೆ. ಹಾಗೊಂದು ವೇಳೆ ದಲಿತರಿಗೆ ಗೋರಕ್ಷಕರಿಂದ ಅನ್ಯಾಯವಾದರೆ ಪ್ರತಿಭಟಿಸಿ ನ್ಯಾಯ ಪಡೆಯಲಿ. ಅದು ಬಿಟ್ಟು ಏಕಾಏಕಿ ಹಳೇ ಘಟನೆಯನ್ನು ಎದುರಿಟ್ಟುಕೊಂಡು ಸಾಮೂಹಿಕವಾಗಿ ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತಿರುವ ಹಿಂದೆ ಕಾಂಗ್ರೆಸ್ ಸೇರಿ ಹಲವು ಸ್ಥಳೀಯ ಪಕ್ಷಗಳು ಹುನ್ನಾರ ಮಾಡಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದಾಗ್ಯೂ ದೇಶದಲ್ಲಿ ಕ್ರೈಸ್ತ ಮಿಷನರಿಗಳು, ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂ ಮೂಲಭೂತವಾದಿಗಳು ಹಿಂದೂಗಳನ್ನು ಮತಾಂತರಗೊಳಿಸುತ್ತಿರುವ ಬೆನ್ನಲ್ಲೇ ವೋಟಿಗಾಗಿ ರಾಜಕಾರಣಿಗಳು ಮತಾಂತರದ ಅಸ್ತ್ರ ಬಳಸುತ್ತಿದ್ದಾರಾ ಎಂಬ ಪ್ರಶ್ನೆಗಳು ಆತಂಕ ಸೃಷ್ಟಿಸಿವೆ.
Leave A Reply