60 ವರ್ಷ ದೇಶವಾಳಿದ ಕಾಂಗ್ರೆಸ್ ಮಾಡದ ಕೆಲಸವನ್ನು ನರೇಂದ್ರ ಮೋದಿ ನಾಲ್ಕೇ ವರ್ಷದಲ್ಲಿ ಮಾಡಿ ತೋರಿಸಿದ್ದಾರೆ ನೋಡಿ!
ದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನೋಟು ನಿಷೇಧ, ಜಿಎಸ್ಟಿ ಜಾರಿ ಮಾಡಿ ದೇಶದ ಆರ್ಥಿಕ ಸ್ಥಿತಿಯನ್ನು ಔನ್ನತ್ಯಕ್ಕೇರಿಸುತ್ತಿದ್ದಾರೆ. ಪಾಕಿಸ್ತಾನ, ಚೀನಾಕ್ಕೆ ಗುಟುರು ಹಾಕಿ ಭಾರತವೆಂದರೆ ಭಯಪಡುವಂತೆ ಮಾಡಿದ್ದಾರೆ. ಹಲವು ಯೋಜನೆಗಳ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿದ್ದಾರೆ. ವಿದೇಶದಲ್ಲೂ ತಮ್ಮ ಪ್ರಭಾವ ಬೀರಿ ಭಾರತದ ಪ್ರಭೆಯನ್ನು ಆಕಾಶದೆತ್ತರಕ್ಕೆ ಕೊಂಡೊಯುತ್ತಿದ್ದಾರೆ.
ಆದರೆ ಅಭಿವೃದ್ಧಿ ಎಂದರೆ ಕೆಜಿಗೆಷ್ಟು ಎಂದು ಕೇಳುವ ಕಾಂಗ್ರೆಸ್ ಸೇರಿ ಹಲವು ವಿರೋಧಪಕ್ಷಗಳು ಮೋದಿ ಏನೂ ಮಾಡಿಲ್ಲ ಎಂದು ಬೊಬ್ಬೆ ಹಾಕುತ್ತವೆ. ಆದರೂ ಕಾಂಗ್ರೆಸ್ಸನ್ನು ನಂಬದ ಜನ ದೇಶದ 22 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ ನೀಡುವ ಮೂಲಕ ಮೋದಿ ಅವರಿಗೆ ವಿಶ್ವಾಸ ತೋರಿದ್ದಾರೆ.
ಇಂತಹ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು 60 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಮಾಡದ ಕೆಲಸವನ್ನು ಕೇವಲ ನಾಲ್ಕು ವರ್ಷಗಳಲ್ಲೇ ಮಾಡುವ ಮೂಲಕ ತಾವು ಅಭಿವೃದ್ಧಿ ಪರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹೌದು, ದೇಶವನ್ನು ಆರು ದಶಕ ಆಳಿದ್ದ ಕಾಂಗ್ರೆಸ್ ಪ್ರತೀ ಗ್ರಾಮಕ್ಕೂ ವಿದ್ಯುತ್ ಕಲ್ಪಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ಅಭಿವೃದ್ಧಿಯನ್ನು ನಿರ್ಲಕ್ಷಿಸಿತ್ತು.
ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೀನದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಜಾರಿಗೊಳಿಸುವ ಮೂಲಕ ದೇಶದ ಪ್ರತೀ ಗ್ರಾಮಕ್ಕೂ ವಿದ್ಯುತ್ ಸೌಲಭ್ಯ ಕಲ್ಪಿಸುವ ಮಹತ್ತರ ಯೋಜನೆ ಜಾರಿಗೊಳಿಸಿದರು. ಈಗ ಯೋಜನೆ ಶೇಕಡಾ ನೂರಕ್ಕೆ ನೂರರಷ್ಟು ಸಫಲವಾಗಿದ್ದು, ದೇಶದ ಪ್ರತೀ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶನಿವಾರ ಸಂಜೆ ವೇಳೆಗೆ ಮಣಿಪುರದ ಲೇಯಿಸಂಗ್ ಎಂಬ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ದೇಶದ ಪ್ರತಿ ಗ್ರಾಮವೂ ವಿದ್ಯುತ್ ಸಂಪರ್ಕ ಪಡೆದಂತಾಗಿದೆ. ಸರ್ಕಾರದ ಮಾಹಿತಿ ಪ್ರಕಾರ ದೇಶದ 5,97,464 ಗ್ರಾಮಗಳಿಗೂ ವಿದ್ಯುತ್ ನೀಡಲಾಗಿದೆ ಎಂದು ತಿಳಿದುಬಂದಿದೆ.
Leave A Reply