ಆರೆಸ್ಸೆಸ್ ಎಂಬ ದೇಶಭಕ್ತಿ ಸಂಘಟನೆಯ ನೂತನ ಅಭಿಯಾನಕ್ಕೆ ಯುವಕರು ಹೇಗೆ ಬೆಂಬಲಿಸುತ್ತಿದ್ದಾರೆ ಗೊತ್ತಾ?
rರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಎಂದರೇನೇ ಹಾಗೆ. ಅದೊಂದು ದೇಶಭಕ್ತಿ ಹೊಂದಿರುವ ಸಂಘಟನೆ. ಅದು ಯುವಕರಲ್ಲೂ ದೇಶಪ್ರೇಮ ಸಾರುವ, ದೇಶಕ್ಕೆ ಯಾವುದೇ ಗಂಡಾಂತರ ಬಂದರೂ ನೆರವಿಗೆ ಧಾವಿಸುವ, ಶಾಂತಿ-ಸೌಹಾರ್ದತೆ ಮೂಡಿಸುವ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಮೌಲ್ಯಗಳನ್ನು ಬಿತ್ತುವ ಸಂಘಟನೆ.
ಇಂತಹ ಮೌಲ್ಯಯುತ ಸಂಘಟನೆ ಇತ್ತೀಚೆಗೆ ತನ್ನ ವೆಬ್ ಸೈಟಿನಲ್ಲಿ ಜಾಯ್ನ್ ಆರೆರೆಸ್ಸೆಸ್, ಅಂದರೆ ಆರೆಸ್ಸೆಸ್ ಸೇರಿ ಎಂಬ ಅಭಿಯಾನ ಆರಂಭಿಸಿದ್ದು, ದೇಶಾದ್ಯಂತ ಯುವಕರಿಂದ ಉತ್ತಮ ಬೆಂಬಲ ದೊರೆಯುತ್ತಿದೆ.
ಹೌದು, ಆರೆಸ್ಸೆಸ್ ಸೇರಿ ಆನ್ ಲೈನ್ ಅಭಿಯಾನ ಅಭೂತಪೂರ್ವ ಯಶಸ್ಸು ಕಂಡಿದ್ದು, ಯೋಜನೆ ಅಂಗವಾಗಿ ಪ್ರತಿ ತಿಂಗಳು ಸುಮಾರು 10 ಸಾವಿರಕ್ಕೂ ಅಧಿಕ ಯುವಕರು ಸಂಘಟನೆ ಸೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೀಗೆ ಸಂಘಟನೆ ಸೇರಿದ ಯುವಕರಿಗೆ ತಮ್ಮ ತಮ್ಮ ನಗರ, ಪಟ್ಟಣಗಳಲ್ಲಿನ ವಸತಿ ಪ್ರಮುಖ್ ಎಂಬ ಹುದ್ದೆ ನೀಡಿ, ನಿಗದಿತ ಸಮಯಕ್ಕೆ ತಕ್ಕಹಾಗೆ ಸಭೆಗಳನ್ನು ಏರ್ಪಡಿಸಿ ಸಂಘಟನೆ ಬಲಪಡಿಸುವುದು ಅಭಿಯಾನದ ಉದ್ದೇಶವಾಗಿದೆ.
ದೇಶಾದ್ಯಂತ ಯುವಕರನ್ನು ಸಂಘಟನೆಗೆ ಸೆಳೆದು, ಸಣ್ಣ ಸಣ್ಣ ಘಟಕ ನಿರ್ಮಿಸುವ ಮೂಲಕ ಜನರಲ್ಲಿ ಶಾಂತಿ, ಸೌಹಾರ್ದತೆ, ದೇಶಪ್ರೇಮ ಮೂಡಿಸುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಆರೆಸ್ಸೆಸ್ ಈ ಅಭಿಯಾನ ಆರಂಭಿಸಿದೆ. ಇದೇ ಕಾರಣಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬೆಂಬಲ ನೀಡುತ್ತಿದ್ದಾರೆ.
Leave A Reply